AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pushpa The Rise: ರಶ್ಮಿಕಾರಂತೆ ಹೆಜ್ಜೆಹಾಕಿ ಎಲ್ಲರನ್ನೂ ದಂಗಾಗಿಸಿದ ಸ್ಪೈಡರ್​ಮ್ಯಾನ್! ಇಲ್ಲಿದೆ ವಿಡಿಯೋ ಸಾಕ್ಷಿ 

Allu Arjun | Rashmika Mandanna: ‘ಪುಷ್ಪ: ದಿ ರೈಸ್’ ಚಿತ್ರದ ‘ಸಾಮಿ ಸಾಮಿ’ ಹಾಡು ಸಖತ್ ಟ್ರೆಂಡ್ ಹುಟ್ಟುಹಾಕಿದೆ. ಇದೀಗ ಹಾಲಿವುಡ್ ಸೂಪರ್​ ಹೀರೋ ಸ್ಪೈಡರ್​ಮ್ಯಾನ್ ಕೂಡ ಈ ಹಾಡಿಗೆ ಮಸ್ತ್ ಸ್ಟೆಪ್ ಹಾಕಿದ್ದಾರೆ! ಹೇಗೆ ಅಂತೀರಾ?

Pushpa The Rise: ರಶ್ಮಿಕಾರಂತೆ ಹೆಜ್ಜೆಹಾಕಿ ಎಲ್ಲರನ್ನೂ ದಂಗಾಗಿಸಿದ ಸ್ಪೈಡರ್​ಮ್ಯಾನ್! ಇಲ್ಲಿದೆ ವಿಡಿಯೋ ಸಾಕ್ಷಿ 
ಸ್ಪೈಡರ್​​ಮ್ಯಾನ್ ವೇಷಧಾರಿ ನೃತ್ಯ ಮಾಡುತ್ತಿರುವುದು (ಎಡ), ಮೂಲ ಹಾಡಿನಲ್ಲಿ ರಶ್ಮಿಕಾ (ಬಲ)
TV9 Web
| Updated By: shivaprasad.hs|

Updated on: Jan 11, 2022 | 2:49 PM

Share

ಅಲ್ಲು ಅರ್ಜುನ್ (Allu Arjun) ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ: ದಿ ರೈಸ್’ (Pushpa: The Rise) ಚಿತ್ರ ಬಾಕ್ಸಾಫೀಸ್​ನಲ್ಲಿ ಜಯಭೇರಿ ಬಾರಿಸಿದೆ. ವಿಶ್ವಾದ್ಯಂತ ಬರೋಬ್ಬರಿ ₹ 326 ಕೋಟಿ ಕಲೆಕ್ಷನ್ ಮಾಡಿರುವ ಚಿತ್ರ, ಹಿಂದಿಯಲ್ಲಿ ಈಗಲೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಆದರೆ ಇತ್ತೀಚೆಗೆ ವೈರಲ್ ಆದ ವಿಡಿಯೋ ನೋಡಿದರೆ, ಕೇವಲ ಫ್ಯಾನ್ಸ್ ಮಾತ್ರ ಚಿತ್ರದ ಯಶಸ್ಸಿನಿಂದ ಖುಷಿಪಟ್ಟಿಲ್ಲ; ಹಾಲಿವುಡ್ ಸೂಪರ್ ಹೀರೋಗಳೂ ಥ್ರಿಲ್ ಆಗಿದ್ದಾರೆ ಎನ್ನುವುದು ಸಾಬೀತಾಗುತ್ತದೆ. ಹೌದು. ಸ್ಪೈಡರ್​ಮ್ಯಾನ್ (Spider Man) ವೇಷ ತೊಟ್ಟ ವ್ಯಕ್ತಿ ‘ಪುಷ್ಪ’ ಚಿತ್ರದ ಸೂಪರ್ ಹಿಟ್ ಹಾಡು ‘ಸಾಮಿ ಸಾಮಿ’ಯ (Saami Saami) ಹೆಜ್ಜೆಗಳನ್ನು ಅನುಕರಿಸಿದ್ದಾನೆ. ಅದಕ್ಕೆ ಎದುರು ನಿಂತ ಸಾಂತಾಕ್ಲಾಸ್ ವೇಷಧಾರಿಗಳೂ ಸಖತ್ ಸಾಥ್ ನೀಡಿದ್ದಾರೆ. ಅಲ್ಲು ಅರ್ಜುನ್ ಕಿರಿಯ ಸಹೋದರ ಅಲ್ಲು ಸಿರೀಶ್ (Allu Siirish) ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಅದೀಗ ವೈರಲ್ ಆಗಿದೆ.

