AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕರೀನಾ ಸಿಕ್ಕಾಪಟ್ಟೆ ಡೇಂಜರ್’ ಎಂದು ಸೈಫ್​ಗೆ ಹಿತೋಪದೇಶ ನೀಡಿದ್ದ ಅಕ್ಷಯ್; ಇಲ್ಲಿದೆ ಕರೀನಾ- ಸೈಫ್ ಪ್ರೇಮ ಪುರಾಣ!

Saif Ali Khan | Akshay Kumar: ಬಾಲಿವುಡ್ ತಾರೆಯರಾದ ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಸೆಲೆಬ್ರಿಟಿ ಜೋಡಿಗಳೆಂದರೆ ಹೆಸರಾದವರು. ಮದುವೆಗೂ ಮೊದಲು ಅವರು ಅವರ ಪ್ರೇಮ ಕತೆ ಶುರುವಾಗಿದ್ದು ಹೇಗೆ? ಸೈಫ್​ಗೆ ಆಗ ಸಿಕ್ಕಿದ ಹಿತೋಪದೇಶ ಏನು? ಇಲ್ಲಿದೆ ಸೈಫ್- ಕರೀನಾ ಪ್ರೇಮ ಪುರಾಣ.

‘ಕರೀನಾ ಸಿಕ್ಕಾಪಟ್ಟೆ ಡೇಂಜರ್’ ಎಂದು ಸೈಫ್​ಗೆ ಹಿತೋಪದೇಶ ನೀಡಿದ್ದ ಅಕ್ಷಯ್; ಇಲ್ಲಿದೆ ಕರೀನಾ- ಸೈಫ್ ಪ್ರೇಮ ಪುರಾಣ!
ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ (ಎಡ ಚಿತ್ರ), ಅಕ್ಷಯ್ ಕುಮಾರ್ (ಬಲ ಚಿತ್ರ)
TV9 Web
| Edited By: |

Updated on:Feb 01, 2022 | 12:13 PM

Share

Kareena Kapoor | ಬಾಲಿವುಡ್​ನಲ್ಲಿ (Bollywood) ತೆರೆಯ ಮೇಲಿನ ಪ್ರೇಮಕತೆಗಳಂತೆ ತೆರೆಯ ಹಿಂದಿನ ಪ್ರೇಮ ಕತೆಗಳಿಗೂ ಬರವಿಲ್ಲ. ತಾರಾ ಜೋಡಿಗಳು ಜತೆಯಾಗಿ ಸುತ್ತಾಡುವುದು, ಕೆಲ ಕಾಲದ ನಂತರ ದೂರಾಗುವುದು, ಮತ್ತೆ ಒಂದಾಗುವುದು ಇದೆಲ್ಲಾ ನಡೆಯುತ್ತಲೇ ಇರುತ್ತದೆ. ಇಂತಹ ತಾರಾ ಜೋಡಿಗಳಲ್ಲಿ ಮುಖ್ಯವಾಗಿ ಸುದ್ದಿಯಾಗುವವರು ಕರೀನಾ ಕಪೂರ್ (Kareena Kapoor) ಹಾಗೂ ಸೈಫ್ ಅಲಿ ಖಾನ್ (Saif Ali Khan). ಮೊದಲ ಪತ್ನಿ ಅಮೃತಾರಿಂದ ಬೇರ್ಪಟ್ಟ ನಂತರ ಸೈಫ್ 2012ರಲ್ಲಿ ಕರೀನಾ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆದರೆ ಈರ್ವರ ಪ್ರೇಮ ಕತೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಅಷ್ಟೇ ಅಲ್ಲ. ಬಾಲಿವುಡ್​ನ ಖ್ಯಾತ ನಟನೋರ್ವ ‘ಕರೀನಾ ಸಿಕ್ಕಾಪಟ್ಟೆ ಡೇಂಜರ್’ ಎಂದು ಸೈಫ್​ಗೆ ಎಚ್ಚರಿಕೆಯನ್ನೂ ನೀಡಿದ್ದರು. ಈ ಎಲ್ಲಾ ಮಜವಾದ ಕತೆಯನ್ನು ಕರೀನಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಇದು ಅಭಿಮಾನಿಗಳ ಹುಬ್ಬೇರಿಸುವಂತೆ ಮಾಡಿದ್ದು, ಸೆಲೆಬ್ರಿಟಿಗಳ ಬದುಕಲ್ಲೂ ಇಂತಹ ಕತೆಗಳು ಇರುತ್ತವಾ ಎಂದುಕೊಂಡಿದ್ದಾರೆ. ಸೈಫ್​ಗೆ ಎಚ್ಚರಿಕೆ ನೀಡಿದ್ದು ಯಾರು? ಅದಕ್ಕೆ ಸೈಫ್ ಉತ್ತರವೇನಾಗಿತ್ತು? ಇಲ್ಲಿದೆ ಕುತೂಹಲಕರ ಮಾಹಿತಿ.

