ಪ್ಯಾರಿಸ್​ನ ಐಫೆಲ್​ ಟವರ್​ ಎದುರು ಪ್ರೇಯಸಿಗೆ ಪ್ರಪೋಸ್​ ಮಾಡಿದ ಯುವಕ: ವಿಡಿಯೋ ವೈರಲ್​

ಪ್ಯಾರಿಸ್​ನ ಐಫೆಲ್​ ಟವರ್​ ಎದುರು ಪ್ರೇಯಸಿಗೆ ಪ್ರಪೋಸ್​ ಮಾಡಿದ ಯುವಕ: ವಿಡಿಯೋ ವೈರಲ್​
ಐಫೆಲ್​ ಟವರ್​ ಎದುರು ಪ್ರಪೋಸ್​ ಮಾಡಿದ ಯುವಕ

ಪ್ಯಾರಿಸ್​ನ ಆಪಲ್​ ಟವರ್​ ಎದುರು ಯುವಕನೊಬ್ಬ ಡೇಟಿಂಗ್​ ಆ್ಯಪ್​ನಲ್ಲಿ ಪರಿಚಯವಾದ ಯುವತಿಗೆ ಪ್ರಪೋಸ್​ ಮಾಡಿದ ವಿಡಿಯೋ ಈಗ ನೆಟ್ಟಿಗರ ಮನಗೆದ್ದಿದೆ. ಲಾಮರ್ ಮತ್ತು ವೇಲೆನ್ಸಿಯಾ ಎನ್ನುವ ಜೋಡಿಯ ವಿಡಿಯೋ ಇದಾಗಿದೆ.

TV9kannada Web Team

| Edited By: Pavitra Bhat Jigalemane

Jan 16, 2022 | 2:07 PM

ಪ್ರೀತಿಯೇ ಹಾಗೆ. ಅದೊಂದು ರೀತಿಯ ಹೊಸ ಅನುಭವ. ಬದುಕಿನ ಹೊಸ ಪಯಣಕ್ಕೆ ಸಿಗುವ ಮುನ್ನುಡಿ. ಇಲ್ಲೊಂದು ಜೋಡಿಗಳ ಪ್ರೀತಿಯ ಕತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಪ್ಯಾರಿಸ್​ನ ಐಫೆಲ್​ ಟವರ್ (Eiffel Tower)​ ಎದುರು ಯುವಕನೊಬ್ಬ ಡೇಟಿಂಗ್​ ಆ್ಯಪ್​ (dating app )ನಲ್ಲಿ ಪರಿಚಯವಾದ ಯುವತಿಗೆ ಪ್ರಪೋಸ್​ ಮಾಡಿದ ವಿಡಿಯೋ ಈಗ ನೆಟ್ಟಿಗರ ಮನಗೆದ್ದಿದೆ. ಲಾಮರ್ ಮತ್ತು ವೇಲೆನ್ಸಿಯಾ ಎನ್ನುವ ಜೋಡಿಯ ವಿಡಿಯೋ ಇದಾಗಿದೆ. ಇನ್ಸ್ಟಾಗ್ರಾಮ್ (Instagram)​ನಲ್ಲಿ ಹಂಚಿಕೊಂಡ ಈ ವಿಡಿಯೋ 3.1 ಮಿಲಿಯನ್​ ವೀಕ್ಷಣೆ ಪಡೆದಿದ್ದು, ಬಳಕೆದಾರರು ನಿಜವಾದ ಪ್ರೀತಿಗೆ ಯಾವುದೇ ಹಂಗಿಲ್ಲ ಎಂದಿದ್ದಾರೆ.

ಲಾಮರ್​ 2019ರಲ್ಲಿ ವೇಲೆನ್ಸಿಯಾರನ್ನು ಡೇಟಿಂಗ್​​ ಆ್ಯಪ್​ನಲ್ಲಿ ಪರಿಚಯವಾಗಿದ್ದರು. ಇಬ್ಬರ ನಡುವೆ ಉತ್ತಮ ಸ್ನೇಹ ಬೆಳೆದಿತ್ತು. ಅದಾದ ಬಳಿಕ ಕಳೆದ ಎರಡು ದಿನಗಳ ಹಿಂದೆ ಪ್ಯಾರಿಸ್​ನಲ್ಲಿ ಇಬ್ಬರ ಸ್ನೇಹಿತನ ಮದುವೆಯಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು. ಈ ವೇಳೆ ಲಾಮರ್ ಮತ್ತು ವೇಲೆನ್ಸಿಯಾ ಪ್ಯಾರಿಸ್​ನಲ್ಲಿ ಭೇಟಿಯಾದ​  ದಿನವನ್ನು ನೆನಪಿಟ್ಟುಕೊಳ್ಳುವ ಸಲುವಾಗಿ ಫೋಟೋಶೂಟ್​ ಮಾಡಿಸಿಕೊಳ್ಳಲು ನಿರ್ಧರಿಸಿದರು. ಹೀಗಾಗಿ ಪ್ಯಾರಿಸ್​ನ ಐಫೆಲ್ ಟವರ್​ ಎದುರು ಒಬ್ಬರ ಹಿಂದೆ ಒಬ್ಬರು ನಿಂತು ಫೊಟೋ ತೆಗೆಸಿಕೊಳ್ಳಲು ನಿಂತಿದ್ದರು. ಈ ವೇಳೆ ಲಾಮರ್​ ಮಂಡಿಯೂರಿ ಕುಳಿತು ಪ್ರೇಮ ನಿವೇದನೆ ಮಾಡಿದ್ದಾರೆ. ಇದರ ವಿಡಿಯೋ ಈಗ  ಸಖತ್​ ವೈರಲ್​ ಆಗಿದೆ.

ವಿಡಿಯೋದಲ್ಲಿ ಲಾಮರ್​ ಹಾಗೂ ವೇಲೆನ್ಸಿಯಾ ಚೆಂದದ ಉಡುಗೆ ತೊಟ್ಟು ನಿಂತಿರುವುದನ್ನು ಕಾಣಬಹುದು. ನಂತರ ಫೋಟೋಗ್ರಾಫರ್​ ಇಬ್ಬರನ್ನೂ ಪೋಸ್​ ನೀಡುವ ರೀತಿಯಲ್ಲಿ ನಿಲ್ಲಿಸಿ ಪೋಟೋ ತೆಗೆಯಬೇಕು ಎನ್ನುವಷ್ಟರಲ್ಲಿ ಲಾಮರ್​ ಮಂಡಿಯೂರಿ ಕುಳಿತು ಪ್ರಪೋಸ್​ ಮಾಡಿದ್ದಾನೆ. ಇದನ್ನು ಕಂಡು ವೇಲೆನ್ಸಿಯಾ ಖುಷಿಯಿಂದ ಅಚ್ಚರಿ ವ್ಯಕ್ತಪಡಿಸಿದ್ದಾರೆ.  ವಿಡಿಯೋ ನೋಡಿ ನೆಟ್ಟಿಗರು ಸಂತೋಷದ ಎಮೋಜಿಗಳನ್ನು ಶೇರ್​ ಮಾಡಿಕೊಂಡಿದ್ದಾರೆ.

 ಇದನ್ನೂ ಓದಿ:

ಪರಿಸರದ ಪ್ರಾಮುಖ್ಯತೆಯನ್ನು ಸಾರುವ ಅತಿದೊಡ್ಡ ಚಿತ್ರ ಬಿಡಿಸಿ ಗಿನ್ನಿಸ್​​ ವರ್ಲ್ಡ್​ ರೆಕಾರ್ಡ್​ ನಿರ್ಮಿಸಿದ ಯುವಕ

Follow us on

Related Stories

Most Read Stories

Click on your DTH Provider to Add TV9 Kannada