ಮುಂಬೈ ರೇಪ್​ ಕೇಸ್​: ‘ಸಂತ್ರಸ್ತೆ-ಆರೋಪಿಗೆ ಮೊದಲೇ ಪರಿಚಯ ಇತ್ತು..‘-ಪೊಲೀಸರು ಬಿಚ್ಚಿಟ್ಟ ಭಯಾನಕ ಮಾಹಿತಿ

ಮೋಹನ್ ಚೌಹಾಣ್​ ಮೂಲತಃ ಉತ್ತರಪ್ರದೇಶದ ಜೋನ್​ಪುರ ಜಿಲ್ಲೆಯವನೆಂದು ಗೊತ್ತಾಗಿದ್ದು, 25ವರ್ಷಗಳ ಹಿಂದೆ ಮುಂಬೈಗೆ ವಲಸೆ ಬಂದಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.Mu

ಮುಂಬೈ ರೇಪ್​ ಕೇಸ್​: ‘ಸಂತ್ರಸ್ತೆ-ಆರೋಪಿಗೆ ಮೊದಲೇ ಪರಿಚಯ ಇತ್ತು..‘-ಪೊಲೀಸರು ಬಿಚ್ಚಿಟ್ಟ ಭಯಾನಕ ಮಾಹಿತಿ
ಪ್ರಾತಿನಿಧಿಕ ಚಿತ್ರ
Follow us
| Updated By: Digi Tech Desk

Updated on:Sep 13, 2021 | 9:55 AM

ಮುಂಬೈನ ಸಾಕಿನಾಕಾ (Saki Naka) ಪ್ರದೇಶದಲ್ಲಿ ಭೀಕರ ಅತ್ಯಾಚಾರ ನಡೆದಿದೆ. 34 ವರ್ಷದ ಮಹಿಳೆ ಮೇಲೆ ಆರೋಪಿ ಮೋಹನ್​ ಚೌಹಾಣ್​ ಎಂಬಾತ ಅತ್ಯಾಚಾರ ಮಾಡಿದ್ದಲ್ಲದೆ, ಆಕೆಯ ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ಹಾಕಿ ಹಿಂಸೆ ಮಾಡಿದ್ದಾನೆ. ಮಹಿಳೆಗೆ ಮೂರ್ನಾಲ್ಕು ಸರ್ಜರಿ ಮಾಡಿದರೂ ಪ್ರಯೋಜನ ಆಗಲಿಲ್ಲ. 33 ತಾಸುಗಳ ಕಾಲ ಸಾವು-ಬದುಕಿನ ನಡುವೆ ಹೋರಾಟ ನಡೆಸಿ ಕೊನೆಯುಸಿರೆಳೆದಿದ್ದಾರೆ. ದೆಹಲಿ ನಿರ್ಭಯಾ ಆತ್ಯಾಚಾರವನ್ನು ನೆನಪಿಸುವಂತ ಈ ಭಯಾನಕ ರೇಪ್​ ಹಿಂದೆ ಹಲವು ಪ್ರಶ್ನೆಗಳಿವೆ. ಮಹಿಳೆ ಯಾರು? ಆರೋಪಿ ಯಾರು? ಮಧ್ಯರಾತ್ರಿಯಲ್ಲಿ ರೇಪ್​ ಮಾಡಿದ ಆತ ಸಿಕ್ಕಿಬಿದ್ದಿದ್ದು ಹೇಗೆ? ಇಂಥ ಹಲವು ಪ್ರಶ್ನೆಗಳಿಗೆ ಪೊಲೀಸರೇ ಉತ್ತರಿಸಿದ್ದಾರೆ.

