ಚಿತ್ರರಂಗದ ಅನಿಶ್ಚಿತತೆ ನಡುವೆ ಹೊಸ ಸಾಹಸಕ್ಕೆ ಮುಂದಾದ ಅಕ್ಕಿನೇನಿ ನಾಗಾರ್ಜುನ-ನಾಗ ಚೈತನ್ಯ

ಚಿತ್ರರಂಗಕ್ಕೆ ಕೊರೊನಾ (CoronaVirus) ವಕ್ರದೃಷ್ಟಿ ತಾಗಿದೆ. ಕೊರೊನಾ ವೈರಸ್​ ಹೆಚ್ಚುತ್ತಿರುವುದರಿಂದ ಯಾರೊಬ್ಬರೂ ಸಿನಿಮಾ ರಿಲೀಸ್​ ಮಾಡೋಕೆ ಮುಂದೆ ಬರುತ್ತಿಲ್ಲ. ಸ್ಟಾರ್​ ನಟರ ಚಿತ್ರಗಳು ಈಗಾಗಲೇ ರಿಲೀಸ್​ ದಿನಾಂಕವನ್ನು ಮುಂದೂಡಿ, ಸುಮ್ಮನೆ ಕೂತಿವೆ. ಆದರೆ, ಅಕ್ಕಿನೇನಿ ನಾಗಾರ್ಜುನ (Akkineni Nagarjun) ತಂಡ ಮಾತ್ರ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದೆ. ಅವರ ನಟನೆಯ ‘ಬಂಗಾರ್ರಾಜು’ ಚಿತ್ರ (Bangarraju  Movie) ಜನವರಿ 15ರಂದು ತೆರೆಗೆ ಬರುತ್ತಿದೆ. ಕೊವಿಡ್ ಹೆಚ್ಚುತ್ತಿರುವುದರಿಂದ ಚಿತ್ರರಂಗದಲ್ಲಿ ಅನಿಶ್ಚಿತತೆ ಎದುರಾಗಿದೆ. ಹೀಗಾಗಿ, ಈ ಸಿನಿಮಾ ರಿಲೀಸ್​ ದಿನಾಂಕ ಮುಂದೂಡಲ್ಪಡಬಹುದು […]

ಚಿತ್ರರಂಗದ ಅನಿಶ್ಚಿತತೆ ನಡುವೆ ಹೊಸ ಸಾಹಸಕ್ಕೆ ಮುಂದಾದ ಅಕ್ಕಿನೇನಿ ನಾಗಾರ್ಜುನ-ನಾಗ ಚೈತನ್ಯ
ಬಂಗಾರ್ರಾಜು ತಂಡ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jan 11, 2022 | 11:07 AM

ಚಿತ್ರರಂಗಕ್ಕೆ ಕೊರೊನಾ (CoronaVirus) ವಕ್ರದೃಷ್ಟಿ ತಾಗಿದೆ. ಕೊರೊನಾ ವೈರಸ್​ ಹೆಚ್ಚುತ್ತಿರುವುದರಿಂದ ಯಾರೊಬ್ಬರೂ ಸಿನಿಮಾ ರಿಲೀಸ್​ ಮಾಡೋಕೆ ಮುಂದೆ ಬರುತ್ತಿಲ್ಲ. ಸ್ಟಾರ್​ ನಟರ ಚಿತ್ರಗಳು ಈಗಾಗಲೇ ರಿಲೀಸ್​ ದಿನಾಂಕವನ್ನು ಮುಂದೂಡಿ, ಸುಮ್ಮನೆ ಕೂತಿವೆ. ಆದರೆ, ಅಕ್ಕಿನೇನಿ ನಾಗಾರ್ಜುನ (Akkineni Nagarjun) ತಂಡ ಮಾತ್ರ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದೆ. ಅವರ ನಟನೆಯ ‘ಬಂಗಾರ್ರಾಜು’ ಚಿತ್ರ (Bangarraju  Movie) ಜನವರಿ 15ರಂದು ತೆರೆಗೆ ಬರುತ್ತಿದೆ. ಕೊವಿಡ್ ಹೆಚ್ಚುತ್ತಿರುವುದರಿಂದ ಚಿತ್ರರಂಗದಲ್ಲಿ ಅನಿಶ್ಚಿತತೆ ಎದುರಾಗಿದೆ. ಹೀಗಾಗಿ, ಈ ಸಿನಿಮಾ ರಿಲೀಸ್​ ದಿನಾಂಕ ಮುಂದೂಡಲ್ಪಡಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅದನ್ನು ಚಿತ್ರತಂಡ ಸುಳ್ಳು ಮಾಡಿದೆ. ಜನವರಿ 15ರಂದೇ ಚಿತ್ರ ರಿಲೀಸ್​ ಆಗುತ್ತಿದೆ. ಅಕ್ಕಿನೇನಿ ನಾಗಾರ್ಜುನ ತಂಡದ ನಿರ್ಧಾರಕ್ಕೆ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ.

