ಮತ್ತೆ ಒಂದಾದ ಆಮಿರ್​ ಖಾನ್-ಕಿರಣ್​ ರಾವ್​; ಅಚ್ಚರಿ ತಂದ ಮಾಜಿ ದಂಪತಿಯ ನಿರ್ಧಾರ

TV9kannada Web Team

TV9kannada Web Team | Edited By: Rajesh Duggumane

Updated on: Jan 15, 2022 | 3:27 PM

ದಶಕಗಳ ಹಿಂದೆ ‘ಧೋಬಿ ಘಾಟ್​’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದರು ಕಿರಣ್​ ರಾವ್​. ಈ ಚಿತ್ರದ ಬಳಿಕ ಮತ್ತೆ ನಿರ್ದೇಶನ ಮಾಡುವ ಕೆಲಸಕ್ಕೆ ಅವರು ಮುಂದಾಗಿಲ್ಲ. ಬದಲಿಗೆ ನಿರ್ಮಾಣದಲ್ಲಿ ಬ್ಯುಸಿ ಆದರು. ಈಗ ಅವರು ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ.

ಮತ್ತೆ ಒಂದಾದ ಆಮಿರ್​ ಖಾನ್-ಕಿರಣ್​ ರಾವ್​; ಅಚ್ಚರಿ ತಂದ ಮಾಜಿ ದಂಪತಿಯ ನಿರ್ಧಾರ
ಆಮಿರ್​-ಕಿರಣ್​

ಸೆಲೆಬ್ರಿಟಿ ವಲಯದಲ್ಲಿ ವಿಚ್ಛೇದನ (Divorce) ಎಂಬುದನ್ನು ಒಂದು ಸಾಮಾನ್ಯ ಸಂಗತಿಯಾಗಿ ನೋಡುತ್ತಾರೆ. ಡಿವೋರ್ಸ್​ ಪಡೆದ ನಂತರ ಗೆಳೆಯರಾಗಿ ನಾವು ಮುಂದುವರಿಯುತ್ತಿದ್ದೇವೆ ಎಂದು ಹೇಳಿಕೊಳ್ಳುವ ಸೆಲೆಬ್ರಿಟಿಗಳೇ ಜಾಸ್ತಿ. ಅಚ್ಚರಿಯ ವಿಚಾರ ಎಂದರೆ, ಗಂಡ-ಹೆಂಡತಿಯಾಗಿ ಜೀವನ ನಡೆಸುತ್ತಿದ್ದ ಸೆಲೆಬ್ರಿಟಿಗಳು ವಿಚ್ಛೇದನದ ನಂತರ ಗೆಳೆಯರಾಗಿಯೇ ಮುಂದುವರಿಯುತ್ತಾರೆ. ಇದಕ್ಕೆ ಹೊಸ ಉದಾಹರಣೆ ಬಾಲಿವುಡ್​ ನಟ ಆಮಿರ್​ ಖಾನ್​ (Aamir Kjan) ಹಾಗೂ ಅವರ ಮಾಜಿ ಪತ್ನಿ ಕಿರಣ್​ ರಾವ್ (Kiran Rao)​. ಕಳೆದ ವರ್ಷ ಈ ದಂಪತಿ ವಿಚ್ಛೇದನ ಘೋಷಣೆ ಮಾಡಿದ್ದರು. ಮೂರನೇ ಮದುವೆ ಆಗುವ ಉದ್ದೇಶದಿಂದ ಆಮಿರ್​ ಅವರು ಈ ವಿಚ್ಛೇದನ ಪಡೆದಿದ್ದಾರೆ ಎನ್ನುವ ಸುದ್ದಿ ಜೋರಾಗಿತ್ತು. ಇದಕ್ಕೆ ಆಮಿರ್​ ತಲೆಕೆಡಿಸಿಕೊಂಡಿಲ್ಲ. ಈಗ ಸಿನಿಮಾ ಒಂದಕ್ಕಾಗಿ ಈ ದಂಪತಿ ಮತ್ತೆ ಒಂದಾಗಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಅಕ್ಷರಶಃ ಅಚ್ಚರಿ ಹೊರಹಾಕಿದ್ದಾರೆ.

