‘ಹೃತಿಕ್​ ರೋಷನ್​ ಜತೆ ನೀವು ಡೇಟಿಂಗ್​ ಮಾಡ್ತಾ ಇದ್ದೀರಾ?’; ನೇರ ಪ್ರಶ್ನೆಗೆ ಸಬಾ ಉತ್ತರ ಏನಿತ್ತು?

‘ಹೃತಿಕ್​ ರೋಷನ್​ ಜತೆ ನೀವು ಡೇಟಿಂಗ್​ ಮಾಡ್ತಾ ಇದ್ದೀರಾ?’; ನೇರ ಪ್ರಶ್ನೆಗೆ ಸಬಾ ಉತ್ತರ ಏನಿತ್ತು?
ಹೃತಿಕ್​-ಸಬಾ

ಮಾಧ್ಯಮವೊಂದರ ಸಂದರ್ಶನಕ್ಕೆ ಸಬಾ ಸಿಕ್ಕಿದ್ದರು. ಈ ವೇಳೆ ನೇರವಾಗಿ ಅವರ ಎದುರು ಈ ಪ್ರಶ್ನೆಯನ್ನು ಇಡಲಾಯಿತು. ಅವರು ಈ ವೇಳೆ ಜಾಣತನ ತೋರಿಸಿದ್ದಾರೆ.

TV9kannada Web Team

| Edited By: Rajesh Duggumane

Jan 31, 2022 | 4:43 PM

ಕಳೆದ ಕೆಲ ದಿನಗಳಿಂದ ಎಲ್ಲೆಲ್ಲೂ ನಟ ಹೃತಿಕ್​ ರೋಷನ್ (Hrithik Roshan)​ ಅವರದ್ದೇ ಚರ್ಚೆ. ಉದಯೋನ್ಮುಖ ನಟಿ ಸಬಾ ಆಜಾದ್ (Saba Azad) ಜತೆ ಹೃತಿಕ್​ ಡೇಟಿಂಗ್​ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ಹೃತಿಕ್​ ಹಾಗೂ ಸಬಾ ಇಬ್ಬರೂ ಸುತ್ತಾಡುತ್ತಿರುವ ಫೋಟೋ ಒಂದು ವೈರಲ್​ ಆಗಿತ್ತು. ಆ ಬಳಿಕ ನಾನಾ ರೀತಿಯ ಸುದ್ದಿಗಳು ಹುಟ್ಟಿಕೊಳ್ಳೋಕೆ ಶುರುವಾದವು. ಹಾಗಾದರೆ ಹೃತಿಕ್​ ಹಾಗೂ ಸಬಾ ಇಬ್ಬರೂ ಡೇಟಿಂಗ್​ ಮಾಡುತ್ತಿದ್ದಾರಾ? ಈ ಪ್ರಶ್ನೆಯನ್ನು ಸಬಾ ಮುಂದೆಯೇ ಇಡಲಾಗಿದೆ. ಹಾಗಾದರೆ ಅವರ ಪ್ರತಿಕ್ರಿಯೆ ಏನಿತ್ತು? ಅದಕ್ಕೆ ಇಲ್ಲಿದೆ ಉತ್ತರ.

ನಟ ಹೃತಿಕ್​ ರೋಷನ್​ ಅವರು ವೈಯಕ್ತಿಕ ವಿಚಾರವನ್ನು ಹೆಚ್ಚು ಗುಟ್ಟಾಗಿ ಇಡೋಕೆ ನೋಡುತ್ತಾರೆ. ಏನೇ ಇದ್ದರೂ ಅವರು ಮಾಧ್ಯಮದ ಮುಂದೆ ಬಾಯ್ಬಿಡುವುದಿಲ್ಲ. ಇದು ಇಂದು ನಿನ್ನೆಯ ವಿಚಾರ ಅಲ್ಲ. ಹೃತಿಕ್​ ಈ ಮೊದಲಿನಿಂದಲೂ ಇದೇ ನಿಯಮ ಪಾಲಿಸಿಕೊಂಡು ಬಂದಿದ್ದಾರೆ. ಆದರೆ, ಅವರು ದೊಡ್ಡ ಸೆಲೆಬ್ರಿಟಿ. ಎಲ್ಲಾ ವಿಚಾರವನ್ನು ಗುಟ್ಟಾಗಿ ಇಡೋಕೆ ಸಾಧ್ಯವಿಲ್ಲ. ಕೆಲ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಲೀಕ್​ ಆಗಿ ಬಿಡುತ್ತವೆ. ಹೃತಿಕ್​ ಮನೆಯಿಂದ ಹೊರಬಿದ್ದರೆ ಸಾಕು ಪಾಪರಾಜಿಗಳು ಅವರನ್ನು ಹಿಂಬಾಲಿಸುತ್ತಾರೆ. ಈಗ ಹೃತಿಕ್​ ಪ್ರೀತಿ ಪ್ರೇಮದ ವಿಚಾರದಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ.