‘ಬಂಗಾರ‍್ರಾಜು’ ಸಿನಿಮಾದಲ್ಲಿ ಅಕ್ಕಿನೇನಿ ನಾಗಾರ್ಜುನ ಹಾಗೂ ನಾಗ ಚೈತನ್ಯ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ರಮ್ಯಾ ಕೃಷ್ಣ ಹಾಗೂ ಕೃತಿ ಶೆಟ್ಟಿ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಇಡೀ ತಂಡ ಪ್ರಚಾರ ಕಾರ್ಯದಲ್ಲಿ ಭಾಗವಹಿಸುತ್ತಿದೆ. ಇಷ್ಟೊಂದು ಅಡೆತಡೆ ನಡುವೆಯೂ ಸಿನಿಮಾ ರಿಲೀಸ್​ ಮಾಡುತ್ತಿರುವುದು ಏಕೆ ಎನ್ನುವ ಬಗ್ಗೆ ನಾಗಾರ್ಜುನ ಮಾತನಾಡಿದ್ದಾರೆ.

‘ನಮ್ಮ ‘ಬಂಗಾರ‍್ರಾಜು’ ಪೊಂಗಲ್ ಹಬ್ಬದ ಸಿನಿಮಾ ಎಂದು ನಾನು ಯಾವಾಗಲೂ ನಂಬಿದ್ದೇನೆ. ಹಬ್ಬದ ಸಮಯದಲ್ಲಿ ಎಲ್ಲರೂ ಕುಳಿತು ಒಟ್ಟಾಗಿ ಸಿನಿಮಾ ನೋಡುತ್ತಾರೆ. ಇದು ನಮ್ಮ ಸಿನಿಮಾಗೆ ಪ್ಲಸ್​ ಪಾಯಿಂಟ್​ ಆಗಲಿದೆ. ಚಿತ್ರಮಂದಿರದಲ್ಲಿ ಪ್ರೇಕ್ಷಕರು ಈ ಸಿನಿಮಾವನ್ನು ಒಮ್ಮೆಯಾದರೂ ನೋಡುತ್ತಾರೆ ಎನ್ನುವ ನಂಬಿಕೆ ನನಗೆ ಇದೆ’ ಎಂದಿದ್ದಾರೆ ಅಕ್ಕಿನೇನಿ ನಾಗಾರ್ಜುನ.

