2024 General Elections: 2024 ಲೋಕಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ; ವಿವಿಧ ಮುಖ್ಯಮಂತ್ರಿಗಳ ರಾಜೀನಾಮೆ, ಹೊಸ ಲೆಕ್ಕಾಚಾರದ ಪ್ರಯೋಗ

Vijay Rupani Resign: ಹೊಸ ಸಮೀಕರಣ, ಹೊಸ ಲೆಕ್ಕಾಚಾರ, ಹೊಸ ತಂತ್ರಗಾರಿಕೆ, ಹೊಚ್ಚಹೊಸ ನಾಯಕರು ಮತ್ತು ಯೋಜನೆಗಳು ಪಕ್ಷದೊಳಗೆ ಹರಿದುಬರುತ್ತಲೇ ಇರಬೇಕು ಎಂದು ಬಿಜೆಪಿ ಬಯಸಿದಂತೆ ಕಾಣುತ್ತದೆ. ಇದೇ ಪ್ರಮೇಯವನ್ನು ಗುಜರಾತ್​ನಲ್ಲೂ ಬಿಜೆಪಿ ಪ್ರಯೋಗಿಸಿದೆ. ಮುಂದಿನ ಪ್ರಯೋಗ ಯಾವ ರಾಜ್ಯದಲ್ಲಿ?

2024 General Elections: 2024 ಲೋಕಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ; ವಿವಿಧ ಮುಖ್ಯಮಂತ್ರಿಗಳ ರಾಜೀನಾಮೆ, ಹೊಸ ಲೆಕ್ಕಾಚಾರದ ಪ್ರಯೋಗ
ವಿಜಯ್ ರೂಪಾನಿ, ತೀರಥ್ ಸಿಂಗ್ ರಾವತ್, ಬಿ ಎಸ್ ಯಡಿಯೂರಪ್ಪ
Follow us
TV9 Web
| Updated By: guruganesh bhat

