ನವಗ್ರಹ ಖ್ಯಾತಿಯ ಧರ್ಮ ಕೀರ್ತಿರಾಜ್ ಈಗ ಹೀರೋ
ಕೊರೊನಾ ಮೊದಲನೇ ಅಲೆ ಆರಂಭ ಆಗುವುದಕ್ಕೂ ಮುನ್ನವೇ ಈ ಸಿನಿಮಾ ಸೆಟ್ಟೇರಿತ್ತು. ಆದರೆ ಕೊವಿಡ್ ಲಾಕ್ಡೌನ್ ಕಾರಣದಿಂದ ಕೆಲಸಗಳು ವಿಳಂಬ ಆದವು.
‘ನವಗ್ರಹ’ ಸಿನಿಮಾ ಹಿಟ್ ಆಗಿತ್ತು. ಈ ಚಿತ್ರದ ಮೂಲಕ ನಟ ಧರ್ಮ ಕೀರ್ತಿರಾಜ್ ಅವರಿಗೂ ದೊಡ್ಡ ಖ್ಯಾತಿ ಸಿಕ್ಕಿತ್ತು. ಈಗ ಅವರು ‘ಸುಮನ್’ ಶೀರ್ಷಿಕೆಯ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಮೇಲೆ ಅವರು ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿನಿಮಾ ಬಗ್ಗೆ ಮಾಹಿತಿ ನೀಡಿರುವ ಅವರು, ‘ಚಿತ್ರದಲ್ಲಿ ಐದು ಫೈಟ್ ಇದೆ. ನಾಲ್ಕು ಸಾಂಗ್ ಇದೆ. ಮೂರು ಹೀರೋಯಿನ್ಗಳು ಇದ್ದಾರೆ. ನನಗೆ ಸಿಕ್ಕಿರುವ ಪಾತ್ರ ಚೆನ್ನಾಗಿದೆ. ಒಳ್ಳೆಯ ಟೀಂ ಜತೆ ಕೆಲಸ ಮಾಡಿದ ಖುಷಿ ಇದೆ. ಬೇರೆಬೇರೆ ಲೊಕೇಷನ್ಗಳಲ್ಲಿ ಶೂಟ್ ಮಾಡಲಾಗಿದೆ’ ಎಂದು ಮಾಹಿತಿ ಹಂಚಿಕೊಂಡರು. ಕೊರೊನಾ ಮೊದಲನೇ ಅಲೆ ಆರಂಭ ಆಗುವುದಕ್ಕೂ ಮುನ್ನವೇ ಈ ಸಿನಿಮಾ ಸೆಟ್ಟೇರಿತ್ತು. ಆದರೆ ಕೊವಿಡ್ ಲಾಕ್ಡೌನ್ ಕಾರಣದಿಂದ ಕೆಲಸಗಳು ವಿಳಂಬ ಆದವು.
ಇದನ್ನೂ ಓದಿ: ನಂದಕಿಶೋರ್, ಧರ್ಮ ಕೀರ್ತಿರಾಜ್ ಫ್ರೆಂಡ್ಶಿಪ್ ಮೆಲುಕು; ಗೆಳೆಯನ ಚಿತ್ರಕ್ಕೆ ‘ಪೊಗರು’ ಡೈರೆಕ್ಟರ್ ಸಾಥ್