ಪನ್ವೇಲ್​ ಫಾರ್ಮ್​ಹೌಸ್​ ನೆರೆ ಹೊರೆಯವರ ವಿರುದ್ಧ ಕೇಸ್​ ಹಾಕಿದ ಸಲ್ಮಾನ್​ ಖಾನ್​

ಪ್ರತಿ ಬಾರಿ ಸಲ್ಮಾನ್​ ಖಾನ್​ ಅವರು ಪನ್ವೇಲ್​ ಫಾರ್ಮ್​ಹೌಸ್​ನಲ್ಲಿ ಬರ್ತ್​ಡೇ ಆಚರಿಸಿಕೊಳ್ಳುತ್ತಾರೆ. ಈ ಫಾರ್ಮ್​ಹೌಸ್​ ಪಕ್ಕದಲ್ಲಿ ಕೇತನ್​ ಕಕ್ಕರ್​ ಅವರು ಜಾಗ ಹೊಂದಿದ್ದಾರೆ. ಕೇತನ್​ ಅವರು ಸಲ್ಮಾನ್​ ವಿರುದ್ಧ ಕೆಟ್ಟದಾಗಿ ಹೇಳಿಕೆ ನೀಡಿದ್ದರು

ಪನ್ವೇಲ್​ ಫಾರ್ಮ್​ಹೌಸ್​ ನೆರೆ ಹೊರೆಯವರ ವಿರುದ್ಧ ಕೇಸ್​ ಹಾಕಿದ ಸಲ್ಮಾನ್​ ಖಾನ್​
ಸಲ್ಮಾನ್ ಖಾನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jan 15, 2022 | 5:50 PM

ಸಲ್ಮಾನ್​ ಖಾನ್​ (Salman Khan) ಅವರಿಗೆ ದೇಶ-ವಿದೇಶಗಳಲ್ಲಿ ಅಭಿಮಾನಿಗಳಿದ್ದಾರೆ. ಅವರ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡುತ್ತವೆ. ಅವರನ್ನು ಕಂಡರೆ ಹೊಟ್ಟೆಕಿಚ್ಚು ಪಡುವವವರ ಸಂಖ್ಯೆ ಕೂಡ ದೊಡ್ಡದಿದೆ. ಸಲ್ಮಾನ್​ ಖಾನ್ ವಿರುದ್ಧ ವರ್ಚಸ್ಸಿಗೆ ಧಕ್ಕೆ ಬರುವ ರೀತಿಯಲ್ಲಿ ಹೇಳಿಕೆ ನೀಡಿದ, ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್ ಹಾಕಿದವರ ಸಂಖ್ಯೆ ದೊಡ್ಡದಿದೆ. ಇದೇ ವಿಚಾರ ಇಟ್ಟುಕೊಂಡು ನೆರೆಯವರ ವಿರುದ್ಧವೇ ಸಲ್ಮಾನ್​ ಕೇಸ್​ ದಾಖಲು ಮಾಡಿದ್ದಾರೆ. ಅಲ್ಲದೆ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಸಲ್ಮಾನ್​ ಖಾನ್​ ಅವರ ಪನ್ವೇಲ್​ ಫಾರ್ಮ್​ಹೌಸ್​ ಬರೋಬ್ಬರಿ 150 ಎಕರೆ ವಿಸ್ತೀರ್ಣ ಹೊಂದಿದೆ. ಇದರಲ್ಲಿ ಮೂರು ಬೃಹತ್​ ಬಂಗಲೆಗಳಿವೆ. ನೂರಾರು ಅತಿಥಿಗಳ ವಾಸ್ತವ್ಯಕ್ಕೆ ಅನುಕೂಲ ಆಗುವಷ್ಟು ಸೌಲಭ್ಯ ಇದೆ. ಸ್ವಿಮಿಂಗ್​ ಪೂಲ್​ ಮತ್ತು ಜಿಮ್​ ಕೂಡ ಈ ಫಾರ್ಮ್​ಹೌಸ್​ನಲ್ಲಿ ಇದೆ. ಪ್ರತಿ ಬಾರಿ ಸಲ್ಮಾನ್​ ಖಾನ್​ ಅವರು ಇದೇ ಫಾರ್ಮ್​ ಹೌಸ್​ನಲ್ಲಿ ಬರ್ತ್​ಡೇ ಆಚರಿಸಿಕೊಳ್ಳುತ್ತಾರೆ. ಈ ಫಾರ್ಮ್​ಹೌಸ್​ ಪಕ್ಕದಲ್ಲಿ ಕೇತನ್​ ಕಕ್ಕರ್​ ಅವರು ಜಾಗ ಹೊಂದಿದ್ದಾರೆ. ಕೇತನ್​ ಅವರು ಸಲ್ಮಾನ್​ ವಿರುದ್ಧ ಕೆಟ್ಟದಾಗಿ ಹೇಳಿಕೆ ನೀಡಿದ್ದರು. ಈ ಕಾರಣಕ್ಕೆ ಕೇತನ್​ ವಿರುದ್ಧ ಸಲ್ಲು ಮಾನನಷ್ಟ ಮೊಕದ್ದಮೆ ಹೂಡಿಕೆ ಮಾಡಿದ್ದಾರೆ.

