ಸೆಲೆಬ್ರಿಟಿಗಳನ್ನೂ ಹುಚ್ಚೆಬ್ಬಿಸಿದ ಸಮಂತಾ ಸಾಂಗ್​; ಮಾದಕ ಅವತಾರದಲ್ಲಿ ಸಂಜೀದಾ ಶೇಖ್​ ಪೋಸ್​

ಸಂಜೀದಾ ಶೇಖ್ ಅವರು ಡಿವೋರ್ಸ್​ ಪಡೆದ ನಂತರವೇ ಈ ರೀತಿ ಹಾಟ್​ ಅವತಾರವನ್ನು ತಾಳಿದ್ದಾರೆ ಎಂದು ಜನರು ಕಮೆಂಟ್​ ಮಾಡುತ್ತಿದ್ದಾರೆ. ಸಮಂತಾ ಅವರ ಆಯ್ಕೆಗಳು ಕೂಡ ಹಾಗೆಯೇ ಇವೆ.

ಸೆಲೆಬ್ರಿಟಿಗಳನ್ನೂ ಹುಚ್ಚೆಬ್ಬಿಸಿದ ಸಮಂತಾ ಸಾಂಗ್​; ಮಾದಕ ಅವತಾರದಲ್ಲಿ ಸಂಜೀದಾ ಶೇಖ್​ ಪೋಸ್​
ಸಂಜೀದಾ ಶೇಖ್

ಇನ್​ಸ್ಟಾಗ್ರಾಮ್​ ರೀಲ್ಸ್​ನಲ್ಲಿ ‘ಪುಷ್ಪ’ ಸಿನಿಮಾದ ಹಾಡುಗಳು ರಾರಾಜಿಸುತ್ತಿವೆ. ‘ಊ ಅಂಟಾವಾ ಮಾವ.. ಊಊ ಅಂಟಾವಾ ಮಾವ’ (Oo Antava Mava Song) ಎನ್ನುತ್ತ ಲಕ್ಷಾಂತರ ಮಂದಿ ರೀಲ್ಸ್​ ಮಾಡುತ್ತಿದ್ದಾರೆ. ಸಮಂತಾ (Samantha) ಅಭಿಮಾನಿಗಳಂತೂ ಈ ಹಾಡಿಗೆ ಫುಲ್​ ಫಿದಾ ಆಗಿದ್ದಾರೆ. ವಿಚ್ಛೇದನದ ಬಳಿಕ ಸಮಂತಾಗೆ ಸಿಕ್ಕ ದೊಡ್ಡ ಯಶಸ್ಸು ಇದು. ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್​ ಅವರ ಬತ್ತಳಿಕೆಯಿಂದ ಬಂದ ಈ ಹಾಡಿಗೆ ಅನೇಕ ಸೆಲೆಬ್ರಿಟಿಗಳು ಕೂಡ ಮರುಳಾಗಿದ್ದಾರೆ. ‘ಊ ಅಂಟಾವಾ ಮಾವ..’ ಹಾಡಿಗೆ ಹಲವು ನಟಿಯರು ಡ್ಯಾನ್ಸ್​ ಮಾಡುದ್ದಾರೆ. ಆ ವಿಡಿಯೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ. ಅಂಥ ನಟಿಯರ ಸಾಲಿಗೆ ಲೇಟೆಸ್ಟ್​ ಆಗಿ ಸೇರ್ಪಡೆ ಆಗಿರುವುದು ಸಂಜೀದಾ ಶೇಖ್​. ಹಿಂದಿ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಫೇಮಸ್​ ಆಗಿರುವ ಸಂಜೀದಾ ಶೇಖ್ (Sanjeeda Sheikh) ಅವರು ಇತ್ತೀಚೆಗೆ ತಮ್ಮ ಬೋಲ್ಡ್​ ಅವತಾರದ ಮೂಲಕ ಎಲ್ಲರ ಕಣ್ಣು ಕುಕ್ಕುತ್ತಿದ್ದಾರೆ. ಈಗ ಅವರು ಹಂಚಿಕೊಂಡಿರುವ ವಿಡಿಯೋ ಬಗ್ಗೆ ಅವರ ಅಭಿಮಾನಿಗಳ ವಲಯದಲ್ಲಿ ಚರ್ಚೆ ಆಗುತ್ತಿದೆ. ಕೆಲವರು ನೆಗೆಟಿವ್​ ಕಮೆಂಟ್​ ಕೂಡ ಮಾಡಿದ್ದಾರೆ.

