ಮಾನಸಿಕ ಆರೋಗ್ಯ ಕೆಟ್ಟರೆ ಏನು ಮಾಡಬೇಕು? ಅಭಿಮಾನಿಗಳಿಗೆ ವಿಶೇಷ ಟಿಪ್ಸ್​ ನೀಡಿದ ಸಮಂತಾ

ಮಾನಸಿಕ ಆರೋಗ್ಯ ಕೆಟ್ಟರೆ ಏನು ಮಾಡಬೇಕು? ಅಭಿಮಾನಿಗಳಿಗೆ ವಿಶೇಷ ಟಿಪ್ಸ್​ ನೀಡಿದ ಸಮಂತಾ
ಸಮಂತಾ
Image Credit source: Samantha

ಸಮಂತಾ ಹಾಗೂ ನಾಗ ಚೈತನ್ಯ ಹಲವು ವರ್ಷಗಳ ಕಾಲ ಪ್ರೀತಿಸಿ ಆ ಬಳಿಕ ಮದುವೆ ಆದವರು. ನಾಲ್ಕು ವರ್ಷ ಸುಖಸಂಸಾರ ನಡೆಸಿ ನಂತರ ಇಬ್ಬರೂ ಬೇರೆ ಆದರು. ಆ ವರ್ಷಗಳಲ್ಲಿ ಇಬ್ಬರೂ ಮಾನಸಿಕವಾಗಿ ತುಂಬಾನೇ ಹತ್ತಿರವಾಗಿರುತ್ತಾರೆ. ಹೀಗಿದ್ದಾಗ ಇಬ್ಬರೂ ಬೇರೆ ಆಗುವುದು ಎಂದರೆ ಅದು ಅಷ್ಟು ಸುಲಭದ ಮಾತಲ್ಲ.

TV9kannada Web Team

| Edited By: Rajesh Duggumane

Jan 10, 2022 | 6:30 AM

ಚಿತ್ರರಂಗದ ಅನೇಕರು ಕಷ್ಟದ ದಿನಗಳನ್ನು ಎದುರಿಸಿ ಬಂದಿರುತ್ತಾರೆ. ಚಿತ್ರರಂಗದಲ್ಲಿ ಉತ್ತುಂಗದಲ್ಲಿರುವಾಗಲೂ ಒಮ್ಮೊಮ್ಮೆ ಎದುರಾಗುವ ಸಣ್ಣಪುಟ್ಟ ಬದಲಾವಣೆಗಳಿಂದ ಮಾನಸಿಕವಾಗಿ ಕುಗ್ಗಿ ಹೋಗುವ ಸಾಧ್ಯತೆ ಇರುತ್ತದೆ. ಇದರಿಂದ ಹೊರಬರುವುದು ಅಷ್ಟು ಸುಲಭದ ಮಾತಲ್ಲ. ಈ ಬಗ್ಗೆ ಸಮಂತಾ (Samantha) ಅವರು ಮಾತನಾಡಿದ್ದಾರೆ. ಹೇಗೆ ಈ ರೀತಿಯ ತೊಂದರೆಗಳಿಂದ ಹೊರಗೆ ಬರಬೇಕು ಎನ್ನುವ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಸಮಂತಾ ಹಾಗೂ ನಾಗ ಚೈತನ್ಯ ಹಲವು ವರ್ಷಗಳ ಕಾಲ ಪ್ರೀತಿಸಿ ಆ ಬಳಿಕ ಮದುವೆ ಆದವರು. ನಾಲ್ಕು ವರ್ಷ ಸುಖಸಂಸಾರ ನಡೆಸಿ ನಂತರ ಇಬ್ಬರೂ ಬೇರೆ ಆದರು. ಆ ವರ್ಷಗಳಲ್ಲಿ ಇಬ್ಬರೂ ಮಾನಸಿಕವಾಗಿ ತುಂಬಾನೇ ಹತ್ತಿರವಾಗಿರುತ್ತಾರೆ. ಹೀಗಿದ್ದಾಗ ಇಬ್ಬರೂ ಬೇರೆ ಆಗುವುದು ಎಂದರೆ ಅದು ಅಷ್ಟು ಸುಲಭದ ಮಾತಲ್ಲ. ಆದಾಗ್ಯೂ ಇಬ್ಬರೂ ದೂರ ಆಗಿದ್ದಾರೆ. ಈ ಸಂದರ್ಭದಲ್ಲಿ ಸಮಂತಾ ಮಾನಸಿಕವಾಗಿ ಕುಗ್ಗಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಆದರೆ, ಅವರು ಅದರಿಂದ ಹೊರ ಬರುವ ಪ್ರಯತ್ನ ಮಾಡಿದ್ದಾರೆ. ಇನ್​​ಸ್ಟಾಗ್ರಾಮ್​ ಸ್ಟೇಟಸ್​ ಮೂಲಕ ತಮ್ಮ ಅಭಿಮಾನಿಗಳಿಗೂ ಒಂದಷ್ಟು ಕಿವಿಮಾತುಗಳನ್ನು ನೀಡುವ ಕೆಲಸವನ್ನು ಸಮಂತಾ ಮಾಡಿದ್ದರು. ಈಗ ಅವರು ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ.

