‘ನೀನೇ ನನ್ನ ಹೆಂಡ್ತಿ’ ಎಂದು ನಂಬಿಸಿ, ನಟಿ ಮೇಲೆ ಅತ್ಯಾಚಾರ ಮಾಡಿದ ಆರೋಪ; ಕನ್ನಡ ಸಿನಿಮಾ ನಿರ್ಮಾಪಕನ​ ಬಂಧನ

‘ನೀನೇ ನನ್ನ ಹೆಂಡ್ತಿ’ ಎಂದು ನಂಬಿಸಿ, ನಟಿ ಮೇಲೆ ಅತ್ಯಾಚಾರ ಮಾಡಿದ ಆರೋಪ; ಕನ್ನಡ ಸಿನಿಮಾ ನಿರ್ಮಾಪಕನ​ ಬಂಧನ
ಪ್ರಾತಿನಿಧಿಕ ಚಿತ್ರ

ನಟಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹರ್ಷವರ್ಧನ್ ವಿರುದ್ಧ ಐಪಿಸಿ ಸೆಕ್ಷನ್ 417, 376, 504, 506 ಅಡಿ ಪ್ರಕರಣ ದಾಖಲು ಮಾಡಲಾಗಿದೆ.

TV9kannada Web Team

| Edited By: Madan Kumar

Jan 29, 2022 | 8:11 AM

ಸಿನಿಮಾರಂಗದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ, ಮದುವೆ ಮಾಡಿಕೊಳ್ಳುವ ಭರವಸೆ ನೀಡಿ ನಂತರ ಮಹಿಳೆಯರಿಗೆ ಮೋಸ ಮಾಡುವ ಪ್ರಕರಣಗಳು ಪದೇಪದೇ ಬೆಳಕಿಗೆ ಬರುತ್ತಲೇ ಇವೆ. ಬಣ್ಣದ ಲೋಕದಲ್ಲಿ ಇಂಥ ಕೃತ್ಯಗಳು ಹೆಚ್ಚುತ್ತಿವೆ. ಇದೇ ಆರೋಪದಲ್ಲಿ ಈಗ ಕನ್ನಡ ಚಿತ್ರರಂಗದ (Sandalwood) ನಿರ್ಮಾಪಕರೊಬ್ಬರನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳಿಸಲಾಗಿದೆ. ನಟಿಯೊಬ್ಬರು ನೀಡಿದ ದೂರಿನ ಅನ್ವಯ ಪೊಲೀಸರು ಕ್ರಮ ಕೈಕೊಂಡಿದ್ದಾರೆ. ಹರ್ಷವರ್ಧನ್​ ಟಿ.ಜಿ. ಬಂಧನಕ್ಕೊಳಗಾದ ನಿರ್ಮಾಪಕ. ‘ವಿಷನ್​ 2023’ ಎಂಬ ಸಿನಿಮಾದ ಹೀರೋ ಕಮ್​ ನಿರ್ಮಾಪಕ ಆಗಿರುವ ಹರ್ಷವರ್ಧನ್​ ಟಿ.ಜಿ. ಅಲಿಯಾಸ್​ ವಿಜಯ ಭಾರ್ಗವ್​ ಈಗ ಪೊಲೀಸರ ಅತಿಥಿ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ರೇಪ್​ ಕೇಸ್ (Rape Case) ದಾಖಲಾಗಿದೆ. ಸಿನಿಮಾ ನಟಿ ನೀಡಿದ ದೂರಿನ ಮೇರೆಗೆ ಕ್ರಮ ಕೈಗೊಂಡಿರುವ ಪೊಲೀಸರು ಹರ್ಷವರ್ಧನ್​ ಅವರನ್ನು ಬಂಧಿಸಿ (Arrest) ಜೈಲಿಗೆ ಕಳಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದಲೂ ತಮಗೆ ಮೋಸ ಮಾಡಲಾಗಿದೆ ಎಂದು ದೂರಿನಲ್ಲಿ ಆ ನಟಿ ತಿಳಿಸಿದ್ದಾರೆ. ಸಿನಿಮಾಗಳಲ್ಲಿ ಸಹನಟಿಯಾಗಿ ಪಾತ್ರ ಮಾಡುತ್ತಿದ್ದ ಈ ಮಹಿಳೆಗೆ ಹರ್ಷವರ್ಧನ್​ ಪ್ರೀತಿ ಪ್ರೇಮದ ಬಲೆ ಬೀಸಿದ್ದರು. ‘ನೀನೇ ನನ್ನ ಹೆಂಡತಿ ಎಂದು ಹೇಳಿ ನಂಬಿಸಿದ್ದರು. ಕಳೆದ 2 ವರ್ಷಗಳಿಂದ ನನ್ನನ್ನು ದೈಹಿಕವಾಗಿ ಬಳಕೆ ಮಾಡಿಕೊಂಡಿದ್ದಾರೆ. ಮದುವೆ ಮಾಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿ ಮೋಸ ಮಾಡಿದ್ದಾರೆ. ಮದುವೆ ಮಾಡಿಕೊಳ್ಳುವಂತೆ ಕೇಳಿಕೊಂಡಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಅಲ್ಲದೆ, ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದರು’ ಎಂದು ಮಹಿಳೆ ದೂರು ನೀಡಿದ್ದಾರೆ.

ಈ ನಟಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹರ್ಷವರ್ಧನ್ ವಿರುದ್ಧ ಐಪಿಸಿ ಸೆಕ್ಷನ್ 417, 376, 504, 506 ಅಡಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ:

ಸಾಮೂಹಿಕ ಅತ್ಯಾಚಾರಕ್ಕೊಳಗಾದ ಮಹಿಳೆಯ ಕೂದಲು ಕತ್ತರಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ; ನಾಲ್ವರ ಬಂಧನ

ಬೆಂಗಳೂರಿನಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ! ಪಕ್ಕದ ಮನೆಯ ಯುವಕನಿಂದ ದುಷ್ಕೃತ್ಯ

Follow us on

Related Stories

Most Read Stories

Click on your DTH Provider to Add TV9 Kannada