ಭಾರತದಲ್ಲಿ ಎರಡು ಹೊಸ ಮಾದರಿಯ ಲ್ಯಾಪ್ಟಾಪ್ ಪರಿಚಯಿಸಿದ ಮೈಕ್ರೋಸಾಫ್ಟ್; ಬೆಲೆ ಎಷ್ಟು?

ಮೈಕ್ರೋಸಾಫ್ಟ್ ಭಾರತದಲ್ಲಿ ಎರಡು ಹೊಸ ಲ್ಯಾಪ್ಟಾಪ್​ಗಳನ್ನು ಪರಿಚಯಿಸಿದೆ. ಫೆಬ್ರವರಿ 15ರಿಂದ ಇವು ಗ್ರಾಹಕರಿಗೆ ಲಭ್ಯವಾಗಲಿವೆ.

TV9kannada Web Team

| Edited By: shivaprasad.hs

Jan 21, 2022 | 9:53 AM

ಸಾಫ್ಟ್ ವೇರ್ ದಿಗ್ಗಜ ಸಂಸ್ಥೆಗಳಲ್ಲಿ ಒಂದಾದ ಮೈಕ್ರೋಸಾಫ್ಟ್ ಭಾರತದಲ್ಲಿ ಹೊಸ ಮಾದರಿಯ ಎರಡು ಲ್ಯಾಪ್​ಟಾಪ್​ಗಳನ್ನ ಲಾಂಚ್ ಮಾಡಿದೆ. ಪ್ರೊಫೆಷನಲ್ಸ್​ಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಲವು ವಿಭಿನ್ನ ಕಾನ್​ಫಿಗರೇಶನ್​ಗಳನ್ನ ಮೈಕ್ರೋಸಾಫ್ಟ್ ಲ್ಯಾಪ್ ಟಾಪ್ ಒಳಗೊಂಡಿದೆ. ‘ಸರ್ಫೇಸ್ 8 ಪ್ರೊ’ (Surface 8 pro) ಹಾಗೂ ‘ಸರ್ಫೇಸ್ 7 ಪ್ರೋ ಪ್ಲಸ್​​’ (Surface 7 pro plus)ಗಳನ್ನು ಭಾರತದಲ್ಲಿ ಲಾಂಚ್ ಮಾಡಲಾಗಿದೆ. ಫೆಬ್ರವರಿ 15ರಿಂದ ಭಾರತದ ಹಲವು ಇಕಾಮರ್ಸ್ ಸೈಟ್​ಗಳಲ್ಲಿ ಮಾರಾಟ ಪ್ರಾರಂಭವಾಗಲಿದೆ. ಸರ್ಫೇಸ್​ 8 ಪ್ರೋನಲ್ಲಿ ವಿಂಡೋಸ್ 11 ಇರಲಿದ್ದು, 16 ಗಂಟೆಗಳ ಬ್ಯಾಟರಿ ಲೈಫ್ ಹೊಂದಿದೆ. 32 ಜಿಬಿ ರ್ಯಾಮ್ ಅಪ್​ಟು 1 ಟಿಬಿ ಸ್ಟೋರೇಜ್ ಅಥವಾ 16 ಜಿಬಿ ರ್ಯಾಮ್ ಮತ್ತು 256 ಜಿಬಿ ಸ್ಟೋರೇಜ್ ಮಾದರಿಯಲ್ಲಿ ಲ್ಯಾಪ್ಟಾಪ್ ಲಭ್ಯವಾಗಲಿದೆ. ಇದರ ಬೆಲೆ ₹ 1,04,000 ಅಥವಾ ₹ 1,27,000. ಸರ್ಫೇಸ್ 7 ಪ್ರೋ ಪ್ಲಸ್ ಬೆಲೆ ₹ 83,999.

ಇದನ್ನೂ ಓದಿ:

ಫ್ಲಿಪ್​ಕಾರ್ಟ್​ ಬಿಗ್ ಸೇವಿಂಗ್ಸ್ ಡೇಸ್ ನಲ್ಲಿ ಆ್ಯಪಲ್  ಐಫೋನ್ 12 ಮಿನಿ ಕೇವಲ ರೂ. 30,240 ಕ್ಕೆ ಸಿಗುತ್ತದೆ!!

ಹೊಸ ಸೆಲೆರಿಯೊ ಸಿ ಎನ್ ಜಿ ಆವೃತ್ತಿಯನ್ನು ಲಾಂಚ್ ಮಾಡಿದೆ ಮಾರುತಿ ಸುಜುಕಿ, ಬೆಲೆ ರೂ. 6,58,000

Follow us on

Click on your DTH Provider to Add TV9 Kannada