ಟೀಕೆಗೆ ಒಳಗಾಗಿದ್ದ ಅಕ್ಕಿನೇನಿ ನಾಗಾರ್ಜುನ

ಸಿನಿಮಾ ​ ಟಿಕೆಟ್​ ವಿಚಾರದಲ್ಲಿ ಆಂಧ್ರ ಪ್ರದೇಶದಲ್ಲಿ ಹೊಸ ನಿಯಮ ಜಾರಿಗೆ ಬಂದಿದೆ. ಸಿನಿಮಾ ಟಿಕೆಟ್​ಗೆ ಸರ್ಕಾರ ದರ ನಿಗದಿ ಮಾಡಿದೆ. ನಗರ ವ್ಯಾಪ್ತಿಯಲ್ಲಿ ಇರುವ ಮಲ್ಟಿಪ್ಲೆಕ್ಸ್​ಗಳಗೆ ಟಿಕೆಟ್​ ಮೊತ್ತ 75 ರೂಪಾಯಿ ಕನಿಷ್ಠ ಹಾಗೂ 250 ಗರಿಷ್ಟ ಮೊತ್ತ ನಿಗದಿ ಮಾಡಿದೆ. ಎಸಿ ಹಾಗೂ ಎಸಿ ರಹಿತ ಚಿತ್ರಮಂದಿರಗಳ ಟಿಕೆಟ್​ ದರ 20-100 ರೂ ಅಂತರದಲ್ಲಿ ಇರಬೇಕು. ಪಂಚಾಯತ್​ ಭಾಗದಲ್ಲಿ ಟಿಕೆಟ್ ಕನಿಷ್ಠ ದರ 20 ರೂಪಾಯಿಗೂ ಕಡಿಮೆ ಇದೆ. ಇದು ಸಿನಿಮಾ ಕಲೆಕ್ಷನ್​ಗೆ ಹೊಡೆತ ನೀಡುತ್ತಿದೆ. ಇದಕ್ಕೆ ನಾಗಾರ್ಜುನ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ.

ಪವನ್ ಕಲ್ಯಾಣ್‌ ಅವರಿಂದ ಹಿಡಿದು ನಾನಿವರೆಗೆ, ನಾರಾಯಣ ಮೂರ್ತಿಯಿಂದ ಹಿಡಿದು ರಾಮ್ ಗೋಪಾಲ್ ವರ್ಮಾವರೆಗೆ ಎಲ್ಲರೂ ಆಂಧ್ರ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಚಿರಂಜೀವಿ ಅವರು ಸರ್ಕಾರದ ಜತೆ ಮಾತುಕತೆ ನಡೆಸಲು ತಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಮೋಹನ್ ಬಾಬು ಅವರು ಒಗ್ಗಟ್ಟಾಗಿರಲು ಮತ್ತು ಟಿಕೆಟ್ ದರದ ಸಮಸ್ಯೆಯನ್ನು ಪರಿಹರಿಸುವಂತೆ ಸರ್ಕಾರಕ್ಕೆ ಪತ್ರವೊಂದನ್ನು ಬರೆದಿದ್ದಾರೆ. ಆದರೆ, ನಾಗಾರ್ಜುನ ಭಿನ್ನ ನಿಲುವು ತಾಳಿದ್ದರು.

‘ಈ ದರದಿಂದ ನಮ್ಮ ಸಿನಿಮಾಗೆ ಯಾವುದೇ ತೊಂದರೆ ಆಗುವುದಿಲ್ಲ’ ಎಂದಿದ್ದರು. ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡುತ್ತಿರುವಾಗ ಈ ರೀತಿ ಹೇಳಿಕೆ ನೀಡೋದು ಸರಿಯಲ್ಲ ಎನ್ನುವ ಮಾತು ಕೇಳಿ ಬಂದಿತ್ತು. ಇದರಲ್ಲಿ ನಾಗಾರ್ಜುನ ಅವರ ಸ್ವಾರ್ಥ ಇದೆ ಎಂದು ಕೆಲವರು ಹೇಳಿದ್ದರು.

ಇದನ್ನೂ ಓದಿ:  

ಸಮಂತಾ ದೂರಾದ ಬಳಿಕ ನಾಗ ಚೈತನ್ಯ ಜತೆ ಖಾಸಗಿ ವಿಮಾನದಲ್ಲಿ ಕಾಣಿಸಿಕೊಂಡ ಈ ಸುಂದರಿ ಯಾರು?

Published On - 9:50 am, Tue, 11 January 22

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್