AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

NFT ಲಾಂಚ್​ಗೆ ಮುಂದಾದ ಬಚ್ ​​ಪನ್ ​ಕಾ ಪ್ಯಾರ್​ ಖ್ಯಾತಿಯ ಸಹದೇವ್​ ದಿರ್ಡೋ

ರಾತ್ರಿ ಬೆಳಗಾಗುವಷ್ಟರಲ್ಲಿ ಇಂಟರ್​ನೆಟ್​ ಸೆನ್ಸೇಷನ್​ ಕ್ರಿಯೆಟ್​ ಮಾಡಿದ್ದ 10 ವರ್ಷದ ಬಾಲಕ ಸಹದೇವ್​ ದಿರ್ಡೋ ಇದೀಗ NFT (Non Fungible Token) ಪ್ಲಾಟ್​ಫಾರ್ಮ್​ಗೆ ಕಾಲಿಡಲು ಮುಂದಾಗಿದ್ದಾರೆ.

NFT ಲಾಂಚ್​ಗೆ ಮುಂದಾದ ಬಚ್ ​​ಪನ್ ​ಕಾ ಪ್ಯಾರ್​  ಖ್ಯಾತಿಯ ಸಹದೇವ್​ ದಿರ್ಡೋ
ಸಹದೇವ್​ ದಿರ್ಡೋ
TV9 Web
| Edited By: |

Updated on: Jan 15, 2022 | 2:12 PM

Share

ರಾತ್ರಿ ಬೆಳಗಾಗುವಷ್ಟರಲ್ಲಿ ಇಂಟರ್​ನೆಟ್​ ಸೆನ್ಸೇಷನ್​ ಕ್ರಿಯೆಟ್​ ಮಾಡಿದ್ದ 10 ವರ್ಷದ ಬಾಲಕ ಸಹದೇವ್​ ದಿರ್ಡೋ ಇದೀಗ NFT (Non Fungible Token) ಪ್ಲಾಟ್​ಫಾರ್ಮ್​ಗೆ ಕಾಲಿಡಲು ಮುಂದಾಗಿದ್ದಾರೆ. 2021ರ ಜುಲೈನಲ್ಲಿ ಬಚ್​ ಪನ್​ ಕಾ ಪ್ಯಾರ್​ ಹಾಡಿದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಹದೇವ್ ಹೊಸ​ ಟ್ರೆಂಡ್ ಕ್ರಿಯೇಟ್​ ಮಾಡಿದ್ದರು. ಇದೀಗ ತಮ್ಮ ಸಂಗೀತದ ಆಲ್ಬಂಗಳನ್ನು ಶೇಖರಿಸಿಡಲು Non Fungible Token ಅನ್ನು ಲಾಂಚ್​ ಮಾಡುತ್ತಿದ್ದಾರೆ.

ಸಹದೇವ್​ ದಿರ್ಡೋ ಹೇಳಿದ ಬಚ್​ ಪನ್​ ಕಾ ಪ್ಯಾರ್​ ಹಾಡು ಒಂದೇ ದಿನದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಬಾಲಿವುಡ್​ನ ರಾಪ್​ ಸಿಂಗರ್​ ಬಾದ್ ಷಾ ಕೂಡ ಮೆಚ್ಚಿಕೊಂಡು ಸಹದೇವ್​ ಅವರ ಹಾಡನ್ನು ರಾಪ್​ ಸಾಂಗ್​ಗೆ ಮಿಕ್ಸ್​ ಮಾಡಿ ಹಾಡಿದ್ದರು. ಈ ಹಾಡು ನೆಟ್ಟಿಗರನ್ನು ಸೆಳೆದಿತ್ತು.  ಕಳದೆ ತಿಂಗಳು ಸಹದೇವ್​ ದಿರ್ಡೋ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಬೈಕ್​ನಲ್ಲಿ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿ ತೀವ್ರವಾಗಿ ಗಾಯಗೊಂಡಿದ್ದರು. ಈ ವೇಳೆ ಬಾದ್​ ಷಾ ಸಹದೇವ್​ ಅವರ ಆರೋಗ್ಯದ ಬಗ್ಗೆ ಅಪ್ಡೇಟ್​ ನೀಡಿದ್ದರು. ಚತ್ತೀಸಗಡ ಸರ್ಕಾರ ಸಹದೇವ್​ ಅವರ ಚಿಕಿತ್ಸೆಯ ವೆಚ್ಚವನ್ನು ಭರಿಸಿತ್ತು.

ಇದೀಗ ಚಿಕಿತ್ಸೆ ಪಡೆದು ಸಹದೇವ್​ ಆಸ್ಪತ್ರೆಯಿಂದ ಹೊರಬಂದಿದ್ದಾರೆ. ವಿಡಿಯೋ ಮೂಲಕ ಚಿಕಿತ್ಸೆ ನೀಡಿದ ವೈದ್ಯರು ಮತ್ತು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.  ಸಹದೇವ್​  ಕಳೆದ ಜುಲೈನಲ್ಲಿ ಶಾಲೆಯಲ್ಲಿ ಯುನಿಫಾರ್ಮ ಧರಿಸಿ ಶಿಕ್ಷಕರ ಎದುರು ಬಚ್​ ಪನ್​ ಕಾ ಪ್ಯಾರ್ ಹಾಡನ್ನು ಹಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಹಾಡಿನ ವಿಡಿಯೋ ಒಂದೇ ರಾತ್ರಿಯಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಇದೀಗ Non Fungible Token ನಲ್ಲಿ ಖಾತೆ ತೆರೆಯುವ ಮೂಲಕ ತನ್ನ ಸಂಗೀತವನ್ನು ಶೇಖರಿಸಿಟ್ಟು ಜನರಿಗೆ ತಲುಪುವ ಪ್ರಯತ್ನದಲ್ಲಿದ್ದಾರೆ. nOFTEN  ಎನ್ನುವ ಮಾರ್ಕೆಟ್​ನಲ್ಲಿ NFT ಲಾಂಚ್ ಮಾಡಲು ಸಹದೇವ್​ ತಯಾರಿ ನಡೆಸಿದ್ದಾರೆ.

 ಇದನ್ನೂ ಓದಿ:

ಶೀತ ಗಾಳಿಯ ಅಬ್ಬರಕ್ಕೆ ಪ್ಲೇಟ್​ನಲ್ಲೇ ಹೆಪ್ಪುಗಟ್ಟಿದ ಪಾಸ್ತಾ: ಫೋಟೋ ವೈರಲ್​

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