AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಮಾನ್​ ಖಾನ್ ಫಾರ್ಮ್​ಹೌಸ್​ ಬೆಲೆ 80 ಕೋಟಿ ರೂ.! ಸಲ್ಲು ಮೆಚ್ಚಿನ ಈ ಸ್ಥಳದಲ್ಲಿ ಏನೆಲ್ಲ ಇದೆ?

Salman Khan Farmhouse: ಸಲ್ಮಾನ್​ ಖಾನ್​ ಅವರಿಗೆ ತಮ್ಮ ಪನ್ವೇಲ್​ ಫಾರ್ಮ್​ಹೌಸ್​ ಎಂದರೆ ಅಚ್ಚುಮೆಚ್ಚು. ಶೂಟಿಂಗ್​ ಇಲ್ಲದಿರುವಾಗ ಅವರು ಫಾರ್ಮ್​ಹೌಸ್​ನಲ್ಲೇ ಕಾಲ ಕಳೆಯುತ್ತಾರೆ.

ಸಲ್ಮಾನ್​ ಖಾನ್ ಫಾರ್ಮ್​ಹೌಸ್​ ಬೆಲೆ 80 ಕೋಟಿ ರೂ.! ಸಲ್ಲು ಮೆಚ್ಚಿನ ಈ ಸ್ಥಳದಲ್ಲಿ ಏನೆಲ್ಲ ಇದೆ?
ಸಲ್ಮಾನ್​ ಖಾನ್​ ಫಾರ್ಮ್​ಹೌಸ್
TV9 Web
| Edited By: |

Updated on: Jan 15, 2022 | 8:13 AM

Share

ಸಿನಿಮಾಗಳಲ್ಲಿ ನಟಿಸುವ ಮೂಲಕ ಸಲ್ಮಾನ್​ ಖಾನ್ (Salman Khan)​ ಅವರು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಜಾಹೀರಾತುಗಳಿಂದಲೂ ಅವರಿಗೆ ಕೈತುಂಬ ಸಂಭಾವನೆ ಸಿಗುತ್ತದೆ. ಬಿಗ್​ ಬಾಸ್​ ನಿರೂಪಣೆ ಮೂಲಕವೂ ಸಲ್ಲು ಸಿಕ್ಕಾಪಟ್ಟೆ ಹಣ ಸಂಪಾದಿಸುತ್ತಾರೆ. ಶೂಟಿಂಗ್​ ಇಲ್ಲದಿರುವಾಗ ಅವರು ಹೆಚ್ಚಿನ ಸಮಯವನ್ನು ಫಾರ್ಮ್​ಹೌಸ್​ನಲ್ಲಿ ಕಳೆಯುತ್ತಾರೆ. ಮಂಬೈನ ಹೊರವಲಯದ ಪನ್ವೇಲ್​ನಲ್ಲಿ ಅವರ ಫಾರ್ಮ್​ಹೌಸ್​ (Salman Khan Farmhouse) ಇದೆ. ಮೊದಲ ಬಾರಿಗೆ ಲಾಕ್​ಡೌನ್​ ಆಗಿದ್ದಾಗ ಸಲ್ಮಾನ್​ ಖಾನ್​ ಅವರು ಅಲ್ಲಿಯೇ ಕಾಲ ಕಳೆದಿದ್ದರು. ಅದು ಅವರ ನೆಚ್ಚಿನ ಸ್ಥಳ. ಅತಿಥಿಗಳನ್ನು ಕರೆದು ಪಾರ್ಟಿ ಮಾಡಲು ಕೂಡ ಅದು ಅವರ ಬೆಸ್ಟ್​ ಲೊಕೇಷನ್​. ಹಾಗಾದ್ರೆ ಈ ಫಾರ್ಮ್​ಹೌಸ್​ನ ಬೆಲೆ ಎಷ್ಟು ಇರಬಹುದು ಎಂಬ ಪ್ರಶ್ನೆ ಎಲ್ಲರ ಮನದಲ್ಲೂ ಕೊರೆಯುತ್ತಲೇ ಇದೆ. ಅದಕ್ಕೀಗ ಉತ್ತರ ಸಿಕ್ಕಿದೆ. ಒಂದು ಅಂದಾಜಿನ ಪ್ರಕಾರ ಬರೋಬ್ಬರಿ 80 ಕೋಟಿ ರೂಪಾಯಿಗೆ ಈ ಫಾರ್ಮ್​ಹೌಸ್​ ಬೆಲೆಬಾಳುತ್ತದೆ. ಈ ತೋಟದ ಮನೆಯಲ್ಲಿ ಏನುಂಟು ಏನಿಲ್ಲ ಎಂಬುದನ್ನು ತಿಳಿಯಲು ಈ ಸುದ್ದಿ ಪೂರ್ತಿ ಓದಿ..