ಮಹಿಳೆ ದಿನಗೂಲಿ ಕೆಲಸದವರು. ಅಂದರೆ ಬದುಕಿಗಾಗಿ ಒಂದಷ್ಟು ಸಣ್ಣಪುಟ್ಟ ಕೆಲಸ ಮಾಡುತ್ತಿದ್ದರು. ಈಕೆಗೆ ವಾಸಿಸಲೊಂದು ಯೋಗ್ಯ ಮನೆಯಿಲ್ಲದೆ ಸಾಕಿನಾಕಾದಲ್ಲಿ ರಸ್ತೆ ಬದಿಯಲ್ಲೇ ವಾಸಿಸುತ್ತಿದ್ದಳು. ಅತ್ಯಾಚಾರ ಮಾಡಿದ ಆರೋಪಿ ಮೋಹನ್​ ಚೌಹಾಣ್​ ಟೆಂಪೋ ಚಾಲಕ. ಗುರುವಾರ ತಡರಾತ್ರಿ 2.55ರ ಹೊತ್ತಿಗೆ ಈತ ಮಹಿಳೆಗೆ ಇನ್ನಿಲ್ಲದಂತೆ ಥಳಿಸಿದ್ದಾನೆ. ಆಕೆ ಎಚ್ಚರ ತಪ್ಪುವಷ್ಟು ಹೊಡೆದ ಬಳಿಕ ಟೆಂಪೋಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ. ಅಷ್ಟೇ ಅಲ್ಲ, ಕಬ್ಬಿಣದ ರಾಡ್​ ಕೂಡ ಹಾಕಿದ್ದಾನೆ. ಆದರೆ ಈ ಮಧ್ಯೆ ತಡರಾತ್ರಿ 3.15ರ ಹೊತ್ತಿಗೆ, ಅಲ್ಲಿಯೇ ಇದ್ದ ಚಾಂದಿವ್ಲಿ ಸ್ಟುಡಿಯೋದ ಸೆಕ್ಯೂರಿಟಿ ಗಾರ್ಡ್​ ಪೊಲೀಸರಿಗೆ ಕರೆ ಮಾಡಿ, ಇಲ್ಲೊಬ್ಬ ಮಹಿಳೆ ಮೇಲೆ ಹಲ್ಲೆಯಾಗುತ್ತಿದೆ. ಆಕೆ ಅಳುತ್ತಿದ್ದಾಳೆ ಎಂದು ಹೇಳಿದ್ದರು. ಆದರೆ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಅವಘಡ ನಡೆದಾಗಿತ್ತು.

