ಕುರಿಗಳ ದೊಡ್ಡ ಹಿಂಡನ್ನು ನಾಯಿಮರಿ ಹೇಗೆ ನಿಭಾಯಿಸುತ್ತೆ ನೋಡಿ; ವೈರಲ್ ಆದ ವಿಡಿಯೋ ಇಲ್ಲಿದೆ

ಈ ವಿಡಿಯೋ ನೋಡುತ್ತಿದ್ದರೆ ಮುಖದಲ್ಲಿ ನಗು ಮೂಡುತ್ತದೆ. ಮನಸ್ಸಿಗೆ ಒಂಥರಾ ಸಂತೋಷ ಕೊಡುತ್ತದೆ. ಒಮ್ಮೆ ಈ ವಿಡಿಯೋವನ್ನು ನೋಡಿದರೆ ಮತ್ತೆ ಮತ್ತೆ ನೋಡಬೇಕು ಅನಿಸುತ್ತೆ.

ಕುರಿಗಳ ದೊಡ್ಡ ಹಿಂಡನ್ನು ನಾಯಿಮರಿ ಹೇಗೆ ನಿಭಾಯಿಸುತ್ತೆ ನೋಡಿ; ವೈರಲ್ ಆದ ವಿಡಿಯೋ ಇಲ್ಲಿದೆ
ಕುರಿಗಳ ದೊಡ್ಡ ಹಿಂಡನ್ನು ನಾಯಿಮರಿ ನಿಭಾಯಿಸುತ್ತಿದೆ

ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೆ ಹತ್ತಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ವೈರಲ್ ಆದ ಕೆಲ ವಿಡಿಯೋಗಳು ತೀರಾ ಫನ್ನಿಯಾಗಿರುತ್ತವೆ. ಇನ್ನು ಕೆಲವು ಗಂಭೀರ ವಿಷಯಗಳನ್ನ ಹೊಂದಿರುತ್ತವೆ. ಅಲ್ಲದೇ ಕೆಲ ವಿಡಿಯೋಗಳು ಭಾರೀ ಚರ್ಚೆಗೂ ಕಾರಣವಾಗಬಹುದು. ಸದ್ಯ ವೈರಲ್ ಆದ ವಿಡಿಯೋ ನಾಯಿಮರಿ ಮತ್ತು ಕುರಿಗಳದ್ದು. ಪುಟ್ಟ ನಾಯಮರಿ ಕುರಿಗಳ ದೊಡ್ಡ ಹಿಂಡಿನ ಜೊತೆ ಹೆಜ್ಜೆ ಹಾಕಿದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ವಿಡಿಯೋ ನೋಡುತ್ತಿದ್ದರೆ ಮುಖದಲ್ಲಿ ನಗು ಮೂಡುತ್ತದೆ. ಮನಸ್ಸಿಗೆ ಒಂಥರಾ ಸಂತೋಷ ಕೊಡುತ್ತದೆ. ಒಮ್ಮೆ ಈ ವಿಡಿಯೋವನ್ನು ನೋಡಿದರೆ ಮತ್ತೆ ಮತ್ತೆ ನೋಡಬೇಕು ಅನಿಸುತ್ತೆ. ಕುರಿಗಳ ದೊಡ್ಡ ಹಿಂಡನ್ನು ಪುಟ್ಟ ನಾಯಿಮರಿ ನಿಭಾಯಿಸುವುದನ್ನ ವೈರಲ್ ಆದ ವಿಡಿಯೋದಲ್ಲಿ ಕಾಣಬಹುದು. ವಿಡಿಯೋದಲ್ಲಿ ಮೊದಲಿಗೆ ಕುರಿಗಳ ದೊಡ್ಡ ಹಿಂಡಿನ ಪಕ್ಕದಲ್ಲಿ ಸಣ್ಣ ನಾಯಿಯೊಂದು ನಡೆದುಕೊಂಡು ಹೋಗುವುದನ್ನ ನೋಡಬಹುದು. ನಂತರ ನಾಯಿಮರಿ ಕೆಲವೇ ಕ್ಷಣಗಳಲ್ಲಿ ನಿಲ್ಲುತ್ತದೆ. ಆಗ ಕುರಿಯೊಂದು ತನ್ನ ಬಾಯಿಂದ ನಾಯಿಮರಿಯನ್ನು ಮುದ್ದಾಡುತ್ತದೆ. 3ರಿಂದ ನಾಲ್ಕು ಸೆಕೆಂಡುಗಳ ಕಾಲ ನಾಯಿಮರಿ ಮತ್ತು ಕುರಿ ನಡುವೆ ಸಂವಹನ ನಡೆಯುತ್ತದೆ. ಆ ಬಳಿಕ ನಾಯಿಮರಿ ಕುರಿಯೊಂದಿಗೆ ಮುಂದೆ ಹೆಜ್ಜೆ ಹಾಕುತ್ತದೆ.

ವಿಡಿಯೋ ಅಪ್​ಲೋಡ್​ ಆಗಿ ಮೂರು ಗಂಟೆಯೊಳಗೆ ಸುಮಾರು ಒಂದು ಲಕ್ಷದ 32 ಸಾವಿರಕ್ಕೂ ಹೆಚ್ಚು ಅಪ್​ವೋಟ್​ಗಳನ್ನ ಪಡೆದುಕೊಂಡಿದೆ. 2,000 ಕ್ಕೂ ಹೆಚ್ಚ ಜನ ಕಾಮೆಂಟ್ ಮಾಡಿದ್ದಾರೆ.

ವಿಡಿಯೋಗೆ ಕಾಮೆಂಟ್ ಮಾಡಿದವರಲ್ಲಿ ಒಬ್ಬರು, ನಾಯಿಮರಿಯನ್ನು ಕುರಿಗಳ ಜೊತೆ ಬೆಳೆಸಿರಬಹುದು. ಹೀಗಾಗಿ ಅವುಗಳ ಜೊತೆ ನಾಯಿಮರಿ ಹೆಚ್ಚು ಬಾಂಧವ್ಯ ಹೊಂದಿದೆ ಅಂತ ನನಗೆ ಅನಿಸುತ್ತಿದೆ ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Anatolian shepherd dog puppy in training from aww

ಇದನ್ನೂ ಓದಿ

ಸಲ್ಮಾನ್​ ಖಾನ್ ಫಾರ್ಮ್​ಹೌಸ್​ ಬೆಲೆ 80 ಕೋಟಿ ರೂ.! ಸಲ್ಲು ಮೆಚ್ಚಿನ ಈ ಸ್ಥಳದಲ್ಲಿ ಏನೆಲ್ಲ ಇದೆ?

ಮೈಸೂರಿನಲ್ಲಿ ತಯಾರಾಗುತ್ತಿದ್ದ ಕನ್ನಡಿಗರ ಹೆಮ್ಮೆಯ ಯೆಜ್ಡಿ ಬೈಕ್ ಮೂರು ಹೊಸ ಅವತಾರಗಳಲ್ಲಿ ಮರುಹುಟ್ಟು ಪಡೆದಿದೆ!

Click on your DTH Provider to Add TV9 Kannada