ಸಲ್ಮಾನ್​ ಖಾನ್​ ಅವರ ಪನ್ವೇಲ್​ ಫಾರ್ಮ್​ಹೌಸ್​ ಬರೋಬ್ಬರಿ 150 ಎಕರೆ ವಿಸ್ತೀರ್ಣ ಹೊಂದಿದೆ. ಇದರಲ್ಲಿ ಮೂರು ಬೃಹತ್​ ಬಂಗಲೆಗಳಿವೆ. ನೂರಾರು ಅತಿಥಿಗಳ ವಾಸ್ತವ್ಯಕ್ಕೆ ಅನುಕೂಲ ಆಗುವಷ್ಟು ಸೌಲಭ್ಯ ಇದೆ. ಸ್ವಿಮಿಂಗ್​ ಪೂಲ್​ ಮತ್ತು ಜಿಮ್​ ಕೂಡ ಈ ಫಾರ್ಮ್​ಹೌಸ್​ನಲ್ಲಿ ಇದೆ. ಪ್ರತಿ ಬಾರಿ ಸಲ್ಮಾನ್​ ಖಾನ್​ ಅವರು ಇದೇ ಫಾರ್ಮ್​ ಹೌಸ್​ನಲ್ಲಿ ಬರ್ತ್​ಡೇ ಆಚರಿಸಿಕೊಳ್ಳುತ್ತಾರೆ.

ಇತ್ತೀಚೆಗೆ ಸಲ್ಲು ಹುಟ್ಟುಹಬ್ಬಕ್ಕೆ ಪನ್ವೇಲ್​ ಫಾರ್ಮ್​ಹೌಸ್​ ಸಿಂಗಾರಗೊಂಡಿತ್ತು. ಆದರೆ ಬರ್ತ್​ಡೇ ಸಂಭ್ರಮಕ್ಕೆ ತಯಾರಿ ನಡೆಯುತ್ತಿರುವಾಗಲೇ ಅವರಿಗೆ ಫಾರ್ಮ್​ಹೌಸ್​ನಲ್ಲಿ ಹಾವು ಕಚ್ಚಿತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಯಿತು ಎಂಬ ಸುದ್ದಿ ಕೇಳಿಬಂತು. ಬಳಿಕ ಸಲ್ಮಾನ್​ ಖಾನ್​ ತಂದೆ ಆ ಬಗ್ಗೆ ಮಾಹಿತಿ ನೀಡಿದರು. ಅದೊಂದು ವಿಷಕಾರಿಯಲ್ಲದ ಹಾವಾಗಿತ್ತು ಎಂದು ಅವರು ಹೇಳಿದ ಬಳಿಕ ಫ್ಯಾನ್ಸ್​ ನಿಟ್ಟುಸಿರು ಬಿಟ್ಟರು.

ಸದ್ಯ ಸಲ್ಮಾನ್​ ಖಾನ್​ ಕೈಯಲ್ಲಿ ಹತ್ತು ಹಲವು ಆಫರ್​ಗಳಿವೆ. ಪ್ರಸ್ತುತ ‘ಟೈಗರ್​ 3’ ಚಿತ್ರದ ಕೆಲಸಗಳತ್ತ ಅವರು ಗಮನ ಹರಿಸಿದ್ದಾರೆ. ‘ಬಜರಂಗಿ ಭಾಯಿಜಾನ್​’ ಸಿನಿಮಾದ ಸೀಕ್ವೆಲ್​ ಆಗಿ ‘ಪವನ ಪುತ್ರ ಭಾಯಿಜಾನ್​’ ಚಿತ್ರ ಸಿದ್ಧವಾಗಲಿದೆ. ಆ ಕುರಿತು ಕೂಡ ಬರ್ತ್​ಡೇ ಹಿಂದಿನ ದಿನವೇ ಸಲ್ಲು ಮಾಹಿತಿ ಹಂಚಿಕೊಂಡಿದ್ದರು. ಫಾರ್ಮ್​ಹೌಸ್​ ಮುಂಭಾಗ ಮಾಧ್ಯಮದವರ ಜೊತೆ ಮಾತನಾಡುವಾಗ ಅವರು ಈ ಸುದ್ದಿ ನೀಡಿದ್ದರು.

ಇದನ್ನೂ ಓದಿ:

ಸೀಕ್ರೆಟ್​ ಕ್ಯಾಮೆರಾದಲ್ಲಿ ಮಹಿಳಾ ಫ್ಯಾನ್ಸ್​ ಫೋಟೋ ಸೆರೆ ಹಿಡಿಯುತ್ತಿದ್ದ ಸಲ್ಮಾನ್​ ಖಾನ್​; ಕಾರಣ ಏನು?

ಸಲ್ಮಾನ್​ ಖಾನ್​ ಹೊಸ ಗರ್ಲ್​ಫ್ರೆಂಡ್​ ಸಮಂತಾ; ಆದ್ರೆ ಇದು ನೀವಂದುಕೊಂಡ ಸಮಂತಾ ಅಲ್ಲ

ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು