ಕುಂಡಲಿನಿ ಚಕ್ರ ಪ್ರೇರಿತ ಉಡುಪು ಧರಿಸಿ ನವದೀಪ್ ಕೌರ್ ಮಿಸೆಸ್ ವರ್ಲ್ಡ್ 2022 ಸ್ಪರ್ಧೆಯಲ್ಲಿ ಅತ್ಯುತ್ತಮ ರಾಷ್ಟ್ರೀಯ ಉಡುಗೆ ಪ್ರಶಸ್ತಿ ಗೆದ್ದರು
ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸುವ ಮುನ್ನ ಅವರು ಖಾಸಗಿ ಬ್ಯಾಕೊಂದರಲ್ಲಿ ಸಹಾಯಕ ಮ್ಯಾನೇಜರ್ ಆಗಿ ಮತ್ತು ಕಾಲೇಜೊಂದರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದರು. 2020 ರಲ್ಲಿ ಅವರು ಮಿಸೆಸ್ ಇಂಡಿಯಾ ಆಗಿ ಆಯ್ಕೆಯಾದರು.
ಮಿಸ್ ಇಂಡಿಯ, (Miss India) ಮಿಸ್ ವರ್ಲ್ಡ್ (Miss World), ಮಿಸ್ ಯೂನಿವರ್ಸ್ (Miss Universe) ಸ್ಪರ್ಧೆಗಳ ಹಾಗೆ ಮಿಸೆಸ್ ಇಂಡಿಯ, ಮಿಸೆಸ್ ವರ್ಲ್ಡ್, ಮಿಸೆಸ್ ಯೂನಿವರ್ಸ್ ಸ್ಪರ್ಧೆಗಳೂ ನಡೆಯುತ್ತವೆ. ನಮ್ಮ ದೇಶದಲ್ಲಿ ಸುಂದರಿಯರಿಗೇನೂ ಕಮ್ಮಿಯಿಲ್ಲ ಮಾರಾಯ್ರೇ. ಮೊನ್ನೆಯಷ್ಟೇ ಹರ್ನಾಜ್ ಸಂಧು ಮಿಸ್ ಯೂನಿವರ್ಸ್ 2021 ಕಿರೀಟ ಧರಿಸಿದರು. ಈ ವಿಡಿಯೋನಲ್ಲಿ ಕಾಣಿಸುತ್ತಿರುವ ನವದೀಪ್ ಕೌರ್ ಇತ್ತೀಚಿಗೆ ನಡೆದ ಮಿಸೆಸ್ ವರ್ಲ್ಡ್ 2022 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಅತ್ಯುತ್ತಮ ರಾಷ್ಟ್ರೀಯ ಉಡುಗೆ ಪ್ರಶಸ್ತಿಯನ್ನು ಬಾಚಿಕೊಂಡರು. ಕುಂಡಲಿನಿ ಚಕ್ರದಿಂದ ಪ್ರೇರಿತವಾದ ಅವಂತ್ ಗರ್ದೆ ಉಡುಪಿಗೆ ನವದೀಪ್ ಪ್ರಶಸ್ತಿ ಪಡೆದರು. ಪ್ರಶಸ್ತಿ ಘೋಷಣೆಯಾದ ನಂತರ ಅವರು ಟ್ರೆಂಡ್ಸ್ ಲಿಸ್ಟ್ನಲ್ಲಿ ಅಗ್ರಸ್ಥಾನಕ್ಕೇರಿದರು. 2021 ರಲ್ಲಿ ಮಿಸೆಸ್ ಇಂಡಿಯಾ ಪ್ರಶಸ್ತಿಗೆ ಪಾತ್ರರಾಗಿದ್ದ ನವದೀಪ್ ಅವರು ಅಮೆರಿಕದ ಲಾಸ್ ವೇಗಾಸ್ನ ನೆವೆಡಾನಲ್ಲಿ ನಡೆದ ಮಿಸೆಸ್ ವರ್ಲ್ಡ್ ಕಾಸ್ಟ್ಯೂಮ್ ಸುತ್ತಿನಲ್ಲಿ ವಿಜಯಶಾಲಿಯಾದರು.
ಈ ಸುತ್ತಿನಲ್ಲಿ ಪ್ರತಿಸ್ಪರ್ಧಿಗಳು ತಮ್ಮ ದೇಶದ ಸಂಸ್ಕೃತಿಯನ್ನು ಉಡುಪಿನಲ್ಲಿ ಪ್ರದರ್ಶಿಸಬೇಕು. ನವದೀಪ್ ಅವರ ಸಾಧನೆ ಅಷ್ಟಕ್ಕೆ ನಿಲ್ಲಲಿಲ್ಲ. ಅವರು ಟಾಪ್ 15 ಪ್ರತಿಸ್ಪರ್ಧಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದರು.
ಅಂದಹಾಗೆ, ನವದೀಪ್ ಕೌರ್ ಅವರು ಉಕ್ಕಿನ ನಗರ ರೂರ್ಕೆಲಾಗೆ ಹತ್ತಿರದಲ್ಲಿರುವ ಕನ್ಸಬಹಲ್ ಹೆಸರಿನ ಒಂದು ಚಿಕ್ಕ ಊರಿನವರು. ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಪಡೆದ ನಂತರ ಎಮ್ ಬಿ ಎ ವ್ಯಾಸಂಗ ಪೂರ್ಣಗೊಳಿಸಿದರು.
ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸುವ ಮುನ್ನ ಅವರು ಖಾಸಗಿ ಬ್ಯಾಕೊಂದರಲ್ಲಿ ಸಹಾಯಕ ಮ್ಯಾನೇಜರ್ ಆಗಿ ಮತ್ತು ಕಾಲೇಜೊಂದರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದರು. 2020 ರಲ್ಲಿ ಅವರು ಮಿಸೆಸ್ ಇಂಡಿಯಾ ಆಗಿ ಆಯ್ಕೆಯಾದರು.
2014 ರಲ್ಲಿ ಕಮಲದೀಪ್ ಸಿಂಗ್ ಅವರನ್ನು ಮದುವೆಯಾದ ನವದೀಪ್ ಅವರಿಗೆ 5 ವರ್ಷದ ಮಗಳಿದ್ದಾಳೆ. ತನ್ನ ಪತ್ನಿ ಕುಟುಂಬ ಮತ್ತು ಇಡೀ ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾಳೆ ಎಂದು ಕಮಲದೀಪ್ ಹೇಳಿದ್ದಾರೆ.
ಇದನ್ನೂ ಓದಿ: ಬಾಲಕಿಯ ಕಾಲು ಮುಟ್ಟಿ ನೃತ್ಯಾಭ್ಯಾಸ ಮಾಡಿಸಿದ್ದ ಬಿರ್ಜೂ ಮಹಾರಾಜ್: ಸರಳ ವ್ಯಕ್ತಿತ್ವದ ಕಥಕ್ ನೃತ್ಯ ಪಟುವಿನ ವಿಡಿಯೋ ವೈರಲ್