Updated on: Sep 11, 2021 | 5:44 PM

ದೇಶದ ರಾಜಕಾರಣದಲ್ಲಿ ಬಿಜೆಪಿ 2014ರಲ್ಲಿ ತಾನು ತಂದ ಬದಲಾವಣೆಗಳಿಂದಲೇ ಅಧಿಕಾರಕ್ಕೇರಿತ್ತು. ಒಮ್ಮೆ ಗೆದ್ದವರು ಪದೇ ಪದೇ ಗೆಲುವನ್ನೆ ಬಯಸುವುದು ಸಹಜ. ಆ ಯಶಸ್ಸಿನ ಸಿಹಿಯನ್ನು ಪದೇ ಪದೇ ಉಣ್ಣಲು ಬಯಸುತ್ತಿರುವ ಭಾರತಿಯ ಜನತಾ ಪಕ್ಷ ಎಲ್ಲ ರಾಜ್ಯಗಳ ರಾಜಕಾರಣದಲ್ಲೂ ಬದಲಾವಣೆಯ ಪ್ರಯೋಗಕ್ಕೆ ತನ್ನನ್ನು ಒಡ್ಡಿಕೊಳ್ಳುತ್ತಿದೆ. ಅದು ಉತ್ತರಾಖಂಡದ ತೀರತ್ ಸಿಂಗ್ ರಾವತ್ ಅವರಿಂದ ಶುರುವಾಗಿ, ಕರ್ನಾಟಕದ ಬಿ.ಎಸ್.ಯಡಿಯೂರಪ್ಪರಿಂದ ಇದೀಗ ಗುಜರಾತ್​ನ ವಿಜಯ್ ರೂಪಾನಿವರೆಗೂ (Gujarat CM Vijay Rupani Resign) ಬಂದುನಿಂತಿದೆ. ಈ ಎಲ್ಲ ನಾಯಕರುಗಳ ರಾಜೀನಾಮೆಯ ಹಿಂದಿನ ಅಂತಿಮ ಉದ್ದೇಶ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವು. ಸದ್ಯ ವಿವಿಧ ರಾಜ್ಯಗಳಲ್ಲಿ ಪ್ರಬಲವಾಗಿ ಹಬ್ಬಿರುವ ರಾಜಕಾರಣದ ಸಮೀಕರಣಗಳನ್ನು ಮುರಿದು ಹೊಸ ಲೆಕ್ಕಾಚಾರ ಮಾಡಲು ಬಿಜೆಪಿ ತವಕಿಸುತ್ತಿದೆ. ಹೀಗಾಗಿಯೇ ವಿವಿಧ ನಾಯಕರ ರಾಜೀನಾಮೆ ಪಡೆಯಲು ಮುಂದಾಗುತ್ತಿದೆ. ಉತ್ತರಾಖಂಡ್​ದಲ್ಲಿ ಇನ್ನೊಂದು ವರ್ಷದೊಳಗೆ ವಿಧಾನಸಭೆ ಚುನಾವಣೆ ನಡೆಯಲಿದೆ. 2017ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದ ತ್ರಿವೇಂದ್ರ ಸಿಂಗ್ ರಾವತ್ ಮಾರ್ಚ್​ ತಿಂಗಳಲ್ಲಿ ರಾಜೀನಾಮೆ ಸಲ್ಲಿಸಿದ್ದರು. ಇವರ ಆಡಳಿತದ ಬಗ್ಗೆ ಸ್ವಪಕ್ಷೀಯರಿಂದಲೇ ಅಸಮಾಧಾನ ವ್ಯಕ್ತವಾಗಿತ್ತು. ಕೆಲವರು ಹೈಕಮಾಂಡ್​ಗೆ ದೂರು ನೀಡಿದ್ದರು. ರಾಜಕೀಯ ಬಿಕ್ಕಟ್ಟು ಹೆಚ್ಚಾದ ಬೆನ್ನಲ್ಲೇ, ಮುಂಬರುವ ವಿಧಾನಸಭಾ ಚುನಾವಣೆಗೆ ಯಾವುದೇ ತೊಂದರೆಯಾಗಬಾರದು, ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಾರದು ಎಂಬ ಕಾರಣಕ್ಕೆ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ಕೊಟ್ಟಿದ್ದರು. ಬಳಿಕ ತೀರಥ್ ಸಿಂಗ್ ರಾವತ್ ಆ ಹುದ್ದೆಗೆ ಏರಿದ್ದರು. ಲೋಕಸಭಾ ಸಂಸದರಾಗಿದ್ದ ಅವರು ಸೆ.10ರೊಳಗೆ ಯಾವುದಾದರೂ ಒಂದು ವಿಧಾನಸಭಾ ಕ್ಷೇತ್ರವನ್ನು ಗೆಲ್ಲಬೇಕಿತ್ತು. ಆದರೆ ಉಪಚುನಾವಣೆ ನಡೆಸಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿಕೊಡುವ ಸಾಧ್ಯತೆ ಇರಲಿಲ್ಲ. ಹೀಗಾಗಿ ತೀರಥ್ ಸಿಂಗ್ ರಾವತ್ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ನಂತರ ಪುಷ್ಕರ್ ಸಿಂಗ್ ದಾಮಿ ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ನಂತರದ್ದು ಕರ್ನಾಟಕದ ಕಥೆ. ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಸರ್ಕಾರದ ಭಾಗವಾಗಿದ್ದವರಿಂದಲೇ ನಿರಂತರವಾಗಿ ದೂರುಗಳು ದೆಹಲಿಯನ್ನು ತಲುಪುತ್ತಿದ್ದವು. ಜತೆಗೆ ಯಡಿಯೂರಪ್ಪ ಅವರ ಹಿಂದೆ ಪ್ರಬಲ ಲಿಂಗಾಯತ ಸಮುದಾಯವಿತ್ತು. ಅವರ ವೋಟ್​ಬ್ಯಾಂಕ್ ಕಳೆದುಕೊಳ್ಳುವ ಒತ್ತಡವನ್ನೂ ಪರೋಕ್ಷವಾಗಿ ಹಾಕಲಾಗುತ್ತಿತ್ತು. ಆದರೆ ಬಿಜೆಪಿಗೆ ಭವಿಷ್ಯದಲ್ಲಿ ಕೇವಲ ಒಂದು ಸಮುದಾಯವನ್ನಷ್ಟೇ ನೆಚ್ಚಿಕೊಳ್ಳುವುದು ಇಷ್ಟವಿರಲಿಲ್ಲ. ಹಾಗೇನಾದರೂ ಮಾಡಿದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರಿಗೇ ಸಲಾಮು ಹೊಡೆಯಬೇಕಾಗುತ್ತದೆ ಎಂದು ಬಿಜೆಪಿಯ ಉನ್ನತ ನಾಯಕರು ಚಿಂತಿಸಿದ್ದರು. ಅದನ್ನು ಇಷ್ಟಪಡದ ಅವರು, ಕಾದುಕಾದು, ವಿವಿಧ ಪಟ್ಟುಗಳನ್ನು ಹಾಕಿ, ಯಡಿಯೂರಪ್ಪ ಅವರಿಗೆ ಅತ್ಯಂತ ಗೌರವದಿಂದ ಕಾಣಲು ಪ್ರಯತ್ನಿಸಿಯೇ ಅವರ ರಾಜೀನಾಮೆ ಪಡೆಯಿತು ಬಿಜೆಪಿ. ಪ್ರಹ್ಲಾದ್ ಜೋಶಿ, ಅರವಿಂದ್ ಬೆಲ್ಲದ್ ಅಥವಾ ಇನ್ನಿತರ ಹೆಸರುಗಳು ಕೇಳಿಬಂದರೂ ಸಮತೋಲನದ ಲೆಕ್ಕಹಾಕಿ ಬಸವರಾಜ ಬೊಮ್ಮಾಯಿ ಅವರಿಗೆ ಸಿಎಂ ಪಟ್ಟ ನೀಡಿತು.

