ಶೀತ ಗಾಳಿಯ ಅಬ್ಬರಕ್ಕೆ ಪ್ಲೇಟ್​ನಲ್ಲೇ ಹೆಪ್ಪುಗಟ್ಟಿದ ಪಾಸ್ತಾ: ಫೋಟೋ ವೈರಲ್​

ಮೌಂಟ್ ವಾಷಿಂಗ್ಟನ್ ಅಬ್ಸರ್ವೇಟರಿ ಪ್ರಕಾರ ಸ್ಥಳೀಯರೊಬ್ಬರು ಮನೆಯಿಂದ ಹೊರಗೆ ಬಂದು ಪಾಸ್ತಾವನ್ನು ತಿನ್ನಲು ಯತ್ನಿಸಿದ್ದಾರೆ. ಆದರೆ ಕೇವಲ 15 ಸೆಕೆಂಡ್​ಗಳಲ್ಲಿ ಶೀತ ಗಾಳಿಯ ಅಬ್ಬರಕ್ಕೆ ಪೋರ್ಕ್​ಗೆ ಅಂಟಿಕೊಂಡಿದ್ದ ಪಾಸ್ತಾ ಗಟ್ಟಿಯಾಗಿದೆ.

ಶೀತ ಗಾಳಿಯ ಅಬ್ಬರಕ್ಕೆ ಪ್ಲೇಟ್​ನಲ್ಲೇ ಹೆಪ್ಪುಗಟ್ಟಿದ ಪಾಸ್ತಾ: ಫೋಟೋ ವೈರಲ್​
ಹೆಪ್ಪುಗಟ್ಟಿದ ಆಹಾರ
Follow us
TV9 Web
| Updated By: Pavitra Bhat Jigalemane

Updated on: Jan 15, 2022 | 12:54 PM

ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಮೈಕೊರೆಯುವ ಚಳಿ ಆರಂಭವಾಗಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಹಿಮಪಾತವೂ ಸಂಭವಿಸುತ್ತಿದ್ದು ಜನ ಮೈ ನಡುಗುವ ಚಳಿಗೆ ಹೆದರಿದ್ದಾರೆ. ಈ ನಡುವೆ ನ್ಯೂ ಹ್ಯಾಂಪ್‌ಶೈರ್‌ನ ಮೌಂಟ್ ವಾಷಿಂಗ್ಟನಲ್ಲಿ ಮೈನಸ್​ 34 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿದೆ. ಇದರಿಂದ ಆಹಾರ ಪದಾರ್ಥಗಳೆಲ್ಲವೂ ಗಟ್ಟಿಯಾಗುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಪ್ಲೇಟ್​ನಲ್ಲಿ ಹಾಕಿದ ಆಹಾರವು ಪೋರ್ಕ್​​ ಚಮಚಕ್ಕೆ ಸಿಲುಕಿ ಗಟ್ಟಿಯಾಗಿರುವ ಫೋಟೋ ವೈರಲ್​ ಆಗಿದೆ.  ಮೌಂಟ್ ವಾಷಿಂಗ್ಟನ್ ಅಬ್ಸರ್ವೇಟರಿ (Mount Washington Observatory) ಎನ್ನುವ ಖಾಸಗಿ ವೈಜ್ಞಾನಿಕ ಮತ್ತು ಶಿಕ್ಷಣ ಸಂಸ್ಥೆ ಇದರ ಫೊಟೋ ಹಂಚಿಕೊಂಡಿದ್ದು, ಸಖತ್​ ವೈರಲ್​ ಆಗಿದೆ.

ಮೌಂಟ್ ವಾಷಿಂಗ್ಟನ್ ಅಬ್ಸರ್ವೇಟರಿ ಪ್ರಕಾರ ಸ್ಥಳೀಯರೊಬ್ಬರು ಮನೆಯಿಂದ ಹೊರಗೆ ಬಂದು ಪಾಸ್ತಾವನ್ನು ತಿನ್ನಲು ಯತ್ನಿಸಿದ್ದಾರೆ. ಆದರೆ ಕೇವಲ 15 ಸೆಕೆಂಡ್​ಗಳಲ್ಲಿ ಶೀತ ಗಾಳಿಯ ಅಬ್ಬರಕ್ಕೆ ಪೋರ್ಕ್​ಗೆ ಅಂಟಿಕೊಂಡಿದ್ದ ಪಾಸ್ತಾ ಹೆಪ್ಪುಗಟ್ಟಿದೆ. ಸದ್ಯ ಇಲ್ಲಿಯ ತಾಪಮಾನ ಮೈನಸ್​ 30 ಡಿಗ್ರಿ ಸೆಲ್ಸಿಯಸ್​ ಇದೆ. ಜತೆಗೆ ಗಾಳಿಯು 65 mph ಇದೆ ಎಂದು ಮಾಹಿತಿ ನೀಡಿ ಪಾಸ್ತಾ ಪೋರ್ಕ್​ಗೆ ಅಂಟಿಕೊಂಡು ಹೆಪ್ಪುಗಟ್ಟಿದ ಫೋಟೋವನ್ನು ಶೇರ್​ ಮಾಡಲಾಗಿದೆ.

ಈ ಬಗ್ಗೆ ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದು ಕಳೆದ ಎರಡು ದಿನಗಳ ಹಿಂದೆ 65mph  ಹೆಚ್ಚು ಗಾಳಿಯ ವೇಗವಿದ್ದು ಮೈನಸ್​ 34 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿದೆ ಎಂದು ತಿಳಿಸಿದ್ದಾರೆ.  ಸದ್ಯ ಸಾಮಜಿಕ ಜಾಲತಾಣದಲ್ಲಿ ಫೋಟೋ ವೈರಲ್​ ಆಗಿದೆ.

ಇದನ್ನೂ ಓದಿ:

ತಂದೆಗೆ ವ್ಯಾಕ್ಸಿನ್​​ ಕೊಡಿಸಲು 6 ಗಂಟೆಗಳ ಕಾಲ ಬೆನ್ನಿನ ಮೇಲೆ ಹೊತ್ತೊಯ್ದ ಯುವಕ: ಆಧುನಿಕ ಶ್ರವಣಕುಮಾರ ಎಂದ ನೆಟ್ಟಿಗರು

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