Salman Khan: ಸಲ್ಮಾನ್- ಸಮಂತಾ ಜತೆಯಿರುವ ಚಿತ್ರಗಳು ವೈರಲ್; ಏನಿದು ಸಮಾಚಾರ?

Samantha Lockwood: ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತೆ ರಿಲೇಶನ್​ಶಿಪ್ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರ ಹೆಸರು ಸಮಂತಾ ಲಾಕ್​ವುಡ್ ಅವರೊಂದಿಗೆ ಥಳುಕು ಹಾಕಿಕೊಂಡಿದೆ. ಆದರೆ ನಟಿ ಹೇಳಿದ್ದೇನು?

ಸಲ್ಮಾನ್ ಖಾನ್ ಹಾಗೂ ಅಮೇರಿಕಾ ಮೂಲದ ನಟಿ, ಮಾಡೆಲ್ ಸಮಂತಾ ಲಾಕ್​ವುಡ್ ಸದ್ಯ ಸಖತ್ ಸುದ್ದಿಯಾಗಿದ್ದಾರೆ. ಈರ್ವರೂ ಜತೆಯಿರುವ ಚಿತ್ರಗಳು ವೈರಲ್ ಆಗಿದೆ. ಸಲ್ಮಾನ್ ಹುಟ್ಟುಹಬ್ಬದಲ್ಲಿ ಸಮಂತಾ ಕೂಡ ಭಾಗಿಯಾಗಿದ್ದರು. ಇದು ಗಾಸಿಪ್​ಗಳಿಗೆ ಮತ್ತಷ್ಟು ಇಂಬು ಕೊಟ್ಟಿತ್ತು. ಇದರಿಂದ ಬಾಲಿವುಡ್​ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿರುವ ಸಲ್ಮಾನ್​ ಇನ್ನಾದರೂ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರಾ ಎಂದು ಅಭಿಮಾನಿಗಳ ಪ್ರಶ್ನಿಸಿದ್ದರು. ಇನ್ನಾದರೂ ಸಲ್ಮಾನ್ ರಿಲೇಶನ್​ಶಿಪ್ ವಿಚಾರದಲ್ಲಿ ಮತ್ತೊಂದು ಹಂತಕ್ಕೆ ತಲುಪಲಿದ್ದಾರೆ ಎಂಬುದು ಅವರ ನಿರೀಕ್ಷೆಯಾಗಿತ್ತು. ಆದರೆ ಸಮಂತಾ ಲಾಕ್​ವುಡ್​ ಈ ಕುರಿತು ಮಾತನಾಡಿ ಅಭಿಮಾನಿಗಳ ನಿರೀಕ್ಷೆ ತಲೆಕೆಳಗು ಮಾಡಿದ್ದಾರೆ.

‘‘ನೀವಂದುಕೊಂಡಂತೆ ಏನೂ ಇಲ್ಲ. ನಾನು ಹೃತಿಕ್ ರೋಶನ್ ಅವರನ್ನೂ ಭೇಟಿಯಾಗಿದ್ದೆ. ಎಲ್ಲರೂ ಉತ್ತಮ ವ್ಯಕ್ತಿಗಳು’’ ಎನ್ನುವ ಮೂಲಕ ಸಮಂತಾ ಗಾಸಿಪ್​ಗಳಿಗೆ ತೆರೆ ಎಳೆದಿದ್ದಾರೆ. ಈ ಕುರಿತು ಸಲ್ಮಾನ್ ಉತ್ತರಿಸುವ ಗೋಜಿಗೇ ಹೋಗಿಲ್ಲ. ಸುಮ್ಮನುಳಿದುಬಿಟ್ಟಿದ್ದಾರೆ. ಈ ಸುದ್ದಿ ಇಲ್ಲಿಗೇ ನಿಲ್ಲುತ್ತದಾ? ಅಥವಾ ಮತ್ತೇನಾದರೂ ಹೊಸ ಸಮಾಚಾರ ಸಿಗುತ್ತದಾ ಎಂದು ಸಲ್ಲು ಅಭಿಮಾನಿಗಳು ಕಾದು ಕುಳಿತಿದ್ದಾರೆ.

ಇದನ್ನೂ ಓದಿ:

Alia Bhatt: ಜ್ಯೂ.ಎನ್​ಟಿಆರ್ ಜತೆ ಮತ್ತೆ ತೆರೆ ಹಂಚಿಕೊಳ್ಳಲಿದ್ದಾರಾ ಆಲಿಯಾ ಭಟ್?

Pushpa The Rise: ರಶ್ಮಿಕಾರಂತೆ ಹೆಜ್ಜೆಹಾಕಿ ಎಲ್ಲರನ್ನೂ ದಂಗಾಗಿಸಿದ ಸ್ಪೈಡರ್​ಮ್ಯಾನ್! ಇಲ್ಲಿದೆ ವಿಡಿಯೋ ಸಾಕ್ಷಿ 

Click on your DTH Provider to Add TV9 Kannada