Kareena Kapoor: ಕರೀನಾ- ಸೈಫ್ ಮಧ್ಯೆ ಬಿಸಿಬಿಸಿ ಚರ್ಚೆ; ಕಾರಣವಾದರೂ ಏನು?

Saif Ali Khan: ಬಾಲಿವುಡ್ ನಟಿ ಕರೀನಾ ಕಪೂರ್ ಚಿತ್ರರಂಗದಿಂದ ದೀರ್ಘ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ನಟಿ ಮತ್ತೆ ತೆರೆಯ ಮೇಲೆ ಬಂದಿದ್ದಾರೆ. ಅದೂ ಪತಿ ಸೈಫ್ ಜತೆಗೂಡಿ. ಆದರೆ ಬೆಳ್ಳಿತೆರೆಯ ಮೇಲಲ್ಲ! ಮತ್ತೆಲ್ಲಿ?

Kareena Kapoor: ಕರೀನಾ- ಸೈಫ್ ಮಧ್ಯೆ ಬಿಸಿಬಿಸಿ ಚರ್ಚೆ; ಕಾರಣವಾದರೂ ಏನು?
ಕರೀನಾ ಕಪೂರ್, ಸೈಫ್ ಅಲಿ ಖಾನ್
Follow us
TV9 Web
| Updated By: shivaprasad.hs

Updated on:Jan 29, 2022 | 8:51 AM

ಬಾಲಿವುಡ್ ನಟಿ ಕರೀನಾ ಕಪೂರ್ (Kareena Kapoor) ಕಳೆದ ಕೆಲವು ಸಮಯದಿಂದ ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದಿದ್ದರು. ಇದೀಗ ಮತ್ತೆ ಮೊದಲಿನಂತೆ ಸಕ್ರಿಯರಾಗುತ್ತಿದ್ದಾರೆ. ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಛಡ್ಡಾ’ದ (Laal Singh Chaddha) ಕೆಲಸಗಳನ್ನು ಅವರು ಪೂರ್ತಿ ಮಾಡಿದ್ದಾರೆ. ಆದರೆ ಯಾವುದೇ ಹೊಸ ಚಿತ್ರಗಳನ್ನು ಒಪ್ಪಿಕೊಂಡು, ಅಧಿಕೃತವಾಗಿ ಘೋಷಿಸಿಲ್ಲ. ಇದರಿಂದಾಗಿ ಅಭಿಮಾನಿಗಳು ಕರೀನಾರನ್ನು ತೆರೆಯ ಮೇಲೆ ಕಣ್ತುಂಬಿಕೊಳ್ಳಬೇಕೆಂದರೆ ‘ಲಾಲ್ ಸಿಂಗ್ ಛಡ್ಡಾ’ ತೆರೆಕಾಣುವವರೆಗೆ ಕಾಯಬೇಕು. ಆದರೆ ಇದೀಗ ಬೆಬೊ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಅದೂ ಪತಿ ಸೈಫ್ ಅಲಿ ಖಾನ್ (Saif Ali Khan) ಜತೆ ತೆರೆ ಹಂಚಿಕೊಳ್ಳುವ ಮೂಲಕ. ಹೌದು. ಈ ತಾರಾ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದ್ದಲ್ಲದೇ, ತೆರೆಯ ಮೇಲೆ ತೀವ್ರ ಚರ್ಚೆಯನ್ನೂ ನಡೆಸಿದ್ದಾರೆ. ಆಮೇಲೇನಾಯ್ತು? ಏನಿದು ಸಮಾಚಾರ ಅಂತೀರಾ?

ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್​ಗೆ ಜಾಹಿರಾತು ಕ್ಷೇತ್ರದಲ್ಲಿ ದೊಡ್ಡ ಬೇಡಿಕೆ ಇದೆ. ಕರೀನಾ ಚಿತ್ರಗಳಿಂದ ಬ್ರೇಕ್ ಪಡೆದಿದ್ದರೂ, ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಪ್ರಸ್ತುತ ಅವರು ಜಾಹಿರಾತೊಂದರಲ್ಲಿ ಬಣ್ಣಹಚ್ಚಿದ್ದಾರೆ. ವಿಶೇಷವೆಂದರೆ ಕರೀನಾಗೆ ಅವರ ಪತಿ ಸೈಫ್ ಅಲಿ ಖಾನ್ ಸಾಥ್ ನೀಡಿದ್ದಾರೆ. ಈರ್ವರು ಜತೆಯಾಗಿ ತೆರೆಹಂಚಿಕೊಂಡಿದ್ದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.