Vijay Rupani Profile: ಗುಜರಾತ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಜಯ್ ರೂಪಾನಿ ಯಾರು? ಇದೀಗ ಅತ್ಯಂತ ಕಡಿಮೆ ಜನಸಂಖ್ಯೆ ಇರುವ ಜೈನ ಸಮುದಾಯದವರಾಗಿದ್ದ ವಿಜಯ್ ರೂಪಾನಿ ಅವರ ರಾಜೀನಾಮೆ ಪಡೆಯುವದರ ಹಿಂದೂ ಇಂತಹುದೇ ಲೆಕ್ಕಾಚಾರ ಇರಲಿಕ್ಕೆ ಸಾಕು. 2015ರಲ್ಲಿ ದೇಶದ ಗಮನ ಸೆಳೆದ ಒಂದು ಚಳವಳಿ ಗುಜರಾತಿನಲ್ಲಿ ನಡೆದಿತ್ತು. ಅದು ಪಾಟೀದಾರ್ ಮೀಸಲಾತಿ ಚಳವಳಿ. ಇದರ ಮುಂಚೂಣಿಯಲ್ಲಿದ್ದ ಹಾರ್ದಿಕ್ ಪಟೇಲ್ ಅವರನ್ನು ತನ್ನೆಡೆಗೆ ಸೆಳೆದುಕೊಂಡಿದ್ದ ಕಾಂಗ್ರೆಸ್, ಇಡೀ ಪಟೇಲ ಸಮುದಾಯದ ಮತಗಳನ್ನು ಸುಲಭವಾಗಿ ಕೈವಶ ಮಾಡಿಕೊಳ್ಳುವ ಯೋಜನೆ ರೂಪಿಸಿತ್ತು.ಇದೀಗ ಹಾರ್ದಿಕ್ ಪಟೇಲ್ ಗುಜರಾತ್ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ. ಮೀಸಲಾತಿ ಹೋರಾಟದ ದಿನಗಳಲ್ಲಿ ಅವರು ಗಳಿಸಿದ್ದ ಹೆಸರು ರಾಜಕಾರಣ ಸೇರಿದಾಗ ತಣ್ಣಗಾಗಿದೆ. ಆದರೆ 2022, ಅಂದರೆ ಮುಂದಿನ ವರ್ಷವೇ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಯ ಒಳಗೆ ಮತ್ತೆ ಪಾಟೀದಾರ್ ಮೀಸಲಾತಿ ಕೂಗು ಬಲಗೊಳ್ಳಬಹುದು. ಇದರಿಂದ ಜೈನ ಸಮುದಾಯದ ಮುಖ್ಯಮಂತ್ರಿಯನ್ನು ಹೊಂದಿರುವ ತನಗೆ ಪೆಟ್ಟು ಬಿದ್ದರೆ ಕಷ್ಟ ಎಂಬ ಯೋಚನೆ ಮಾಡಿ ವಿಜಯ್ ರೂಪಾನಿ ಅವರ ರಾಜೀನಾಮೆಯನ್ನು ಪಡೆದಂತಿದೆ ಬಿಜೆಪಿ. ಆದರೆ ಅವರಿಗೆ ಈವರೆಗೆ ಅತ್ಯುತ್ತಮ ಅವಕಾಶಗಳನ್ನೂ ಅದು ಒದಗಿಸಿಕೊಟ್ಟಿದೆ ಎಂಬುದನ್ನು ಮರೆಯುವಂತಿಲ್ಲ. ಈಗಲೂ ಪಟೇಲ ಸಮುದಾಯದ ನಾಯಕರಿಗೇ ಅವಕಾಶ ಮಾಡಿಕೊಡಲೆಂದೇ ವಿಜಯ್ ರೂಪಾನಿ ಪದತ್ಯಾಗ ಮಾಡಿದ್ದಾರೆ ಎಂದೇ ಹೇಳಲಾಗಿದೆ.