ಅಕ್ಷಯ್ ಪತ್ನಿ ಟ್ವಿಂಕಲ್ ಖನ್ನಾ ಬರಹಗಾರ್ತಿಯೂ ಹೌದು. ಯುಟ್ಯೂಬ್ ಚಾನಲ್ ಒಂದಕ್ಕೆ ಟ್ವಿಂಕಲ್ ಹಾಗೂ ಕರೀನಾ ಜತೆಯಾಗಿ ಕುಳಿತು ಮಾತನಾಡಿ ಒಂದಷ್ಟು ವಿಚಾರ ಹಂಚಿಕೊಂಡಿದ್ದಾರೆ. ಅದರಲ್ಲಿ ಕರೀನಾ ಪ್ರೇಮ ಪುರಾಣ ಹೊರಬಿದ್ದಿದೆ. ಅಷ್ಟೇ ಅಲ್ಲ. ಈ ಪ್ರೇಮ ಪ್ರಕರಣದಲ್ಲಿ ಸೈಫ್​ಗೆ ಎಚ್ಚರಿಕೆ ನೀಡಿದ್ದು ಟ್ವಿಂಕಲ್ ಪತಿ ಅಕ್ಷಯ್ ಕುಮಾರ್! ಇದನ್ನೆಲ್ಲಾ ಹೇಳಿಕೊಂಡು ನಕ್ಕಿದ್ದಾರೆ ಕರೀನಾ.

ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಸಂಬಂಧ ಪ್ರಾರಂಭವಾಗಿದ್ದು ಹೇಗೆ? 2008ರಲ್ಲಿ ‘ತಾಶಾನ್’ ಚಿತ್ರಕ್ಕಾಗಿ ಕರೀನಾ ಹಾಗೂ ಸೈಫ್ ಜತೆಯಾಗಿ ಕೆಲಸ ಮಾಡುತ್ತಿದ್ದರು. ವಾಸ್ತವವಾಗಿ ಎಲ್ಲವೂ ಸರಿಯಿದ್ದಿದ್ದರೆ ಸೈಫ್ ಹಾಗೂ ಕರೀನಾ ಅದಕ್ಕೂ ಮೊದಲೇ ಕೆಲವು ಚಿತ್ರಗಳಲ್ಲಿ ಜತೆಯಾಗಿ ನಟಿಸಬೇಕಿತ್ತು. ಆದರೆ ಕರೀನಾ ಆ ಆಫರ್​ನೆಲ್ಲಾ ತಿರಸ್ಕರಿಸಿದ್ದರಂತೆ.  ನಂತರ ‘ತಾಶಾನ್’ಗಾಗಿ ಈ ಜೋಡಿ ತೆರೆ ಹಂಚಿಕೊಂಡರು.

ಅಕ್ಷಯ್ ಸೈಫ್​ಗೆ ನೀಡಿದ್ದ ಸಲಹೆ ಏನು? ಶೂಟಿಂಗ್​ ಸೆಟ್​ನಲ್ಲಿ ಈ ಸಂದರ್ಭದಲ್ಲಿ ಅಕ್ಷಯ್ ಹಾಗೂ ಸೈಫ್ ಮಾತನಾಡಿಕೊಂಡಿದ್ದನ್ನು ಕರೀನಾ ಸ್ಮರಿಸಿಕೊಂಡಿದ್ದಾರೆ. ‘ಖಿಲಾಡಿ’ ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಅಕ್ಷಯ್​ಗೆ ಸೈಫ್ ಹಾಗೂ ಕರೀನಾ ಪರಸ್ಪರ ಕನೆಕ್ಟ್ ಆಗುತ್ತಿದ್ದಾರೆ ಎಂಬ ಅನುಮಾನ ಬಂದಿತ್ತಂತೆ. ಸೆಟ್​ನಲ್ಲಿ ಸೈಫ್​ರನ್ನು ಬದಿಗೆ ಕರೆದಿದ್ದ ಅಕ್ಷಯ್ ಕಿವಿಮಾತು ಹೇಳಿದ್ದರಂತೆ. ‘‘ನೋಡು, ಇದನ್ನು ಗಂಭೀರವಾಗಿ ಕೇಳಿಸಿಕೊ. ಕರೀನಾ ಅಪಾಯಕಾರಿ (ಡೇಂಜರಸ್) ಹುಡುಗಿ ಮತ್ತು ಅಪಾಯಕಾರಿ ಕುಟುಂಬದಿಂದ (ಕಪೂರ್ ಫ್ಯಾಮಿಲಿ) ಬಂದವಳು. ಆಕೆಯೊಂದಿಗೆ ಎಡವಟ್ಟು ಮಾಡಿಕೊಳ್ಳಬೇಡ’’ ಎಂದು ಹಿತೋಪದೇಶ ಮಾಡಿದ್ದರಂತೆ. ಅಕ್ಷಯ್ ನುಡಿ ಹೇಗಿತ್ತೆಂದರೆ ತಪ್ಪು ವ್ಯಕ್ತಿಯಲ್ಲಿ ಸೈಫ್ ಸಂಬಂಧ ಬೆಳೆಸಲು ನೋಡುತ್ತಿದ್ದಾರೆ ಎನ್ನುವುದಾಗಿತ್ತು ಎಂದು ಕರೀನಾ ತಮಾಷೆ ಮಾಡಿದ್ದಾರೆ.

