ರಾಯಚೂರಿನ ದೇವದುರ್ಗ ಠಾಣೆಯ ಪೊಲೀಸರಿಗೆ ಹೊಸ ಫಜೀತಿಯೊಂದು ಶುರುವಾಗಿದೆ. ಮಂಗವೊಂದು ಯಾವಾಗಂದ್ರೆ ಆವಾಗ ಠಾಣೆಗೆ ನುಗ್ಗಿ ಪೊಲೀಸರನ್ನ ಕಾಡುತ್ತಿದೆ. ಕೋತಿ ಚೇಷ್ಟೆಗೆ ಭಯಭೀತರಾಗಿರೋ ಪೊಲೀಸರು ಡ್ಯೂಟಿ ಮಾಡೋದಕ್ಕೆ ಹೆದರುತ್ತಿದ್ದಾರೆ.
ಮಂಗವೊಂದು ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರನ್ನೇ ಬೆಚ್ಚಿಬೀಳಿಸಿದೆ. ಪೊಲೀಸ್ ಠಾಣೆಯಲ್ಲಿ ಕೀಟಲೆ ಮಾಡುತ್ತಿದೆ. ಕಳೆದ 5 ದಿನಗಳಿಂದ ಮಂಗ ಪೊಲೀಸರಿಗೆ ಕಾಟ ಕೊಡುತಿದ್ದು ಮಂಗನ ಕಾಟಕ್ಕೆ ಬೇಸತ್ತ ಪೊಲೀಸ್ ಸಿಬ್ಬಂದಿ ರಾತ್ರಿ ಪಾಳಿಯದಲ್ಲಿ ಕೆಲಸ ಮಾಡಲು ಭಯ ಪಡುತ್ತಿದ್ದಾರೆ.