ಸುಸಾನೆ ಖಾನ್ ಹಾಗೂ ಹೃತಿಕ್​ ರೋಷನ್​ ಮದುವೆ ಆಗಿದ್ದರು. ಇವರಿಗೆ ಇಬ್ಬರು ಮಕ್ಕಳು. 2000ರಲ್ಲಿ ಮದುವೆ ಆಗಿದ್ದ ಈ ಜೋಡಿ 2014ರಲ್ಲಿ ವಿಚ್ಛೇದನ ಪಡೆದಿತ್ತು. ಆ ಬಳಿಕ ಇಬ್ಬರೂ ಅನೇಕ ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಮಕ್ಕಳನ್ನು ಟ್ರಿಪ್​ಗೆ ಕರೆದುಕೊಂಡು ಹೋಗಿದ್ದರು. ಈಗ ಸಬಾ ಜತೆ ಅವರು ಡೇಟಿಂಗ್​ ಮಾಡುತ್ತಿದ್ದಾರೆ ಎನ್ನಲಾಗಿದೆ.

ಮಾಧ್ಯಮವೊಂದರ ಸಂದರ್ಶನಕ್ಕೆ ಸಬಾ ಸಿಕ್ಕಿದ್ದರು. ಈ ವೇಳೆ ನೇರವಾಗಿ ಅವರ ಎದುರು ಈ ಪ್ರಶ್ನೆಯನ್ನು ಇಡಲಾಯಿತು. ಅವರು ಈ ವೇಳೆ ಜಾಣತನ ತೋರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಅವರು ಏನೇ ಹೇಳಿದರೂ ನಾನಾ ರೀತಿಯ ಕಥೆಗಳು ಹುಟ್ಟಿಕೊಳ್ಳುತ್ತವೆ. ಹೀಗಾಗಿ, ಸಬಾ ಈ ಪ್ರಶ್ನೆಗೆ ಮೌನ ತಾಳಿದ್ದಾರೆ. ಈ ಮೂಲಕ ಕುತೂಹಲ ಹೆಚ್ಚಿಸಿದ್ದಾರೆ.

ಸಬಾ ಆಜಾದ್​ ಚಿತ್ರರಂಗಕ್ಕೆ ಕಾಲಿಟ್ಟಿದ್ದು 2008ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ ಅವರು ಬೆರಳೆಣಿಕೆ ಸಿನಿಮಾಗಳನ್ನು ಮಾಡಿದ್ದಾರೆ. ಸಾಕಷ್ಟು ಮ್ಯೂಸಿಕ್​ ವಿಡಿಯೋ​ಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಈಗ ಅವರು ಹೃತಿಕ್​ ಜತೆ ಡೇಟಿಂಗ್​ ಮಾಡುತ್ತಿದ್ದಾರೆ ಎನ್ನುವ ವಿಚಾರ ಸಾಕಷ್ಟು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಉದಯೋನ್ಮುಖ ನಟಿಯ ಜತೆ ಹೃತಿಕ್​ ರೋಷನ್​ ಲವ್ವಿಡವ್ವಿ?​ ಲೀಕ್​ ಆಯ್ತು ಫೋಟೋ

Vikram Vedha: ‘ವಿಕ್ರಮ್ ವೇದ’ ಚಿತ್ರದ ಹೃತಿಕ್​ ರೋಷನ್​ ಲುಕ್​ ರಿವೀಲ್​; ಫ್ಯಾನ್ಸ್​ ಫಿದಾ

Follow us on

Related Stories

Most Read Stories

Click on your DTH Provider to Add TV9 Kannada