ಒಲೆಕ್ಟ್ರಾದಿಂದ ಕಾಂಕ್ರೀಟ್ ಬಲವರ್ಧನೆ ಹೊಸ ಆವಿಷ್ಕಾರ: ಜಿಎಫ್ಆರ್ಪಿ ರಿಬಾರ್ ಬಿಡುಗಡೆ
ನಿರ್ಮಾಣ ಮತ್ತು ಮೂಲಸೌಕರ್ಯ ವಲಯಕ್ಕೆ ಒಂದು ದೊಡ್ಡ ಹೆಜ್ಜೆಯಾಗಿ, ಒಲೆಕ್ಟ್ರಾ ಗ್ರೀನ್‌ಟೆಕ್ ಲಿಮಿಟೆಡ್ ತನ್ನ ಇತ್ತೀಚಿನ ಅತ್ಯಾಧುನಿಕ ಜಿಎಫ್ಆರ್ಪಿ ರಿಬಾರ್ ಅನ್ನು (ಗ್ಲಾಸ್ ಫೈಬರ್ ರಿಇನ್ಫೋರ್ಸ್ಡ್ ಪಾಲಿಮರ್ ರಿಬಾರ್) ಬಿಡುಗಡೆಗೊಳಿಸಿದೆ. ಈ ಹೊಸ ಉತ್ಪನ್ನವನ್ನು ಪ್ರತಿಷ್ಠಿತ MEIL ಬಜೆಟ್ ಸಭೆಯ ಸಂದರ್ಭದಲ್ಲಿ ಅನಾವರಣಗೊಳಿಸಲಾಯ್ತು. ಹಾಗಾದ್ರೆ, ಏನಿದು? ಎಲ್ಲೆಲ್ಲಿ ಬಳಸಬಹುದು?

ಹೈದರಾಬಾದ್, (ಏಪ್ರಿಲ್ 25): ಮೂಲಸೌಕರ್ಯ ವಲಯಕ್ಕೆ ಪ್ರಮುಖ ತಾಂತ್ರಿಕ ಪ್ರಗತಿಯಲ್ಲಿ ಒಲೆಕ್ಟ್ರಾ(Olectra) ತನ್ನ ಅತ್ಯಾಧುನಿಕ ಜಿಎಫ್ಆರ್ಪಿ ರಿಬಾರ್(ಗ್ಲಾಸ್ ಫೈಬರ್ ರಿಇನ್ಫೋರ್ಸ್ಡ್ ಪಾಲಿಮರ್ ರಿಬಾರ್) ಅನ್ನು ಹೈದರಾಬಾದ್ನಲ್ಲಿ ನಡೆದ ಎಂಇಐಎಲ್ನ ಬಜೆಟ್ ಸಭೆಯಲ್ಲಿ ಬಿಡುಗಡೆಯಾಗಿದೆ. ಎಂಐಎಲ್ ವ್ಯವಸ್ಥಾಪಕ ನಿರ್ದೇಶಕ ಪಿವಿ ಕೃಷ್ಣ ರೆಡ್ಡಿ, ಒಲೆಕ್ಟ್ರಾ ಎಂಡಿ ಕೆ.ವಿ ಪ್ರದೀಪ್, ಸಂಸ್ಥೆಯ ಸಮೂಹ ನಿರ್ದೇಶಕ ಸಿಎಚ್ ಸುಬ್ಬಯ್ಯ ಮತ್ತು ಬಿ ಶ್ರೀನಿವಾಸ್ ರೆಡ್ಡಿ ಸಮ್ಮುಖದಲ್ಲಿ ಜಿಎಫ್ಆರ್ಪಿ ರಿಬಾರ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯ್ತು. ಇದು ಕಾಂಕ್ರೀಟ್ ಬಲವರ್ಧನೆಯಲ್ಲಿ ಬದಲಾವಣೆ ತರಲಿದ್ದು, ಶಕ್ತಿ, ಬಾಳಿಕೆ ಮತ್ತು ಸುಸ್ಥಿರತೆಯನ್ನು ನೀಡುತ್ತದೆ.