ಮೊದಲಿನಿಂದಲೂ ಪರಿಚಿತರು ಇದೀಗ ಘಟನೆ ಬಗ್ಗೆ ಮಾಹಿತಿ ಕೊಟ್ಟಿರುವ ಪೊಲೀಸರು, ಮಹಿಳೆ ಮತ್ತು ಆ ಟೆಂಪೋ ಡ್ರೈವರ್​ ಮೋಹನ್​ ಚೌಹಾಣ್​ ಮೊದಲಿನಿಂದಲೂ ಪರಿಚಿತರೇ ಆಗಿದ್ದಾರೆ. ಮೋಹನ್​ ಚೌಹಾಣ್​ ಕೂಡ ಫೂಟ್​ ಪಾತ್​ ಮೇಲೆಯೇ ವಾಸಿಸುತ್ತಿದ್ದ ಎಂದು ಹೇಳಿದ್ದಾರೆ. ಘಟನಾ ಸ್ಥಳದಲ್ಲಿ ಆಗಮಿಸಿದ ಪೊಲೀಸರು ಸಿಸಿಟಿವಿ ಫೂಟೇಜ್​ ಮೂಲಕ ಆರೋಪಿಯನ್ನು ಗುರುತಿಸಿದ್ದರು. ‘ಆತನ ಫೋನ್​ ನಂಬರ್ ಕೂಡ ಅವರಿಗೆ ಸಿಕ್ಕಿತ್ತು. ಆದರೆ ಫೋನ್​ ಮಾಡಿದರೆ ಸ್ವಿಚ್​ ಆಫ್​ ಬರುತ್ತಿತ್ತು. ನಂತರ ನಮಗೆ ಮಾಹಿತಿ ನೀಡಿದ ಸೆಕ್ಯೂರಿಟಿ ಗಾರ್ಡ್​, ಮತ್ತಿತರರ ಸಹಾಯದಿಂದ ಆರೋಪಿಯನ್ನು ಶುಕ್ರವಾರ ಮಧ್ಯಾಹ್ನ 1.30ಕ್ಕೆ ಬಂಧಿಸಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಅನುಮಾನ ನೂರಾರು ಮೋಹನ್ ಚೌಹಾಣ್​ ಮೂಲತಃ ಉತ್ತರಪ್ರದೇಶದ ಜೋನ್​ಪುರ ಜಿಲ್ಲೆಯವನೆಂದು ಗೊತ್ತಾಗಿದ್ದು, 25ವರ್ಷಗಳ ಹಿಂದೆ ಮುಂಬೈಗೆ ವಲಸೆ ಬಂದಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಮಹಿಳೆ ಮತ್ತು ಈತನಿಗೆ ಪರಿಚಯ ಇತ್ತು ಎಂದು ಗೊತ್ತಾಗಿದೆ. ಆದರೆ ಈ ರೇಪ್​ ಮಾಡಿ, ಹತ್ಯೆ ಮಾಡುವಂಥ ದ್ವೇಷ ಏನಿತ್ತು ಎಂಬುದನ್ನಿನ್ನೂ ಆತ ಹೇಳಿಲ್ಲ. ಅಷ್ಟಕ್ಕೂ ಆತನೊಬ್ಬನೇ ಇದ್ದನಾ..ಅಥವಾ ಇದು ಸಾಮೂಹಿಕ ಅತ್ಯಾಚಾರವಾ? ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376ರಡಿ ರೇಪ್, 504ರಡಿ ಉದ್ದೇಶಪೂರ್ವಕವಾಗಿ ಹಲ್ಲೆ, ಐಪಿಸಿ ಸೆಕ್ಷನ್ 302ರಡಿ ಕೊಲೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಸದ್ಯ ಆತನನ್ನು ಸೆಪ್ಟೆಂಬರ್ 21ರವರೆಗೆ ಪೊಲೀಸ್​ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಮುಂಬೈ ಪೊಲೀಸ್ ಕಮೀಷನರ್ ಘಟನಾ ಸ್ಥಳ ಹಾಗೂ ಸಾಕಿನಾಕ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಾವೇ ತನಿಖಾ ತಂಡ ರಚಿಸ್ತೇವೆ ಪ್ರಸ್ತುತ ರೇಪ್​ ಮತ್ತು ಮರ್ಡರ್​ ಕೇಸ್​ ವಿಚಾರಣೆಯನ್ನು ಕೋರ್ಟ್​ನಲ್ಲಿ ಬೇಗನೇ ನಡೆಸಲು ಕ್ರಮ ಕೈಗೊಳ್ಳುವುದಾಗಿ ಸಿಎಂ ಉದ್ಧವ್​ ಠಾಕ್ರೆ ಹೇಳಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಸರಿಯಾಗಿ ತನಿಖೆ ನಡೆಯದೆ ಇದ್ದರೆ, ಮಹಿಳಾ ಆಯೋಗದಿಂದಲೇ ತನಿಖಾ ತಂಡ ರಚಿಸುತ್ತೇವೆ ಎಂದು ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ: ಬದುಕುಳಿಯಲಿಲ್ಲ ಮುಂಬೈ ಅತ್ಯಾಚಾರ ಸಂತ್ರಸ್ತೆ; 33 ತಾಸುಗಳ ಜೀವನ್ಮರಣ ಹೋರಾಟ ಅಂತ್ಯ

ಕೊಟ್ಟ ಸೆಕ್ಯೂರಿಟಿ ಗಾರ್ಡ್​; ಅಂಥ ಪರಿಸ್ಥಿತಿ ಏನಿತ್ತು ಎಂಬುದು ನೆಟ್ಟಿಗರ ಪ್ರಶ್ನೆ

(Police Explain Information about Mumbai Saki Naka Rape Case)

Published On - 4:49 pm, Sat, 11 September 21

ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು