ಯಾದಗಿರಿಯಂತೆ ಕೊಪ್ಪಳದ ಜಿಲ್ಲಾಡಳಿತಕ್ಕೂ ಸೊಂಪಾದ ನಿದ್ರೆ, ಜಾನುವಾರಗಳ ಸಂತೆಯಲ್ಲಿ ಕೋವಿಡ್ ನಿಯಮಗಳ ಉಲ್ಲಂಘನೆ!
ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಕೊಪ್ಪಳ ಜಿಲೆಯಲ್ಲಿ ಪಾಸಿಟಿವಿಟಿ ರೇಟ್ 19.23 ಇದೆ. ರಾಜ್ಯ ಸರ್ಕಾರ ಕೊವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಯಲ್ಲಿಡಬೇಕೆಂದು ಎಲ್ಲ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದ್ದರೂ ಇಂಥ ಅಜಾಗರೂಕತೆ ಮತ್ತು ನಿರ್ಲಕ್ಷ್ಯ ಪದೇಪದೆ ನಡೆಯುತ್ತಿವೆ.
ಮೊನ್ನೆಯಷ್ಟೇ ಯಾದಗಿರಿಯಲ್ಲಿ (Yadgir) ಜನ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಕುರಿ ಸಂತೆಯಲ್ಲಿ ನೆರೆದಿದ್ದನ್ನು ನಿಮಗೆ ತೋರಿಸಿದೆವು. ಅಲ್ಲಿನ ಜಿಲ್ಲಾಡಳಿತ ಏನು ಮಾಡುತ್ತಿದೆ ಅಂತ ಪ್ರಶ್ನಿಸಿದ್ದೆವು. ಈಗ ಯಾದಗಿರಿಯಿಂದ ಸುಮಾರು 200 ಕಿಮೀ ದೂರದಲ್ಲಿರುವ ಕೊಪ್ಪಳ (Koppal) ಜಿಲ್ಲೆಯ ಸರದಿ. ನಾವು ಹೇಳಲಿರುವುದು ಇಷ್ಟೇ, ಯಾದಗಿರಿಯಂತೆ ಕೊಪ್ಪಳ ಜಿಲ್ಲಾಡಳಿತವೂ ಸೊಂಪಾಗಿ ನಿದ್ರಿಸುತ್ತಿದೆ. ಈ ಜಿಲ್ಲೆಯ ಗಿಣಿಗೇರಾ (Ginigera) ಮತ್ತು ಬೂದುಗುಂಪಾದಿಂದ (Budugumpa) ಎರಡು ಪ್ರತ್ಯೇಕ ವಿಡಿಯೋಗಳನ್ನು ಕೊಪ್ಪಳದ ಟಿವಿ9 ವರದಿಗಾರ ಕಳಿಸಿದ್ದಾರೆ. ಗಿಣಿಗೇರಾನಲ್ಲಿ ದನಗಳ ಸಂತೆ ನಡೆಯುತ್ತಿದ್ದರೆ ಬೂದುಗುಂಪಾನಲ್ಲಿ ಕುರಿಗಳ ಸಂತೆ ನಡೆಯುತ್ತಿದೆ. ಎರಡೂ ಸಂತೆಗಳಲ್ಲಿ ಕಾಮನ್ ಆಗಿ ಕಾಣುವ ದೃಶ್ಯವೆಂದರೆ, ಮಾಸ್ಕ್ ಧರಿಸದ ಮತ್ತು ದೈಹಿಕ ಅಂತರ ಕಾಯ್ದುಕೊಳ್ಳದ ದಂಡಿದಂಡಿ ಜನ.
ಎರಡೂ ಊರುಗಳಲ್ಲಿ ಪ್ರತಿ ಶುಕ್ರವಾರ ಸಂತೆ ನಡೆಯುತ್ತದೆ. ಬೇರೆ ಸಮಯದಲ್ಲಾದರೆ, ಸಂತೆ ಪ್ರತಿದಿನ ನಡೆದರೂ ಜನಕ್ಕೆ ಅಪಾಯವಿಲ್ಲ. ಆದರೆ, ಕೋವಿಡ್ ಮೂರನೇ ಅಲೆಯಲ್ಲಿ ರಾಜ್ಯದಲ್ಲಿ ಪ್ರತಿದಿನ ವರದಿಯಾಗುತ್ತಿರುವ ಸೋಂಕಿತರ ಸಂಖ್ಯೆ 50,000ದ ಗಡಿ ಸಮೀಪಿಸಿದೆ.
ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಕೊಪ್ಪಳ ಜಿಲೆಯಲ್ಲಿ ಪಾಸಿಟಿವಿಟಿ ರೇಟ್ 19.23 ಇದೆ. ರಾಜ್ಯ ಸರ್ಕಾರ ಕೊವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಯಲ್ಲಿಡಬೇಕೆಂದು ಎಲ್ಲ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದ್ದರೂ ಇಂಥ ಅಜಾಗರೂಕತೆ ಮತ್ತು ನಿರ್ಲಕ್ಷ್ಯ ಪದೇಪದೆ ನಡೆಯುತ್ತಿವೆ.
ಕೋವಿಡ್ ಪಿಡುಗನ್ನು ಇನ್ನೂ ಒಂದು ತಿಂಗಳ ಅವಧಿಯವರೆಗೆ ನಿಯಂತ್ರಣದಲ್ಲಿ ಇಡಬೇಕಿರುವುದು ಅತ್ಯವಶ್ಯಕವಾಗಿದೆ. ಅದಾದ ಮೇಲೆ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಾ ಸಾಗುತ್ತದೆ. ಜನ ಮತ್ತು ಜಿಲ್ಲಾಡಳಿತಗಳು ಎಚ್ಚರವಹಿಸುವುದು ಅನಿವಾರ್ಯ.
ಇದನ್ನೂ ಓದಿ: ಪುಷ್ಪ ಸಿನಿಮಾದಿಂದ ಸ್ಫೂರ್ತಿ ಪಡೆದು ಅಪ್ರಾಪ್ತರಿಂದ ಕೊಲೆ; ಫೇಮಸ್ ಆಗಲೆಂದು ಹತ್ಯೆಯ ವಿಡಿಯೋ ಅಪ್ಲೋಡ್ ಮಾಡಲು ಪ್ಲಾನ್!