Hrithik Roshan: ಮತ್ತೆ ಸಬಾ ಜತೆ ಕಾಣಿಸಿಕೊಂಡ ಹೃತಿಕ್; ಅಭಿಮಾನಿಗಳಿಗೆ ಹೆಚ್ಚಿತು ಅನುಮಾನ
Saba Azad: ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಮತ್ತೆ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ಸಬಾ ತಮ್ಮ ಗುರುತನ್ನು ಮರೆಮಾಚಲು ಕೂದಲಿನಿಂದ ಮುಖವನ್ನು ಮುಚ್ಚಿಕೊಳ್ಳಲು ಯತ್ನಿಸಿದ್ದಾರೆ. ಈ ಸಂದರ್ಭದ ಚಿತ್ರಗಳು ವೈರಲ್ ಆಗಿವೆ.
ಹೃತಿಕ್ ರೋಷನ್ (Hrithik Roshan) ಸದ್ಯ ಸಿನಿಮಾ ಸಂಬಂಧವಲ್ಲದ ಕಾರಣಗಳಿಗಾಗಿ ಸುದ್ದಿಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ ನಟಿ ಸಬಾ ಆಜಾದ್ (Saba Azad) ಜತೆ ಅವರು ಕಾಣಿಸಿಕೊಂಡು ಅಚ್ಚರಿಗೆ ಕಾರಣವಾಗಿದ್ದರು. ಇದೀಗ ಮತ್ತೊಮ್ಮೆ ಈರ್ವರೂ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಪಾಪರಾಜಿಗಳ ಕಣ್ಣಿಗೆ ಕಾಣಿಸಿಕೊಳ್ಳಬಾರದೆಂದು ಸಬಾ ಕೂದಲಿನಿಂದ ತಮ್ಮ ಮುಖವನ್ನು ಮುಚ್ಚಿಕೊಂಡಿದ್ದಾರೆ. ಈ ವೇಳೆ ಹೃತಿಕ್ ಸಬಾ ಅವರ ಕೈಹಿಡಿದು ಕರೆದೊಯ್ದಿದ್ದಾರೆ. ಈ ಎಲ್ಲಾ ಚಿತ್ರಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ. ಅಲ್ಲದೇ ಸಬಾ ಹಾಗೂ ಹೃತಿಕ್ ಜತೆಯಾಗಿ ಸುತ್ತುತ್ತಿದ್ದಾರೆ ಎಂಬ ಮಾತುಗಳಿಗೆ ಈ ಘಟನೆಗಳು ಪುರಾವೆ ನೀಡಿವೆ. ಆದರೆ ಸಬಾ ಕುರಿತು ಹೃತಿಕಾ ಆಗಲಿ ಅಥವಾ ತಮ್ಮ ಸಂಬಂಧದ ಕುರಿತು ಸಬಾ ಆಗಲಿ ಈವರೆಗೂ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಈರ್ವರೂ ಈ ವಿಚಾರದ ಬಗ್ಗೆ ಮೌನ ತಾಳಿದ್ದಾರೆ. ಆದರೆ ಆಪ್ತ ಬಾಲಿವುಡ್ ವರದಿಗಳ ಪ್ರಕಾರ, ಕಳೆದ ಕೆಲ ಸಮಯದಿಂದ ಈ ಜೋಡಿ ಜತೆಯಾಗಿ ಸುತ್ತುತ್ತಿದ್ದಾರೆ ಎನ್ನಲಾಗಿದೆ.
ನಿನ್ನೆ (ಶುಕ್ರವಾರ) ರಾತ್ರಿ ಸಬಾ ಹಾಗೂ ಹೃತಿಕ್ ಮುಂಬೈನ ಕೆಫೆಯೊಂದಕ್ಕೆ ಡಿನ್ನರ್ ಡೇಟ್ಗೆ ತೆರಳಿದ್ದರು. ಕೆಫೆಯಿಂದ ಹೊರಬರುವಾಗ ಈರ್ವರೂ ಪಾಪರಾಜಿಗಳ ಕ್ಯಾಮೆರಾಕ್ಕೆ ಸೆರೆಯಾಗಿದ್ದಾರೆ. ಇದರಿಂದ ಸಬಾ ಕಸಿವಿಸಿ ಅನುಭವಿಸಿದ್ದಾರೆ. ಆದ್ದರಿಂದ ತಲೆತಗ್ಗಿಸಿ ಕೂದಲಿನಿಂದ ಮುಖವನ್ನು ಮರೆಮಾಚಿದ್ದಾರೆ.
ಹೃತಿಕ್- ಸಬಾ ಆಜಾದ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಹೀಗೆ:
View this post on Instagram
ಹೃತಿಕ್ 2014ರಲ್ಲಿ ತಮ್ಮ ಪತ್ನಿ ಸುಸಾನೆ ಖಾನ್ ಅವರಿಂದ ವಿಚ್ಛೇದನ ಪಡೆದಿದ್ದರು. ಇದೀಗ ಅವರು ಸಬಾ ಜತೆ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ. ಪರಸ್ಪರ ಪರಿಚಯವಿರುವ ಗೆಳೆಯರೊಬ್ಬರ ಮೂಲಕ ಸಬಾ ಅವರ ಪರಿಚಯವಾಗಿದೆ. ಇಬ್ಬರ ಟೇಸ್ಟ್ ಒಂದೇ ರೀತಿ ಇದ್ದಿದ್ದರಿಂದ ಬೇಗ ಹತ್ತಿರವಾಗಿದ್ದಾರೆ. ಆ ಬಳಿಕ ಅನೇಕ ಬಾರಿ ಇವರು ಭೇಟಿ ಆಗಿದ್ದಾರೆ. ಹೃತಿಕ್ ಹಾಗೂ ಸಬಾ ಡೇಟಿಂಗ್ ಕೂಡ ನಡೆಸುತ್ತಿದ್ದಾರೆ. ಆದರೆ ಇದು ಬಹಿರಂಗವಾಗಿರುವುದು ತುಸು ತಡವಾಗಿ ಎನ್ನುವುದು ಎಲ್ಲೆಡೆ ಕೇಳಿಬರುತ್ತಿರುವ ಸಮಾಚಾರ.
ಇದನ್ನೂ ಓದಿ:
ಹೃತಿಕ್-ಸಬಾ ಬಗ್ಗೆ ಹೊರಬಿತ್ತು ಮತ್ತೊಂದು ರಹಸ್ಯ; ಇವರ ಸಂಬಂಧ ಇಷ್ಟೊಂದು ಮುಂದುವರಿದಿದೆಯಾ?
‘ಹೃತಿಕ್ ರೋಷನ್ ಜತೆ ನೀವು ಡೇಟಿಂಗ್ ಮಾಡ್ತಾ ಇದ್ದೀರಾ?’; ನೇರ ಪ್ರಶ್ನೆಗೆ ಸಬಾ ಉತ್ತರ ಏನಿತ್ತು?
Published On - 9:50 am, Sat, 5 February 22