ಮಾನಸಿಕ ಆರೋಗ್ಯ ಕುರಿತಂತೆ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಸಮಂತಾ ಮುಖ್ಯ ಅತಿಥಿಯಾಗಿ ತೆರಳಿದ್ದರು. ಈ ವೇಳೆ ಒಂದಷ್ಟು ಸಲಹೆ ನೀಡಿದ್ದಾರೆ. ‘ನೀವು ಮಾನಸಿಕವಾಗಿ ತೊಂದರೆಗೊಳಗಾದಾಗ ಸಹಾಯ ಪಡೆಯಲು ಹಿಂಜರಿಯಬಾರದು. ನನ್ನ ಸಲಹೆಗಾರರು ಮತ್ತು ಸ್ನೇಹಿತರ ಸಹಾಯದಿಂದ ನಾನು ನನ್ನ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಜಯಿಸಲು ಸಾಧ್ಯವಾಯಿತು’ ಎಂದು ಅವರು ಹೇಳಿದ್ದಾರೆ.

‘ದೇಹಕ್ಕೆ ಆಗುವ ಗಾಯಗಳಿಗೆ ನಾವು ಹೇಗೆ ವೈದ್ಯರ ಬಳಿಗೆ ಹೋಗುತ್ತೇವೆಯೋ ಹಾಗೆಯೇ ನಮ್ಮ ಮನಸ್ಸಿಗೆ ನೋವುಂಟಾದರೆ ನಾವು ವೈದ್ಯರನ್ನು ಸಂಪರ್ಕಿಸಬೇಕು’ ಎಂದು ಸಮಂತಾ ಸಲಹೆ ನೀಡಿದ್ದಾರೆ. ‘ನನ್ನ ಜೀವನದಲ್ಲಿ ನಾನು ಯಶಸ್ಸು ಕಂಡರೆ, ಮಾನಸಿಕವಾಗಿ ಬಲಶಾಲಿಯಾಗಿ ಕಂಡರೆ ಅದಕ್ಕೆ ನಾನು ಕಾರಣ ಅಲ್ಲ. ನನ್ನ ಸುತ್ತಲೂ ಇದ್ದು ಸಹಾಯ ಮಾಡಿದವರು ಕಾರಣ’ ಎಂದಿದ್ದಾರೆ ಸಮಂತಾ.

ಇದನ್ನೂ ಓದಿ: ಸಮಂತಾ ದೂರಾದ ಬಳಿಕ ನಾಗ ಚೈತನ್ಯ ಜತೆ ಖಾಸಗಿ ವಿಮಾನದಲ್ಲಿ ಕಾಣಿಸಿಕೊಂಡ ಈ ಸುಂದರಿ ಯಾರು?

‘ಪುಷ್ಪ 2’ ಚಿತ್ರಕ್ಕಾಗಿ ಈಗಲೇ ಐಟಂ ಸಾಂಗ್​ ಸಿದ್ಧಪಡಿಸಲು ಮುಂದಾದ ನಿರ್ದೇಶಕ; ಈ ಬಾರಿ ಸಮಂತಾಗಿಲ್ಲ ಚಾನ್ಸ್​

Follow us on

Related Stories

Most Read Stories

Click on your DTH Provider to Add TV9 Kannada