ಕೇತನ್​ ಅವರು ಯೂಟ್ಯೂಬ್​ ಚಾನೆಲ್​ ಒಂದರಲ್ಲಿ ಸಲ್ಮಾನ್​ ಖಾನ್​ಗೆ ಮಾನಹಾನಿ ಆಗುವ ರೀತಿಯಲ್ಲಿ ಹೇಳಿಕೆ ನೀಡಿದ್ದರು. ಹೀಗಾಗಿ, ಸಲ್ಲು ಮಾನನಷ್ಟ ಮೊಕದ್ದಮೆ​ ದಾಖಲು ಮಾಡಿದ್ದಾರೆ. ಇದರ ಜತೆಗೆ ಸೋಶಿಯಲ್ ಮೀಡಿಯಾ ಹಾಗೂ ಮಾಧ್ಯಮಗಳಲ್ಲಿ ಸಲ್ಮಾನ್​ ವಿರುದ್ಧ ಯಾವುದೇ ನೆಗೆಟಿವ್​ ಸುದ್ದಿ ಪ್ರಕಟಿಸದಂತೆ ಇಂಜಂಕ್ಷನ್​ ಆರ್ಡರ್​ ಹೊರಡಿಸಬೇಕು ಎಂದು ಕೋರಿದ್ದಾರೆ.

ಇದನ್ನು ಕೇತನ್​ ಪರ ವಕೀಲರು ವಿರೋಧಿಸಿದ್ದಾರೆ. ‘ಯಾವುದೇ ಕಾರಣಕ್ಕೂ ಇಂಜಂಕ್ಷನ್​ ಆರ್ಡರ್​ ನೀಡಬಾರದು. ತಮ್ಮ ವಾದವನ್ನು ಮುಂದಿಡಲು ಸ್ವಲ್ಪ ಸಮಯ ನೀಡಿ’ ಎಂದು ಕೇತನ್​ ಪರ ವಕೀಲರು ಕೋರಿದ್ದಾರೆ. ಕಳೆದ ವರ್ಷ ಸಿನಿಮಾ ವಿಮರ್ಶಕ ಕಮಾಲ್​ ಆರ್​. ಖಾನ್​ ವಿರುದ್ಧವೂ ಸಲ್ಮಾನ್​ ಖಾನ್​ ಮಾನನಷ್ಟ ಮೊಕದ್ದಮೆ ಹೂಡಿಕೆ ಮಾಡಿದ್ದರು.

ಇದನ್ನೂ ಓದಿ: ಶಿಲ್ಪಾ ಶೆಟ್ಟಿ ತಂಗಿಗೆ ಸಲ್ಮಾನ್​ ಖಾನ್ ಖಡಕ್​ ವಾರ್ನಿಂಗ್​​​; ಎಲ್ಲರ ಎದುರು ಕಣ್ಣೀರು ಹಾಕಿದ ಶಮಿತಾ

ಸಲ್ಮಾನ್​ ಖಾನ್ ಫಾರ್ಮ್​ಹೌಸ್​ ಬೆಲೆ 80 ಕೋಟಿ ರೂ.! ಸಲ್ಲು ಮೆಚ್ಚಿನ ಈ ಸ್ಥಳದಲ್ಲಿ ಏನೆಲ್ಲ ಇದೆ?

Published On - 5:29 pm, Sat, 15 January 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