Lata Mangeshkar: ಮತ್ತೆ ಬಿಗಡಾಯಿಸಿದ ಲತಾ ಮಂಗೇಶ್ಕರ್ ಆರೋಗ್ಯ; ವೈದ್ಯರು ಹೇಳಿದ್ದೇನು?
Lata Mangeshkar Health Update: ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಅವರ ಆರೋಗ್ಯ ಸ್ಥಿತಿ ಮತ್ತೆ ಬಿಗಡಾಯಿಸಿದೆ. ಅವರಿಗೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಖ್ಯಾತ ಗಾಯಕಿ ಲತಾ ಮಂಗೇಶ್ಕರ್ (Lata Mangeshkar) ಅವರ ಆರೋಗ್ಯ ಮತ್ತೆ ಬಿಗಡಾಯಿಸಿದೆ. ಕಳೆದ ಕೆಲ ದಿನಗಳ ಹಿಂದೆ ಕೊವಿಡ್ಗೆ ತುತ್ತಾಗಿದ್ದ ಅವರು ತುಸು ಚೇತರಿಸಿಕೊಂಡಿದ್ದ ಪರಿಣಾಮ ವೆಂಟಿಲೇಟರ್ನಿಂದ ಹೊರಬಂದಿದ್ದರು. ಆದರೆ ಇದೀಗ ಮತ್ತೆ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ವೆಂಟಿಲೇಟರ್ನಲ್ಲಿದ್ದಾರೆ ಎಂದು ಲತಾಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ.ಪ್ರತೀತ್ ಸಮ್ದಾನಿ (Dr.Pratit Samdani) ತಿಳಿಸಿದ್ದಾರೆ. ಈ ಕುರಿತು ಎಎನ್ಐಗೆ ಮಾಹಿತಿ ನೀಡಿರುವ ಡಾ.ಪ್ರತೀತ್, ‘‘ಲತಾ ಅವರು ಇನ್ನೂ ತೀವ್ರ ನಿಗಾ ಘಟಕದಲ್ಲಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್ನಲ್ಲಿದ್ದಾರೆ. ವೈದ್ಯರು ಅವರ ಆರೋಗ್ಯದ ಕುರಿತು ನಿಗಾ ವಹಿಸಿದ್ದಾರೆ’’ ಎಂದು ಹೇಳಿದ್ದಾರೆ. ಜನವರಿ ಆರಂಭದಲ್ಲಿ ಲತಾ ಅವರಿಗೆ ಕೊವಿಡ್ ಸೋಂಕು ಕಾಣಿಸಿಕೊಂಡಿತ್ತು. 92 ವರ್ಷದ ಅವರಿಗೆ ನ್ಯುಮೋನಿಯಾ ಕೂಡ ದೃಢಪಟ್ಟಿತ್ತು. ಕೊವಿಡ್ ಪಾಸಿಟಿವ್ ಆಗಿದ್ದ ಸಿಬ್ಬಂದಿಯೋರ್ವರಿಂದ ಲತಾ ಅವರಿಗೆ ಸೋಂಕು ತಗುಲಿದೆ ಎನ್ನಲಾಗಿದೆ. ಅವರು ಆಸ್ಪತ್ರೆಗೆ ದಾಖಲಾದ ನಂತರ ಇಡೀ ದೇಶವೇ ಅವರ ಆರೋಗ್ಯಕ್ಕೆ ಪ್ರಾರ್ಥಿಸುತ್ತಿದೆ.
ಎಎನ್ಐ ಹಂಚಿಕೊಂಡಿರುವ ಟ್ವೀಟ್ ಇಲ್ಲಿದೆ:
Veteran singer Lata Mangeshkar’s health condition has deteriorated again, she is critical. She is on a ventilator. She is still in ICU and will remain under the observation of doctors: Dr Pratit Samdani, Breach Candy Hospital
(file photo) pic.twitter.com/U7nfRk0WnM
— ANI (@ANI) February 5, 2022
ಕಳೆದ ಕೆಲ ದಿನಗಳ ಹಿಂದೆ ಲತಾ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿತ್ತು. ಆದ್ದರಿಂದ ಅವರಿಗೆ ಒದಗಿಸಲಾಗಿದ್ದ ವೆಂಟಿಲೇಟರ್ ಸಂಪರ್ಕವನ್ನು ತೆಗೆಯಲಾಗಿತ್ತು. ಲತಾ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಹಾಗೂ ಮಹಾರಾಷ್ಟ್ರ ಆರೋಗ್ಯ ಸಚಿವರು ತಿಳಿಸಿದ್ದರು. ಆದರೆ ಇದೀಗ ಮತ್ತೆ ಲತಾ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿದೆ. ಹಾಗೆಯೇ ವೆಂಟಿಲೇಟರ್ನಲ್ಲಿ ಇರಿಸಲಾಗಿದೆ. ಲತಾ ಅವರ ಆರೋಗ್ಯ ಸುಧಾರಣೆಗೆ ಕುಟುಂಬದವರಿಂದ, ಅಭಿಮಾನಿಗಳಿಂದ ನಿರಂತರವಾಗಿ ಪ್ರಾರ್ಥನೆ, ಪೂಜೆಗಳು ನಡೆದಿವೆ. ಖ್ಯಾತ ಗಾಯಕಿ ಗುಣಮುಖರಾಗಿ ಮನೆಗೆ ಮರಳುವಂತೆ ದೇಶವೇ ಪ್ರಾರ್ಥಿಸುತ್ತಿದೆ.
ಇದನ್ನೂ ಓದಿ:
ಲತಾ ಮಂಗೇಶ್ಕರ್ ಆರೋಗ್ಯದ ಬಗ್ಗೆ ಹಬ್ಬಿದೆ ಸುಳ್ಳು ಸುದ್ದಿ; ಐಸಿಯುನಲ್ಲಿರುವ ಅವರ ಸ್ಥಿತಿ ನಿಜಕ್ಕೂ ಹೇಗಿದೆ?
ಚಿತ್ರರಂಗದಿಂದ ನಿವೃತ್ತಿ ಘೋಷಿಸಿದ ಯುವ ಹಾಸ್ಯ ನಟ; ಅಭಿಮಾನಿಗಳು ಶಾಕ್
Published On - 2:21 pm, Sat, 5 February 22