ಅಕ್ಷಯ್ ಸಲಹೆಗೆ ಉತ್ತರಿಸಿದ್ದ ಸೈಫ್, ‘‘ಇಲ್ಲ ಇಲ್ಲ. ಇದನ್ನೆಲ್ಲಾ ನಾನು ಸರಿಪಡಿಸಿಕೊಳ್ಳುತ್ತೇನೆ’’ ಎಂದು ಆತ್ಮವಿಶ್ವಾಸದಿಂದ ನುಡಿದಿದ್ದರಂತೆ. ಕೊನೆಯಲ್ಲಿ ಈ ಜೋಡಿ 2012 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈಗ ದಂಪತಿಗೆ ಇಬ್ಬರು ಮುದ್ದಾದ ಪುತ್ರರಿದ್ದಾರೆ. ‘ತಾಶಾನ್’ ನಂತರ ಸೈಫ್ ಹಾಗೂ ಕರೀನಾ ‘ಕುರ್ಬಾನ್’, ‘ಏಜೆಂಟ್ ವಿನೋದ್’ ಮೊದಲಾದ ಚಿತ್ರಗಳಲ್ಲಿ ಜತೆಯಾಗಿ ಕೆಲಸ ಮಾಡಿದ್ದರು.

ಸೈಫ್ ಹಾಗೂ ಕರೀನಾ ಪ್ರೇಮಕ್ಕೆ ಬಿದ್ದ ಸಂದರ್ಭವನ್ನು ಈ ಹಿಂದೆ ವಿವರಿಸಿದ್ದ ಕರೀನಾ, ತಾಶಾನ್ ಚಿತ್ರದ ಸಂದರ್ಭದಲ್ಲಿ ಈರ್ವರ ಸಂಬಂಧ ಗಟ್ಟಿಯಾಯಿತು. ‘ನಾನು ನಿಧಾನಕ್ಕೆ ಸೈಫ್​ ತೆಕ್ಕೆಗೆ ಬೀಳುತ್ತಿದ್ದೇನೆ ಎನ್ನಿಸುವಾಗ ಅವರು ನನ್ನನ್ನು ಹಿಡಿದುಕೊಂಡರು’’ ಎಂದು ತಮ್ಮ ಪ್ರೇಮ ಕತೆ ವಿವರಿಸಿದ್ದರು.

ಚಿತ್ರಗಳ ವಿಷಯಕ್ಕೆ ಬಂದರೆ ಕರೀನಾ ಕೊನೆಯದಾಗಿ ಕಾಣಿಸಿಕೊಂಡಿದ್ದು ‘ಅಂಗ್ರೇಜಿ ಮೀಡಿಯಂ’ನಲ್ಲಿ. ನಂತರ ಅವರು ಚಿತ್ರಗಳಿಂದ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಛಡ್ಡಾ’ದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ:

Kareena Kapoor: ಕರೀನಾ- ಸೈಫ್ ಮಧ್ಯೆ ಬಿಸಿಬಿಸಿ ಚರ್ಚೆ; ಕಾರಣವಾದರೂ ಏನು?

ಉದಯೋನ್ಮುಖ ನಟಿಯ ಜತೆ ಹೃತಿಕ್​ ರೋಷನ್​ ಲವ್ವಿಡವ್ವಿ?​ ಲೀಕ್​ ಆಯ್ತು ಫೋಟೋ

Published On - 12:11 pm, Tue, 1 February 22