ಫ್ಲಿಪ್​ಕಾರ್ಟ್​ ಬಿಗ್ ಸೇವಿಂಗ್ಸ್ ಡೇಸ್ ನಲ್ಲಿ ಆ್ಯಪಲ್  ಐಫೋನ್ 12 ಮಿನಿ ಕೇವಲ ರೂ. 30,240 ಕ್ಕೆ ಸಿಗುತ್ತದೆ!!

ಆ್ಯಪಲ್  ಐಫೋನ್ 12 ಮಿನಿ ರಿಯಾಯಿತಿ ದರದಲ್ಲಿ ರೂ. 41,999 ಕ್ಕೆ ಫ್ಲಿಪ್ ಕಾರ್ಟ್ ಮಾರುತ್ತಿದೆ. ಈ ಮಾಡೆಲ್ ನ ಮೂಲಬೆಲೆ ನಿಮಗೆ ಗೊತ್ತಿರುವ ಹಾಗೆ ರೂ. 59,990. ಹಳೆಯ ಪೋನನ್ನು ನೀವು ವಿನಿಮಯ ಮಾಡಿಕೊಳ್ಳುವ ಇಚ್ಛೆ ಹೊಂದಿದ್ದರೆ, ಹೆಚ್ಚುವರಿ ರೂ 11,750 ಡಿಸ್ಕೌಂಟ್ ಫ್ಲಿಪ್ ಕಾರ್ಟ್ ನಿಮಗೆ ನೀಡುತ್ತದೆ.

TV9kannada Web Team

| Edited By: shivaprasad.hs

Jan 21, 2022 | 9:29 AM

ಅಮೆಜಾನ್ (Amazon) ಮಾಡಿದನ್ನು ಫ್ಲಿಪ್​ಕಾರ್ಟ್​ (Flipkart) ಮಾಡುತ್ತದೆ, ಇದರಲ್ಲಿ ಅನುಮಾನವೇನೂ ಇಲ್ಲ. ಇ-ಕಾಮರ್ಸ್ ದೈತ್ಯ (E-commerce giant) ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2022 ಘೋಷಿಸಿರುವುದನ್ನು ನಾವು ಈಗಾಗಲೇ ಚರ್ಚಿಸಿದ್ದೇವೆ. ಅದರ ಘೋಷಣೆ ಬೆನ್ನಲ್ಲೇ ಫ್ಲಿಪ್​ಕಾರ್ಟ್​ ಸಹ ಬಿಗ್ ಸೇವಿಂಗ್ಸ್ ಡೇಸ್ 2022 ಸೇಲ್ ಶುರುವಿಟ್ಟುಕೊಂಡಿದೆ. ಈ ಸೇಲ್ ಈಗಾಗಲೇ ಅಂದರೆ ಸೋಮವಾರದಿಂದ ಆರಂಭವಾಗಿದ್ದು ಶನಿವಾರ ಕೊನೆಗೊಳ್ಳುತ್ತದೆ. ಬಿಗ್ ಸೇವಿಂಗ್ಸ್ ಡೇಸ್ 2022 ಸೇಲ್ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಕಂಪನಿಯ ಮೊಬೈಲ್ ಫೋನ್ಗಳು ಸೇರಿದಂತೆ ಎಲ್ಲ ಕೆಟೆಗಿರಿಯ ವಸ್ತುಗಳ ಮೇಲೆ ಭಾರಿ ರಿಯಾಯಿತಿಯನ್ನು ಫ್ಲಿಪ್ ಕಾರ್ಟ್ ಘೋಷಿಸಿದೆ.

ಐಸಿಐಸಿಐ ಬ್ಯಾಂಕ್​ನೊಂದಿಗೆ ಫ್ಲಿಪ್​ಕಾರ್ಟ್​ ಟೈಅಪ್ ಮಾಡಿಕೊಂಡಿದ್ದು ಈ ಬ್ಯಾಂಕಿನ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡಿನ ಬಳಕೆದಾರರಿಗೆ ಶೇಕಡಾ 10 ರಷ್ಟು ದಿಢೀರ್ ಡಿಸ್ಕೌಂಟ್ ನೀಡುತ್ತದೆ. ಐಫೋನ್ ಖರೀದಿಸುವ ಆಸೆ ನಿಮ್ಮಲ್ಲಿ ಹುಟ್ಟಿದ್ದರೆ, ಐಫೋನ್ 12 ಮಿನಿ ಮಾಡೆಲ್ ಕೇವಲ 30,240 ರೂ. ಗಳಿಗೆ ದೊರಕಲಿದೆ. ಈ ಫೋನ್ ಇಷ್ಟು ಕಡಿಮೆ ಹೇಗೆ ಸಿಗುತ್ತದೆ ಅಂತ ನಿಮಗೆ ನಾವು ವಿವರಿಸುತ್ತೇವೆ.

ಆ್ಯಪಲ್  ಐಫೋನ್ 12 ಮಿನಿ ರಿಯಾಯಿತಿ ದರದಲ್ಲಿ ರೂ. 41,999 ಕ್ಕೆ ಫ್ಲಿಪ್ ಕಾರ್ಟ್ ಮಾರುತ್ತಿದೆ. ಈ ಮಾಡೆಲ್ ನ ಮೂಲಬೆಲೆ ನಿಮಗೆ ಗೊತ್ತಿರುವ ಹಾಗೆ ರೂ. 59,990. ಹಳೆಯ ಪೋನನ್ನು ನೀವು ವಿನಿಮಯ ಮಾಡಿಕೊಳ್ಳುವ ಇಚ್ಛೆ ಹೊಂದಿದ್ದರೆ, ಹೆಚ್ಚುವರಿ ರೂ 11,750 ಡಿಸ್ಕೌಂಟ್ ಫ್ಲಿಪ್ ಕಾರ್ಟ್ ನಿಮಗೆ ನೀಡುತ್ತದೆ.

ಆ್ಯಪಲ್ ಐಪೋನ್ ಮಿನಿ ಡುಯಲ್ ರೇರ್ ಕೆಮೆರಾ ಸೆಟಪ್ ಜೊತೆಗೆ 12 ಮೆಗಾಪಿಕ್ಸೆಲ್ ನ ಫ್ರಂಟ್ ಕೆಮೆರಾ ಹೊಂದಿದೆ ಮತ್ತು ಆಪಲ್ ನ ಎ14 ಬಯಾನಿಕ್ ಚಿಪ್ಸೆಟ್ ಮೂಲಕ ಕಾರ್ಯಶೀಲಗೊಳ್ಳುತ್ತದೆ.

ಇದನ್ನೂ ಓದಿ:  Viral Video: ಮೇರಿ ರಾಣಿ ಹಾಡಿಗೆ ಹೆಜ್ಜೆ ಹಾಕಿದ ದುಬೈನ ಮಹಿಳೆ ಮತ್ತು ಬಾಲಕಿ: ವಿಡಿಯೋ ಹಂಚಿಕೊಂಡ ನಟಿ ನೋರಾ ಫತೇಹಿ

Follow us on

Click on your DTH Provider to Add TV9 Kannada