ಹೊಸ ಸಮೀಕರಣ, ಹೊಸ ಲೆಕ್ಕಾಚಾರ, ಹೊಸ ತಂತ್ರಗಾರಿಕೆ, ಹೊಚ್ಚಹೊಸ ನಾಯಕರು ಮತ್ತು ಯೋಜನೆಗಳು ಪಕ್ಷದೊಳಗೆ ಹರಿದುಬರುತ್ತಲೇ ಇರಬೇಕು ಎಂದು ಬಿಜೆಪಿ ಬಯಸಿದಂತೆ ಕಾಣುತ್ತದೆ. ಇದೇ ಪ್ರಮೇಯವನ್ನು ಗುಜರಾತ್​ನಲ್ಲೂ ಬಿಜೆಪಿ ಪ್ರಯೋಗಿಸಿದೆ. ಮುಂದಿನ ಪ್ರಯೋಗ ಯಾವ ರಾಜ್ಯದಲ್ಲಿ? ಕಾದುನೋಡೋಣ.

ಇದನ್ನೂ ಓದಿ: 

Gujarat Politics: ಕರ್ನಾಟಕ ಮಾದರಿಯಲ್ಲಿ ಗುಜರಾತ್​ನಲ್ಲೂ ಜಾತಿ ಲೆಕ್ಕಾಚಾರದ ಮೊರೆ ಹೋದ ಬಿಜೆಪಿ?

Gujarat CM Resigns: ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ದಿಢೀರ್ ರಾಜೀನಾಮೆ

(Vijay Rupani Resignation as Gujarat CM BJP preparing for 2024 General Elections)

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು