10ನೇ ವರ್ಷಕ್ಕೆ ಎರಡು ಕಂಪನಿಗಳ ಒಡತಿಯಾದ ಈ ಬಾಲಕಿಗೆ 15ನೇ ವಯಸ್ಸಿಗೇ ನಿವೃತ್ತಿ

ಆಸ್ಟ್ರೇಲಿಯಾದ 10 ವರ್ಷದ ಬಾಲಕಿಯೊಬ್ಬಳು  ಎರಡು ಕಂಪನಿಗಳ ಒಡತಿಯಾಗಿದ್ದಾಳೆ. ಅಚ್ಚರಿ ಎಂದರೆ ಈಗ 15 ನೇ ವರ್ಷಕ್ಕೆ ನಿವೃತ್ತಿ ಹೊಂದುವ ಯೋಚನೆಯಲ್ಲಿದ್ದಾಳೆ.

10ನೇ ವರ್ಷಕ್ಕೆ ಎರಡು ಕಂಪನಿಗಳ ಒಡತಿಯಾದ ಈ ಬಾಲಕಿಗೆ 15ನೇ ವಯಸ್ಸಿಗೇ ನಿವೃತ್ತಿ
ಪಿಕ್ಸಿ ಕರ್ಟಿಸ್

ಆಸ್ಟ್ರೇಲಿಯಾದ 10 ವರ್ಷದ ಬಾಲಕಿಯೊಬ್ಬಳು  ಎರಡು ಕಂಪನಿಗಳ ಒಡತಿಯಾಗಿದ್ದಾಳೆ. ಅಚ್ಚರಿ ಎಂದರೆ ಈಗ 15 ನೇ ವರ್ಷಕ್ಕೆ ನಿವೃತ್ತಿ ಹೊಂದುವ ಯೋಚನೆಯಲ್ಲಿದ್ದಾಳೆ. ಹೌದು ಪಿಕ್ಸಿ ಕರ್ಟಿಸ್​ ಎನ್ನುವ 10 ವರ್ಷದ ಬಾಲಕಿ ಮಕ್ಕಳ ಆಟಿಕೆಯನ್ನು ತಯಾರಿಸುವ ಎರಡು ಕಂಪನಿಗಳನ್ನು ನಿಭಾಯಿಸುವ ಮೂಲಕ ಅತೀ ಚಿಕ್ಕ ವಯಸ್ಸಿನಲ್ಲಿಯೇ ಮಲ್ಟಿಮಿಲಿಯನೇರ್​ ಆಗಿದ್ದಾಳೆ. ಕರ್ಟಿಸ್​ ಎನ್ನುವ ಆಟಿಕೆ ತಯಾರಿಕಾ ಕಂಪನಿಯನ್ನು ಪಿಕ್ಸಿ ಆರಂಭಿಸಿದ್ದಾಳೆ. ಈಗಾಗಲೇ ಈಕೆಯ ಸಂಸ್ಥೆ ಸಾಕಷ್ಟು ಪ್ರಮಾಣದಲ್ಲಿ ಲಾಭಗಳಿಸುತ್ತಿದೆ. 

ಪಿಕ್ಸಿ ತಾಯಿ ರಾಕ್ಸಿ ಜೆಸೆಂಕೊ ಮಗಳ ಉದ್ಯಮಕ್ಕೆ ಸಾಥ್​ ನೀಡಿದ್ದಾರೆ. ಪಿಕ್ಸಿಯ ಕರ್ಟಿಸ್​ ಕಂಪನಿಯ ಆಟಿಕೆಗಳು ಮಾರುಕಟ್ಟೆಗೆ ಬಂದು 48 ಗಂಟೆಗಳೊಳಗೆ ಮಾರಾಟವಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಲ್ಲದೆ ಪಿಕ್ಸಿ ತಾಯಿ ರಾಕ್ಸಿ ಜಾಸೆಂಕೊ ಅವರು ಈ ಮೊದಲು ಆರಂಭಿಸಿದ ಪಿಕ್ಸಿ ಬೌಸ್​ ಎನ್ನುವ ಕಂಪನಿಯನ್ನು ಆರಂಭಿಸಿದ್ದರು. ಸದ್ಯ ಆ ಕಂಪನಿಯನ್ನು ಕೂಡ ಪಿಕ್ಸಿ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ 10 ನೇ ವರ್ಷದಲ್ಲೇ ಎರಡು ಕಂಪನಿಗಳ ಒಡತಿಯಾಗಿ ಪಿಕ್ಸಿ ಮಿಲಿಯನರ್​ ಆಗಿದ್ದಾರೆ. ಪಿಕ್ಸಿ ಸಾಧನೆಗೆ ಸದ್ಯ ಜಗತ್ತಿನಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಆಕೆಯ ಸ್ಟೋರಿ ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.

ಅವಳು ಬಯಸಿದರೆ 15 ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದಬಹುದು. ನಮ್ಮ ಕುಟುಂಬದ ತಮಾಷೆಯೆಂದರೆ ನಾನು 100 ವರ್ಷ ವಯಸ್ಸಿನವರೆಗೆ ಕೆಲಸ ಮಾಡುತ್ತೇನೆ ಆದರೆ ಪಿಕ್ಸೀ 15 ನೇ ವಯಸ್ಸಿನಲ್ಲಿ ನಿವೃತ್ತರಾಗುತ್ತಾರೆ.  ನನಗೆ ಖಂಡಿತವಾಗಿಯೂ ತಿಳಿದಿದೆ ಯಾರು ಬುದ್ಧಿವಂತರು ಎನ್ನುವುದು ಎಂದು ಪಿಕ್ಸಿ ತಾಯಿ ರಾಕ್ಸಿ ಜೆಸೆಂಕೊ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಜೆಸೆಂಕೋ ಕೂಡ ಸ್ವೆಟಿ ಬೆಟ್ಟಿ PR ಸೇರಿದಂತೆ ಹಲವು ಯಶಸ್ವಿ ಉದ್ಯಮಗಳನ್ನು ನಡೆಸುತ್ತಾರೆ.

ಇದನ್ನೂ ಓದಿ:

10 ಬಿಲಿಯನ್​ ವೀಕ್ಷಣೆ ಪಡೆದ ಮೊದಲ ಯುಟ್ಯೂಬ್​ ವಿಡಿಯೋ ಹೆಗ್ಗಳಿಕೆ ಗಳಿಸಿಕೊಂಡ ಬೇಬಿ ಶಾರ್ಕ್ ಡ್ಯಾನ್ಸ್​ ವಿಡಿಯೋ

Click on your DTH Provider to Add TV9 Kannada