ಖಾಸಗಿ ಕಂಪನಿಯೊಂದು ಇತ್ತೀಚೆಗೆ ತನ್ನ ಬ್ರಾಂಡ್ ಹೆಸರನ್ನು ಬದಲಿಸಿತ್ತು. ಈ ಕುರಿತ ಜಾಹಿರಾತಿನಲ್ಲಿ ಕರೀನಾ ಹಾಗೂ ಸೈಫ್ ಕಾಣಿಸಿಕೊಂಡಿದ್ದಾರೆ. ಸೈಫ್ ವಸ್ತುಗಳನ್ನು ಗ್ರಾಹಕರಿಗೆ ನೀಡುವ ಮಳಿಗೆಯವನಾಗಿ ಕಾಣಿಸಿಕೊಂಡಿದ್ದು, ಕರೀನಾ ಗ್ರಾಹಕರಾಗಿ ಕಾಣಿಸಿಕೊಂಡಿದ್ದಾರೆ. ಮಜವಾಗಿ ಮೂಡಿಬಂದಿರುವ ಜಾಹಿರಾತಿನಲ್ಲಿ ಕರೀನಾ ಹಾಗೂ ಸೈಫ್ ನಡುವೆ ಬಿಸಿಬಿಸಿ ಚರ್ಚೆಯೂ ನಡೆದಿದೆ. ಕೊನೆಗೆ ಕರೀನಾರನ್ನು ಸೈಫ್ ಮನವೊಲಿಸಿ, ಕಂಪನಿಯ ಬ್ರಾಂಡ್ ಬದಲಾಗಿದ್ದನ್ನು ತಿಳಿಸಿಕೊಡುತ್ತಾರೆ. ಅಲ್ಲದೇ ಸೈಫ್, ನೀವು ಕೋಪಗೊಂಡಾಗ ಕರೀನಾ ಕಪೂರ್ ರೀತಿ ಕಾಣುತ್ತೀರಿ ಎಂದು ನುಡಿದಿದ್ದಾರೆ. ಅಲ್ಲಿಗೆ ಜಾಹಿರಾತು ಮುಕ್ತಾಯವಾಗಿದೆ. ಕೊನೆಯಲ್ಲಿರುವ ಈರ್ವರ ಸಂಭಾಷಣೆಯನ್ನು ಉಲ್ಲೇಖಿಸಿರುವ ಫ್ಯಾನ್ಸ್ ಕಾಮೆಂಟ್​ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಸೈಫ್ ಹಾಗೂ ಕರೀನಾ ಕಾಣಿಸಿಕೊಂಡ ಜಾಹಿರಾತು ಇಲ್ಲಿದೆ:

ಕರೀನಾ ಹಾಗೂ ಸೈಫ್​ ಕಾಣಿಸಿಕೊಂಡಿರುವ ಈ ಜಾಹಿರಾತು ಬಾಲಿವುಡ್ ತಾರೆಯರ ಮನವನ್ನೂ ಗೆದ್ದಿದೆ. ರಣವೀರ್ ಸಿಂಗ್ ಕಾಮೆಂಟ್ ಮಾಡಿ, ‘ಹಹ್ಹಾ, ಇಷ್ಟವಾಯಿತು’ ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳು ಕರೀನಾರ ಪಾತ್ರವನ್ನು ಅವರ ಸೂಪರ್ ಹಿಟ್ ಚಿತ್ರ ‘ಜಬ್ ವಿ ಮೆಟ್​​’ನ ಪಾತ್ರಕ್ಕೆ ಹೋಲಿಸಿ ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಕರೀನಾ- ಸೈಫ್ ಮತ್ತೆ ಫ್ಯಾನ್ಸ್ ಹೃದಯ ಕದ್ದಿದ್ದಾರೆ ಎಂದರೆ ತಪ್ಪಿಲ್ಲ.

ಚಿತ್ರಗಳ ವಿಷಯಕ್ಕೆ ಬಂದರೆ ಕರೀನಾ ಸದ್ಯ ಏಕ್ತಾ ಕಪೂರ್ ಜತೆಗೂಡಿ ಸಿನಿಮಾವೊಂದನ್ನು ನಿರ್ಮಾಣ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ ಹನ್ಸಲ್ ಮೆಹ್ತಾ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸೈಫ್ ಅಲಿ ಖಾನ್ ಕೊನೆಯದಾಗಿ ಕಾಣಿಸಿಕೊಂಡಿದ್ದು ‘ಭೂತ್ ಪೊಲೀಸ್’ನಲ್ಲಿ. ಅವರ ಬತ್ತಳಿಕೆಯಲ್ಲಿ ‘ಆದಿ ಪುರುಷ್’, ‘ವಿಕ್ರಮ್ ವೇದ’ ಮೊದಲಾದ ಬಹುನಿರೀಕ್ಷಿತ ಚಿತ್ರಗಳಿವೆ.

ಇದನ್ನೂ ಓದಿ:

‘ನೀನೇ ನನ್ನ ಹೆಂಡ್ತಿ’ ಎಂದು ನಂಬಿಸಿ, ನಟಿ ಮೇಲೆ ಅತ್ಯಾಚಾರ ಮಾಡಿದ ಆರೋಪ; ಕನ್ನಡ ಸಿನಿಮಾ ನಿರ್ಮಾಪಕನ​ ಬಂಧನ

ನಟಿ ಪ್ರೇಮಾ ಲಾಯರ್​ ಪಾತ್ರ ಪ್ರೇಮಾ ಒಪ್ಕೊಂಡಿದ್ಯಾಕೆ? ಇಲ್ಲಿದೆ ಅವರ ಉತ್ತರ

Published On - 8:42 am, Sat, 29 January 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