Viral Video: 63.7 ಕೆಜಿ ಜೇನುನೊಣಗಳನ್ನು ಮೈಮೇಲೆ ಬಿಟ್ಟುಕೊಂಡು ದಾಖಲೆ ನಿರ್ಮಿಸಿದ ವ್ಯಕ್ತಿ

ಒಟ್ಟು 63.7 ಕೆಜಿ ಜೇನುನೊಣವನ್ನು ಮೈಮೇಲೆ ಹಾಕಿಕೊಂಡು ಗಿನ್ನಿಸ್​ ವರ್ಲ್ಡ್​ ರೆಕಾರ್ಡ್​ ನಿರ್ಮಿಸಿದ್ದಾರೆ. ಆತನ ಮೇಲೆ ಜೇನುನೊಣಗಳು ಕುಳಿತುಕೊಳ್ಳುವಂತೆ ಮಾಡಲು ಸುತ್ತಲೂ ಒಂದಷ್ಟು ಜನ ನಿಂತು ಜೇನುನೊಣಗಳನ್ನು ಮೈಮೆಲೆ ಸುರಿಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

Viral Video: 63.7 ಕೆಜಿ ಜೇನುನೊಣಗಳನ್ನು ಮೈಮೇಲೆ ಬಿಟ್ಟುಕೊಂಡು ದಾಖಲೆ ನಿರ್ಮಿಸಿದ ವ್ಯಕ್ತಿ
ಜೇನುನೊಣಗಳನ್ನು ಬಿಟ್ಟುಕೊಂಡ ವ್ಯಕ್ತಿ
Follow us
TV9 Web
| Updated By: Pavitra Bhat Jigalemane

Updated on: Jan 16, 2022 | 2:47 PM

ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಹೊಸ ದಾಖಲೆಗಳನ್ನು ಸೃಷ್ಟಿಸಬೇಕು ಎಂದು ಹಲವರು  ವಿಚಿತ್ರ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಇದೀಗ  ಗಿನ್ನೀಸ್​ ವರ್ಲ್ಡ್​ ರೆಕಾರ್ಡ್ (Guinness World Records)​ ಫೇಸ್ಬುಕ್​ ಪುಟ 2016ರಲ್ಲಿ ವ್ಯಕ್ತಿಯೊಬ್ಬ ಇಟಲಿಯ ಲೋ ಶೋ ಡೀ ರೆಕಾರ್ಡ್‌ನಲ್ಲಿ ನಿರ್ಮಿಸಿದ ವಿಭಿನ್ನ ಹಾಗೂ ವಿಚಿತ್ರ ದಾಖಲೆಯ ವಿಡಿಯೋವನ್ನು ಮತ್ತೊಮ್ಮೆ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. ವ್ಯಕ್ತಿಯೊಬ್ಬ ಗಿನ್ನಿಸ್​ ದಾಖಲೆ ಬರೆಯಬೇಕೆಂದು ಮೈತುಂಬಾ ಜೇನುನೊಣ (bees)ಗಳನ್ನು ಬಿಟ್ಟುಕೊಂಡ ಭಯಾನಕ ವಿಡಿಯೋ ಇದಾಗಿದೆ. ಚೀನಾದ ರುವಾನ್ ಲಿಯಾಂಗ್ಮಿಂಗ್ ಎನ್ನುವಾತ ಗಿನ್ನೀಸ್​​ ದಾಖಲೆ ನಿರ್ಮಿಸಬೇಕೆಂದು ಸರಿಸುಮಾರು 3 ಲಕ್ಷಕ್ಕೂ ಹೆಚ್ಚು ಜೇನುನೊಣಗಳನ್ನು ಮೈಮೇಲೆ ಬಿಟ್ಟುಕೊಂಡ ವಿಡಿಯೋ (video) ಇದಾಗಿದೆ.

ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಜೇನುನೊಣಗಳು ಹಾರಿ ಬರುತ್ತಿರುವೆಡೆಗೆ ಮುಖಮಾಡಿ ನಿಂತಿರುತ್ತಾನೆ. ಜೇನುನೊಣಗಳ ಹಿಂಡು ಆತನನ್ನು ಒಂದೇ ಸಲಕ್ಕೆ ಮುತ್ತಿಗೆ ಹಾಕುವುದನ್ನು ಕಾಣಬಹುದು. . ಗಿನ್ನೀಒಟ್ಟು 63.7 ಕೆಜಿ ಜೇನುನೊಣವನ್ನು ಮೈಮೇಲೆ ಹಾಕಿಕೊಂಡು ಗಿನ್ನಿಸ್​ ವರ್ಲ್ಡ್​ ರೆಕಾರ್ಡ್​ ನಿರ್ಮಿಸಿದ್ದಾರೆ. ಆತನ ಮೇಲೆ ಜೇನುನೊಣಗಳು ಕುಳಿತುಕೊಳ್ಳುವಂತೆ ಮಾಡಲು ಸುತ್ತಲೂ ಒಂದಷ್ಟು ಜನ ನಿಂತು ಜೇನುನೊಣಗಳನ್ನು ಮೈಮೆಲೆ ಸುರಿಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದುಸ್​ ವರ್ಲ್ಡ್​ ರೆಕಾರ್ಡ್ ಫೇಸ್ಬುಕ್​ ಪುಟ ವಿಡಿಯೋ ಹಂಚಿಕೊಂಡು 2 ತಾಸಿನೊಳಗೆ 29 ಮಿಲಿಯನ್​ ವೀಕ್ಷಣೆ ಪಡೆದಿದೆ. ಇನ್ನೂ ವಿಕ್ಷಣೆಯ ಸಂಖ್ಯೆ ಏರುತ್ತಿದ್ದು, ಜಗತ್ತಿನಾದ್ಯಂತ ಬಳಕೆದಾರರು ವಿಡಿಯೋ ನೋಡಿ ದಂಗಾಗಿದ್ದಾರೆ.

ಇದನ್ನೂ ಓದಿ:

ಪ್ಯಾರಿಸ್​ನ ಐಫೆಲ್​ ಟವರ್​ ಎದುರು ಪ್ರೇಯಸಿಗೆ ಪ್ರಪೋಸ್​ ಮಾಡಿದ ಯುವಕ: ವಿಡಿಯೋ ವೈರಲ್​