ಸ್ಪೈಡರ್​ಮ್ಯಾನ್ ಹಾಗೂ ಅಲ್ಲು ಅರ್ಜುನ್ ಫ್ಯಾನ್ ಆದ ತಮಗೆ ಈ ವಿಡಿಯೋ ನೋಡಿ ಸಖತ್ ಖುಷಿಯಾಗಿದೆ ಎಂದು ಸಂಭ್ರಮ ಹಂಚಿಕೊಂಡಿದ್ದಾರೆ ಅಲ್ಲು ಸಿರೀಶ್. ‘‘ಸ್ಪೈಡರ್​ಮ್ಯಾನ್ ಪುಷ್ಪದ ರಾ ರಾ ಸಾಮಿ ಹಾಡಿಗೆ ನೃತ್ಯ ಮಾಡುತ್ತಿದ್ದಾನೆ. ಅಲ್ಲು ಅರ್ಜುನ್ ಹಾಗೂ ಸ್ಪೈಡರ್​ಮ್ಯಾನ್ ಫ್ಯಾನ್ ಆದ ನನಗೆ.. ವಾವ್ ಎನಿಸುತ್ತದೆ! ಇದು ಇಂಡಿಯಾ ಬಾಸ್! ಸ್ಪೈಡರ್​ಮ್ಯಾನ್- ಬಹಳ ಒಳ್ಳೆಯ ನೃತ್ಯ’’ ಎಂದು ಕ್ಯಾಪ್ಶನ್ ನೀಡಿದ್ದಾರೆ ಅಲ್ಲು ಸಿರೀಶ್.

ವೈರಲ್ ಆದ ವಿಡಿಯೋ ಇಲ್ಲಿದೆ:

‘ಪುಷ್ಪ’ ಚಿತ್ರ ಡಿಸೆಂಬರ್ 17ರಂದು ತೆರೆಕಂಡಿತ್ತು. ಅದೇ ವಾರ ‘ಸ್ಪೈಡರ್​ಮ್ಯಾನ್ ನೋ ವೇ ಹೋಮ್’ ಕೂಡ ಭಾರತದಲ್ಲಿ ತೆರೆಕಂಡಿತ್ತು. ಎರಡೂ ಚಿತ್ರಗಳು ಉತ್ತಮವಾಗಿ ಗಳಿಕೆ ಮಾಡಿವೆ. ‘ಪುಷ್ಪ’ದ ಹಿಂದಿ ಅವತರಣಿಕೆ ಸುಮಾರು ₹ 80 ಕೋಟಿ ಗಳಿಸಿದೆ. ಅಚ್ಚರಿಯ ವಿಚಾರವೆಂದರೆ ಇದು ಸಲ್ಮಾನ್ ನಟನೆಯ ‘ಅಂತಿಮ್: ದಿ ಫೈನಲ್ ಟ್ರುಥ್’ ಚಿತ್ರದ ಗಳಿಕೆಗಿಂತ ಹೆಚ್ಚು! ‘ಪುಷ್ಪ’ ಚಿತ್ರದ ಹಿಂದಿ ಯಶಸ್ಸು ಅಲ್ಲು ಅರ್ಜುನ್​ಗೆ ಬಾಲಿವುಡ್ ಬಾಗಿಲು ತೆಗೆಯುವಂತೆ ಮಾಡಿದೆ ಎಂದು ಹಲವು ವರದಿಗಳು ಹೇಳಿವೆ. ಈ ಕುರಿತು ಅಲ್ಲು ಅರ್ಜುನ್ ಮಾತನಾಡುತ್ತಾ, ‘ನಾಯಕನಾಗಿ ಪಾತ್ರ ಬಂದರೆ ಮಾತ್ರ ಒಪ್ಪಿಕೊಳ್ಳುತ್ತೇನೆ. ಬೇರೆ ಪಾತ್ರದಲ್ಲಿ ಕಾಣಿಸಿಕೊಳ್ಳುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದರು.

ಸದ್ಯ ಅಮೆಜಾನ್ ಪ್ರೈಮ್​ನಲ್ಲೂ ‘ಪುಷ್ಪ: ದಿ ರೈಸ್’ ಉತ್ತಮ ಪ್ರದರ್ಶನ ಕಾಣುತ್ತಿದೆ. ಓಟಿಟಿಯಲ್ಲಿ ಹಿಂದಿ ಅವತರಣಿಕೆಯು ಜನವರಿ 14ರಂದು ತೆರೆಕಾಣಲಿದೆ.

ಇದನ್ನೂ ಓದಿ:

Samantha: ಮನೆಗೆ ಕನ್ನ ಹಾಕಲು ಬಂದ ಅಕ್ಷಯ್​ಗೆ ತಕ್ಕ ಶಾಸ್ತಿ ಮಾಡಿದ ಸಮಂತಾ!; ಹೇಗೆ? ಮಜವಾದ ವಿಡಿಯೋ ನೋಡಿ

Sunny Leone: ಮಾಲ್ಡೀವ್ಸ್​ನಲ್ಲಿ ಸನ್ನಿ ಲಿಯೋನ್​; ಇಲ್ಲಿವೆ ಅವರ ಹಾಟ್​ ಫೋಟೋಗಳು

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!