ಸಮುದ್ರದಲ್ಲಿ ಸ್ಫೋಟಗೊಂಡ ಜ್ವಾಲಾಮುಖಿ: 20 ಕಿಮೀಗಳಷ್ಟು ದೂರ ಹರಡಿದ ಅನಿಲ

ಪೆಸಿಪಿಕ್​ ದ್ವೀಪ ರಾಷ್ಟ್ರವಾದ ಟಾಂಗಾದಲ್ಲಿ ಸಮುದ್ರದ ನೀರಿನೊಳಗೆ ಜ್ವಾಲಾಮುಖಿ ಸ್ಪೋಟಗೊಂಡಿದೆ. ಇದರಿಂದ ನ್ಯೂಜಿಲ್ಯಾಂಡ್​​, ಯುಎಸ್​ ಸೇರಿದಂತೆ ಹಲವು ಸ್ಥಳಗಳಲ್ಲಿ ಸುನಾಮಿ ಆತಂಕ ಎದುರಾಗಿದೆ.

ಸಮುದ್ರದಲ್ಲಿ ಸ್ಫೋಟಗೊಂಡ ಜ್ವಾಲಾಮುಖಿ: 20 ಕಿಮೀಗಳಷ್ಟು ದೂರ ಹರಡಿದ ಅನಿಲ
ಜ್ವಾಲಾಮುಖಿ ಸ್ಫೋಟಗೊಂಡಿರುವುದು

ಪೆಸಿಪಿಕ್​ ದ್ವೀಪ ರಾಷ್ಟ್ರವಾದ ಟಾಂಗಾದಲ್ಲಿ ಸಮುದ್ರದ ನೀರಿನೊಳಗೆ ಜ್ವಾಲಾಮುಖಿ ಸ್ಪೋಟಗೊಂಡಿದೆ. ಇದರಿಂದ ನ್ಯೂಜಿಲ್ಯಾಂಡ್​​, ಯುಎಸ್​ ಸೇರಿದಂತೆ ಹಲವು ಸ್ಥಳಗಳಲ್ಲಿ ಸುನಾಮಿ ಆತಂಕ ಎದುರಾಗಿದೆ. Hunga Tonga-Hunga Haʻapai  ಎನ್ನುವ ಜ್ವಾಲಾಮುಖಿ ದ್ವೀಪದಲ್ಲಿ ನೀರಿನೊಳಗಿನಿಂದ ಜ್ವಾಲಾಮುಖಿ ಸ್ಪೋಟಗೊಂಡಿದೆ. ಇದು ಹೆಚ್ಚು ಸಕ್ರಿಯವಾಗಿರುವ ಜ್ವಾಲಾಮುಖಿ ದ್ವೀಪವಾಗಿದೆ. ಜ್ವಾಲಾಮುಖಿ ಸ್ಪೋಟಗೊಂಡು 20 ಕಿಮೀ ಹೊಗೆ ಸಹಿತ ಅನಿಲ ಚಿಮ್ಮಿದ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ  ಹಂಚಿಕೊಳ್ಳಲಾಗಿದೆ. ಸದ್ಯ ಇದರ ವಿಡಿಯೋಗಳು ಜಗತ್ತಿನ ಗಮನ ಸೆಳೆದಿದ್ದು, ವೈರಲ್​​ ಆಗಿದೆ.

ಶನಿವಾರ ಜ್ವಾಲಾಮುಖಿ ಸ್ಫೋಟಗೊಳ್ಳುತ್ತಿದ್ದಂತೆ ಟಾಂಗಾದ ಸುತ್ತಮುತ್ತ ಭಾರೀ ಗಾಳಿ, ಗುಡುಗು, ಮಳೆ ಸಂಭಿಸಿದೆ ಎಂದು ವರದಿಯಾಗಿದೆ. ಸದ್ಯ ಗ್ರಾಮಗಳಲ್ಲಿ ವಿದ್ಯುತ್​ ಹಾಗೂ ಇಂಟರ್​ನೆಟ್​ ಸಂಪರ್ಕ ಕಡಿತಗೊಂಡಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ. ಹೊಗೆಯಿಂದ ಕೂಡಿದ ನೀರು, ಅನಿಲಗಳು 20 ಕಿಮೀಗಳಷ್ಟು ಗಾಳಿಯಲ್ಲಿ ಹರಡಿದ ವಿಡಿಯೋವನ್ನು ಉಪಗ್ರಹದ ಮೂಲಕ ಸೆರೆಹಿಡಿಯಲಾಗಿದ್ದು, ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ.

ಇನ್ನು ಟಾಂಗಾ ಹವಾಮಾನ ಇಲಾಖೆ ಸುನಾಮಿ ಎಚ್ಚರಿಕೆಯನ್ನು ನೀಡಿದ್ದು, ಮನೆಗಳಲ್ಲಿರುವ ಕಿಟಕಿ, ಬಾಗಿಲುಗಳು ಅಲುಗಾಡುತ್ತಿವೆ ಎಂದು ಸ್ಥಳೀಯರು ಮಾಹಿತಿ ಹಂಚಿಕೊಂಡಿದ್ದಾರೆ. ಸ್ಥಳೀಯರನ್ನು ಪೊಲೀಸರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಸ್ಫೋಟದಿಂದ ಉಂಟಾದ ಬೂದಿಯ ಚೂರು ಮನೆಗಳ ಮೇಲೆ ಬೀಳುತ್ತಿವೆ ಎಂದು ಇಂಡಿಯನ್​ ಎಕ್ಸ್​ಪ್ರೆಸ್​ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ:

ಬಸ್​ನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ: ಸಹ ಪ್ರಯಾಣಿಕರ ಸಹಕಾರಕ್ಕೆ ಭಾರೀ ಮೆಚ್ಚುಗೆ

Published On - 6:44 pm, Sat, 15 January 22

Click on your DTH Provider to Add TV9 Kannada