ಸಂಜೀದಾ ಶೇಖ್ ಪೋಸ್ಟ್​ ಮಾಡಿರುವ ಈ ವಿಡಿಯೋ ಕೆಲವೇ ಗಂಟೆಗಳಲ್ಲಿ 9 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಸಂಜೀದಾ ಶೇಖ್ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ 44 ಲಕ್ಷಕ್ಕೂ ಹೆಚ್ಚು ಜನರು ಫಾಲೋ ಮಾಡುತ್ತಾರೆ. ಕೆಲವರಿಗೆ ಈ ವಿಡಿಯೋ ಇಷ್ಟ ಆಗಿದ್ದರೆ, ಇನ್ನೂ ಕೆಲವರಿಗೆ ಹಿಡಿಸಿಲ್ಲ. ಅವರು ಮಾದಕವಾದ ಬಟ್ಟೆ ಧರಿಸಿರುವುದನ್ನು ಕೆಲವರು ವಿರೋಧಿಸಿದ್ದಾರೆ.

ಸಮಂತಾ ರೀತಿಯೇ ಸಂಜೀದಾ ಶೇಖ್ ಕೂಡ ವಿಚ್ಛೇದನ ಪಡೆದುಕೊಂಡಿದ್ದಾರೆ. ನಟ ಆಮಿರ್​ ಅಲಿ ಜೊತೆ ಅವರು 9 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರಿಬ್ಬರ ನಡುವೆ ವೈಮನಸ್ಸು ಮೂಡಲು ಆರಂಭಿಸಿತ್ತು. ಹಾಗಾಗಿ ಅವರಿಬ್ಬರೂ ಪರಸ್ಪರ ದೂರವಾಗಿ ವಾಸಿಸುತ್ತಿದ್ದರು. ಕೆಲವೇ ದಿನಗಳ ಹಿಂದೆ ಡಿವೋರ್ಸ್​ ಪಡೆಯುವ ಮೂಲಕ ತಮ್ಮ ದಾಂಪತ್ಯ ಜೀವನಕ್ಕೆ ಪೂರ್ಣ ವಿರಾಮ ಇಟ್ಟಿದ್ದಾರೆ. ಈ ಜೋಡಿಗೆ ಆಯ್ರಾ ಅಲಿ ಎಂಬ ಹೆಣ್ಣು ಮಗು ಇದೆ. ತಮ್ಮ ವಿಚ್ಛೇದನದ ಬಗ್ಗೆ ಸಂಜೀದಾ ಶೇಖ್ ಮತ್ತು ಆಮಿರ್​ ಅಲಿ ಸಾರ್ವಜನಿಕವಾಗಿ ಮಾತನಾಡಿಲ್ಲ.

ಸಂಜೀದಾ ಶೇಖ್ ಅವರು ಡಿವೋರ್ಸ್​ ಪಡೆದ ನಂತರವೇ ಈ ರೀತಿ ಹಾಟ್​ ಅವತಾರವನ್ನು ತಾಳಿದ್ದಾರೆ ಎಂದು ಜನರು ಕಮೆಂಟ್​ ಮಾಡುತ್ತಿದ್ದಾರೆ. ಸಮಂತಾ ಕೂಡ ನಾಗ ಚೈತನ್ಯ ಅವರಿಂದ ದೂರಾದ ಬಳಿಕ ಬೋಲ್ಡ್​ ಪಾತ್ರಗಳನ್ನು ಒಪ್ಪಿಕೊಳ್ಳಲು ಆರಂಭಿಸಿದರು.

ಇದನ್ನೂ ಓದಿ:

ಸಲ್ಮಾನ್​ ಖಾನ್​ ಹೊಸ ಗರ್ಲ್​ಫ್ರೆಂಡ್​ ಸಮಂತಾ; ಆದ್ರೆ ಇದು ನೀವಂದುಕೊಂಡ ಸಮಂತಾ ಅಲ್ಲ

ಮಾನಸಿಕ ಆರೋಗ್ಯ ಕೆಟ್ಟರೆ ಏನು ಮಾಡಬೇಕು? ಅಭಿಮಾನಿಗಳಿಗೆ ವಿಶೇಷ ಟಿಪ್ಸ್​ ನೀಡಿದ ಸಮಂತಾ

Published On - 11:57 am, Sat, 15 January 22

Click on your DTH Provider to Add TV9 Kannada