ದಶಕಗಳ ಹಿಂದೆ ‘ಧೋಬಿ ಘಾಟ್​’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದರು ಕಿರಣ್​ ರಾವ್​. ಈ ಚಿತ್ರದ ಬಳಿಕ ಮತ್ತೆ ನಿರ್ದೇಶನ ಮಾಡುವ ಕೆಲಸಕ್ಕೆ ಅವರು ಮುಂದಾಗಿಲ್ಲ. ಬದಲಿಗೆ ನಿರ್ಮಾಣದಲ್ಲಿ ಬ್ಯುಸಿ ಆದರು. ಈಗ ಅವರು ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಬಾಲಿವುಡ್​ ಹಂಗಾಮ ವರದಿ ಮಾಡಿದ ಪ್ರಕಾರ ಕಳೆದ ವಾರ ಈ ಸಿನಿಮಾದ ಶೂಟಿಂಗ್ ಪುಣೆಯಲ್ಲಿ ಆರಂಭಗೊಂಡಿದೆ.

ಹಾಗಾದರೆ, ಈ ಚಿತ್ರಕ್ಕೆ ಆಮಿರ್​ ಖಾನ್​ ಹೀರೋನಾ? ಅಲ್ಲ, ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕಾಮಿಡಿ ಕಥಾ ಹಂದರ ಹೊಂದಿರುವ ಈ ಚಿತ್ರದ ಸಂಪೂರ್ಣ ನಿರ್ಮಾಣ ಜವಾಬ್ದಾರಿಯನ್ನು ಆಮಿರ್​ ಖಾನ್​ ಹೊತ್ತುಕೊಂಡಿದ್ದಾರಂತೆ. ಈ ವಿಚಾರ ಕೇಳಿ ಅಭಿಮಾನಿಗಳಿಗೆ ಅಚ್ಚರಿ ಆಗಿದೆ.

ಜನವರಿ 20ರವರೆಗೆ ಪುಣೆಯ ಸಮೀಪ ಶೂಟಿಂಗ್​ ನಡೆಯಲಿದೆ. ಆ ಬಳಿಕ ಮಹಾರಾಷ್ಟ್ರದ ನಾನಾ ಕಡೆಗಳಲ್ಲಿ ಚಿತ್ರೀಕರಣ​ ನಡೆಸಲು ಚಿತ್ರತಂಡ ನಿರ್ಧರಿಸಿದೆ. ಏಪ್ರಿಲ್​ ವೇಳೆಗೆ ಚಿತ್ರದ ಶೂಟಿಂಗ್​ ಪೂರ್ಣಗೊಳಿಸುವ ನಿರ್ಧಾರವನ್ನು ಸಿನಿಮಾ ತಂಡ ಹೊಂದಿದೆ.

ಆಮಿರ್ ಖಾನ್​ ನಟನೆಯ ‘ಲಾಲ್​ ಸಿಂಗ್ ಛಡ್ಡಾ’ ಚಿತ್ರವನ್ನು ಆಮಿರ್​ ಖಾನ್​ ಹಾಗೂ ಕಿರಣ್​ ರಾವ್​ ಒಟ್ಟಾಗಿ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರ ಏಪ್ರಿಲ್​ 14ರಂದು ‘ಕೆಜಿಎಫ್​ ಚಾಪ್ಟರ್​ 2’ ಎದುರು ತೆರೆಗೆ ಬರುತ್ತಿದೆ. ಕೊವಿಡ್​ ಪರಿಸ್ಥಿತಿ ನಿಯಂತ್ರಣಕ್ಕೆ ಬರದಿದ್ದರೆ ಮತ್ತೆ ಸಿನಿಮಾ ರಿಲೀಸ್​ ದಿನಾಂಕ ಮುಂದೂಡಲ್ಪಡುತ್ತದೆ.

ಇದನ್ನೂ ಓದಿ: ಮಗಳ ಪಾತ್ರ ಮಾಡಿದ್ದ ನಟಿ ಜತೆ ಆಮಿರ್​ ಖಾನ್​ ಶಾದಿ? ವೈರಲ್​ ಫೋಟೋದ ಅಸಲಿಯತ್ತು ಇಲ್ಲಿದೆ

Aamir Khan: ಆಮಿರ್​​ ಖಾನ್​-ಕಿರಣ್​ ರಾವ್​ ವಿಚ್ಛೇದನ; 15 ವರ್ಷದ ದಾಂಪತ್ಯ ಜೀವನ ಅಂತ್ಯ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada