ಪ್ರೀಮಿಯಮ್ ಎಸ್ಯುವಿ ಸಫಾರಿಯ ಡಾರ್ಕ್ ಎಡಿಶನ್ ಲಾಂಚ್ ಮಾಡಿದೆ ಟಾಟಾ ಮೋಟಾರ್ಸ್, ಬೆಲೆ ರೂ. 19.05 ಲಕ್ಷ!
ಕಾರಿನ ಮೊದಲ ಮತ್ತು ಎರಡನೇ ಸಾಲಿನಲ್ಲಿ ಪ್ರಶಸ್ತವಾಗಿ ಗಾಳಿಯಾಡುವ ಆಸನಗಳು, ಏರ್ ಪ್ಯೂರಿಫೈಯರ್ ಮತ್ತು ಆಂಡ್ರಾಯ್ಡ್ ಆಟೋ ಮತ್ತು ವೈ-ಫೈ ಮೂಲಕ ಆಪಲ್ ಕಾರ್ ಪ್ಲೇನಂಥ ಇತರ ವೈಶಿಷ್ಟ್ಯತೆಗಳನ್ನು ಹೊಂದಿದೆ ಎಂದು ಟಾಟಾ ಮೋಟಾರ್ಸ್ ಪ್ರಕಟಣೆಯಲ್ಲಿ ಹೇಳಿದೆ.
ಟಾಟಾ ಮೋಟಾರ್ಸ್ (Tata Motors) ತನ್ನ ಪ್ರೀಮಿಯಮ್ ಎಸ್ ಯುವಿ ಸಫಾರಿಯ ಡಾರ್ಕ್ ಎಡಿಶನ್ (Dark Edition) ಲಾಂಚ್ ಮಾಡಿರುವುದಾಗಿ ಸೋಮವಾರ ಪ್ರಕಟಣೆಯೊಂದರಲ್ಲಿ ತಿಳಿಸಿದೆ. ಕಾರನ್ನು ನೀವು ವಿಡಿಯೋನಲ್ಲಿ ನೋಡಬಹುದು ಮತ್ತು ಇಷ್ಟವಾದರೆ ಖರೀದಿಗೆ ಮುಂದಾಗಬಹುದು, ಯಾಕೆಂದರೆ ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸಿರುವುದಾಗಿ ಟಾಟಾ ಸಂಸ್ಥೆ ಹೇಳಿದೆ. ಅದರ ಬೆಲೆ ತಿಳಿದುಕೊಳ್ಳುವ ತವಕ ನಿಮಗಿದೆ ನಮಗೆ ಗೊತ್ತು, ಅದನ್ನೂ ಹೇಳಿಬಿಡ್ತೀವಿ. ದೆಹಲಿಯಲ್ಲಿ ಎಸ್ ಯುವಿ ಸಫಾರಿಯ ಡಾರ್ಕ್ ಎಡಿಶನ್ ಎಕ್ಸ್ ಶೋರೂಮ್ ಬೆಲೆ ರೂ. 19.05 ಲಕ್ಷ. ಎಕ್ಸ್ ಟಿ +/ ಎಕ್ಸ್ ಟಿ ಎ+ ಮತ್ತು ಎಕ್ಸ್ ಜೆಡ್+/ ಎಕ್ಸ್ ಜೆಡ್ ಎ + ಟ್ರಿಮ್‌ಗಳಲ್ಲಿ ಸಫಾರಿಯ ಡಾರ್ಕ್ ಎಡಿಶನ್ ಲಭ್ಯವಿದ್ದು, ಕಾರಿನ ಮೊದಲ ಮತ್ತು ಎರಡನೇ ಸಾಲಿನಲ್ಲಿ ಪ್ರಶಸ್ತವಾಗಿ ಗಾಳಿಯಾಡುವ ಆಸನಗಳು, ಏರ್ ಪ್ಯೂರಿಫೈಯರ್ (air purifier) ಮತ್ತು ಆಂಡ್ರಾಯ್ಡ್ ಆಟೋ ಮತ್ತು ವೈ-ಫೈ ಮೂಲಕ ಆಪಲ್ ಕಾರ್ ಪ್ಲೇನಂಥ ಇತರ ವೈಶಿಷ್ಟ್ಯತೆಗಳನ್ನು ಹೊಂದಿದೆ ಎಂದು ಟಾಟಾ ಮೋಟಾರ್ಸ್ ಪ್ರಕಟಣೆಯಲ್ಲಿ ಹೇಳಿದೆ.
ಸೀಮಿತ ಎಡಿಶನ್ ಉತ್ಪಾದನೆಯಾಗಿ ಲಾಂಚ್ ಅದ ಹ್ಯಾರಿಯರ್ ಡಾರ್ಕ್ ಭಾರತದಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದು ಗ್ರಾಹಕರ ಬೇಡಿಕೆಯ ಮೇರೆಗೆ ಅದು ಹ್ಯಾರಿಯರ್ ಪೋರ್ಟ್ಫೋಲಿಯೋದ ಅವಿಭಾಜ್ಯ ಅಂಗವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಹ್ಯಾರಿಯರ್ ಡಾರ್ಕ್ ಗ್ರಾಹಕರಿಗೆ ಅತ್ಯಾಕರ್ಷಕ ಮತ್ತು ಅದ್ಭುತವಾದ ಪ್ಯಾಕೇಜ್ ನೀಡಿತು ಮತ್ತು ಡಾರ್ಕ್ ಶ್ರೇಣಿಯ ರೇಂಜ್ ಅನ್ನು ಮತ್ತಷ್ಟು ವಿಸ್ತರಿಸಿತು. ಈ ಸೊಗಸಾದ ಡಾರ್ಕ್ ಆವೃತ್ತಿಯು ಕಾರು ಖರೀದಿಸಲು ಇಚ್ಛಿಸುವವರಿಗೆ ಭವ್ಯವಾದ ಸಫಾರಿಗೆ ಅಪ್‌ಗ್ರೇಡ್ ಮಾಡಲು ಮತ್ತೊಂದು ಕಾರಣವಾಗಲಿದೆ ಅನ್ನೋದು ಸಾಬೀತಾಗುತ್ತದೆ ಎಂಬ ನಂಬಿಕೆ ನಮಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಲ್ಯಾಂಡ್ ರೋವರ್ ನ ಲೆಜೆಂಡರಿ ಡಿ8 ಪ್ಲಾಟ್ಫಾರ್ಮ್ ನಿಂದ ಹೆಕ್ಕಲಾದ ಒಮಿಗಾರ್ಕ್ (ಒ ಎಮ್ ಇ ಜಿ ಎ ಅರ್ ಸಿ) ತಂತ್ರಜ್ಞಾನದೊಂದಿಗೆ ತಯಾರಿಸಲಾಗಿರುವ ಎಸ್ ಯು ವಿಯ 16,000 ಕ್ಕಿಂತ ಹೆಚ್ಚು ಯುನಿಟ್ಗಳನ್ನು ಮಾರಲಾಗಿದೆ ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಶಿಕ್ಷಕ ಶಾಲೆಯಿಂದ ವರ್ಗಾವಣೆ; ಸರ್ ಬಿಟ್ ಹೋಗ್ಬೇಡಿ, ಪ್ಲೀಸ್ ಸರ್ ಅಂತ ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿಗಳು- ವಿಡಿಯೋ ಇದೆ