ಬಸ್​ನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ: ಸಹ ಪ್ರಯಾಣಿಕರ ಸಹಕಾರಕ್ಕೆ ಭಾರೀ ಮೆಚ್ಚುಗೆ

ಮಹಿಳೆಯೊಬ್ಬರು ಬಸ್​ನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಮಹಿಳೆಗೆ ಹೆರಿಗೆ ನೋವು ಆರಂಭವಾಗುತ್ತಲೇ ಡ್ರೈವರ್​ ಬಸ್​ ಅನ್ನು ಆಸ್ಪತ್ರೆಯ ಕಡೆಗೆ ತೆಗೆದುಕೊಂಡು ಹೋಗಿದ್ದಾನೆ.

ಬಸ್​ನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ: ಸಹ ಪ್ರಯಾಣಿಕರ ಸಹಕಾರಕ್ಕೆ ಭಾರೀ ಮೆಚ್ಚುಗೆ
ಬಸ್​ನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ
Follow us
TV9 Web
| Updated By: Pavitra Bhat Jigalemane

Updated on:Jan 15, 2022 | 4:50 PM

ಮನುಷ್ಯನ ಹುಟ್ಟು ಸಾವು ಎರಡೂ ಯಾವಾಗ ಸಂಭವಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹುಟ್ಟಿಗಾಗಲೀ ಸಾವಿಗಾಗಲೀ ಇಂತಹದ್ದೇ ಜಾಗ ಆಗಬೇಕೆಂದಿಲ್ಲ. ಇದೀಗ ಬಸ್​ನಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ (Birth) ನೀಡಿದ ಘಟನೆ ನಡೆದಿದೆ. ಬ್ರೆಜಿಲ್​ನ ರಿಯೋ ಡಿ ಜನೈರೋ ( Rio de Janeiro)ದಲ್ಲಿ ಈ ಘಟನೆ ನಡೆದಿದೆ. ಮಹಿಳೆಗೆ ಹೆರಿಗೆ ನೋವು ಆರಂಭವಾಗುತ್ತಿದ್ದಂತೆ ಇತರ ಪ್ರಯಾಣಿಕರು ಆಕೆಗೆ ಸಹಾಯದ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral)​ ಆಗಿದ್ದು ನೆಟ್ಟಿಗರ ಮನ ಗೆದ್ದಿದೆ.

ಗುಡ್​ನ್ಯೂಸ್​ ಮೂಮೆಂಟ್​ ಎನ್ನುವ ಇನ್ಸ್ಟಾಗ್ರಾಮ್​ ಪುಟ ಈ ವಿಡಿಯೋವನ್ನು ಹಂಚಿಕೊಂಡಿದೆ. ಮಹಿಳೆಯೊಬ್ಬರು ಬಸ್​ನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಮಹಿಳೆಗೆ ಹೆರಿಗೆ ನೋವು ಆರಂಭವಾಗುತ್ತಲೇ ಡ್ರೈವರ್​ ಬಸ್​ ಅನ್ನು ಆಸ್ಪತ್ರೆಯ ಕಡೆಗೆ ತೆಗೆದುಕೊಂಡು ಹೋಗಿದ್ದಾನೆ. ರಿಯೊ ಡಿ ಜನೈರೋದ ರೋಚಾ ಫರಿಯಾ ಆಸ್ಪತ್ರೆಗೆ ಮಹಿಳೆಯನ್ನು ಕರೆದೊಯ್ಯಲಾಯಿತು. ಅಲ್ಲಿಯ ಸಿಬ್ಬಂದಿಯ ಸಹಾಯ ಪಡೆದು ಸುಸೂತ್ರವಾಗಿ ಹೆರಿಗೆ ಮಾಡಿಸಲಾಗಿದೆ. ಬಸ್​ನಲ್ಲಿದ್ದ ಸಹ ಪ್ರಯಾಣಿಕರು ಕೂಡ ಮಹಿಳೆಗೆ ಸಹಾಯಮಾಡಿದ್ದಾರೆ. ಮಹಿಳೆ ಗಂಡು ಮಗುವುಗೆ ಜನ್ಮ ನೀಡಿದ್ದಾರೆ ಎಂದು ಮಾಹಿತಿ ಮೂಲಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆರೋಗ್ಯ ಇಲಾಖೆಯ ಹೇಳಿಕೆ ಉಲ್ಲೇಖಿಸಿ ತಾಯಿ ಮತ್ತು ಶಿಶು ಸುರಕ್ಷಿತವಾಗಿದ್ದಾರೆ ಎಂಬುದಾಗಿಯೂ  ಗುಡ್​ನ್ಯೂಸ್​ ಮೂಮೆಂಟ್​ ಮಾಹಿತಿ ಹಂಚಿಕೊಂಡಿದೆ.

ವಿಡಿಯೋ ಹಂಚಿಕೊಂಡಾಗಿನಿಂದ ಈ ವರೆಗೆ 16 ಗಂಟೆಗಳಲ್ಲಿ 50 ಸಾವಿರ ಲೈಕ್ಸ್​ಗಳನ್ನು ಪಡೆದಿದ್ದು, ಜಗತ್ತಿನಾದ್ಯಂತ ವಿಡಿಯೋ ವೈರಲ್​ ಅಗಿದೆ. ವಿಡಿಯೋ ನೋಡಿ ನೆಟ್ಟಿಗರು ಮಾನವೀಯತೆ ಇನ್ನೂ ಜೀವಂತವಾಗಿದೆ ಎಂದು ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:

ಕರ್ಮ ರಿಟರ್ನ್ಸ್​: ಬಾಲವನ್ನು ಎಳೆಯಲು ಹೋದವನನ್ನು ಒದ್ದು ಬೀಳಿಸಿದ ಒಂಟೆ; ವಿಡಿಯೋ ವೈರಲ್​​

Published On - 4:48 pm, Sat, 15 January 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್