ಈ ವೇಳೆ ಒಒಲೆಕ್ಟ್ರಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ.ವಿ ಪ್ರದೀಪ್ ಮಾತನಾಡಿ, “ಈ ಕ್ರಾಂತಿಕಾರಿ ಉತ್ಪನ್ನವನ್ನು ಬಿಡುಗಡೆ ಮಾಡಲು ನಮಗೆ ಸಂತೋಷವಾಗಿದೆ. ಇದು ನಿರ್ಮಾಣ ಉದ್ಯಮಕ್ಕೆ ಒಲೆಕ್ಟ್ರಾದ ಪ್ರವೇಶವನ್ನು ಸೂಚಿಸುತ್ತದೆ. GFRP ರಿಬಾರ್ ವೆಚ್ಚ-ಪರಿಣಾಮಕಾರಿ, ಕಡಿಮೆ ನಿರ್ವಹಣೆ ಮತ್ತು ಜೀವಿತಾವಧಿಯನ್ನು ಹೆಚ್ಚಿಸುತ್ತದೆ. ಇದನ್ನು ಕೈಗಾರಿಕಾ ನೆಲಹಾಸು, ಪಾದಚಾರಿ ಮಾರ್ಗಗಳು, ಸೇತುವೆಗಳು ಮತ್ತು ಸಮುದ್ರ ಯೋಜನೆಗಳಲ್ಲಿ ಇದನ್ನು ಬಳಸಬಹುದು ಎಂದರು”
ಇಸಿಆರ್ ಗ್ಲಾಸ್ ಮತ್ತು ಎಪಾಕ್ಸಿ ರೆಸಿನ್ನಿಂದ ವಿನ್ಯಾಸಗೊಳಿಸಲಾದ ಒಲೆಕ್ಟ್ರಾ ಜಿಎಫ್ಆರ್ಪಿ ರಿಬಾರ್ ಸಾಂಪ್ರದಾಯಿಕ ಉಕ್ಕಿನ ಬಲವರ್ಧನೆಗಿಂತ ಗಮನರ್ಹ ಪ್ರಯೋಜನಗಳನ್ನು ನೀಡುತ್ತದೆ. ಸುಮಾರು ಎರಡು ಪಟ್ಟು ಹೆಚ್ಚು ಬಲಶಾಲಿಯಾಗಿದ್ದು, ಉಕ್ಕಿಗಿಂತ ನಾಲ್ಕು ಪಟ್ಟು ಹಗುರವಾಗಿರುವುದರಿಂದ ಇದರ ನಿರ್ವಹಣೆ ಮತ್ತು ಸಾಗಣೆ ಸುಲಭ. ಹೆಚ್ಚುವರಿಯಾಗಿ ಇದರ ತುಕ್ಕು ಹಿಡಿಯದ, ವಾಹಕವಲ್ಲದ ಮತ್ತು ನೀರು ನಿರೋಧಕ ಹೊಸ ಆವಿಷ್ಕಾರದ ವಿಶೇಷತೆಯಾಗಿದೆ ಎಂದು ಒಲೆಕ್ಟ್ರಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ.ವಿ ಪ್ರದೀಪ್ ತಿಳಿಸಿದ್ದಾರೆ.
2024 ರಲ್ಲಿ ಭಾರತವು ನಿರ್ಮಾಣಕ್ಕಾಗಿ ಸುಮಾರು 50 ಮಿಲಿಯನ್ ಟನ್ ಸ್ಟೀಲ್ ರಿಬಾರ್ ಅನ್ನು ಬಳಸಿದೆ. GFRP ರಿಬಾರ್ ಈಗ ಲಭ್ಯವಿರುವುದರಿಂದ, ದೇಶವು ಉಕ್ಕಿಗೆ ಸುಸ್ಥಿರ, ಬಲವಾದ ಮತ್ತು ದೀರ್ಘಕಾಲೀನ ಪರ್ಯಾಯವನ್ನು ಹೊಂದಿದೆ.
ಒಲೆಕ್ಟ್ರಾ GFRP ರಿಬಾರ್ ಅನ್ನು ಎಲ್ಲೆಲ್ಲಿ ಬಳಸಬಹುದು?
- ಸೇತುವೆ ನಿರ್ಮಾಣ
- ಪಾದಚಾರಿ ಮಾರ್ಗಗಳು ಮತ್ತು ಕೈಗಾರಿಕಾ ನೆಲಹಾಸು .
- ಸಮುದ್ರದೊಳಗಿನ ಕೆಲಸ ಕಾರ್ಯಗಳಲ್ಲಿ
- ಒಳಚರಂಡಿ ಮತ್ತು ಸಬ್‌ಸ್ಟೇಷನ್ ಸಿವಿಲ್ ಕೆಲಸಗಳಲ್ಲಿ ಇದನ್ನು ಬಳಸಬಹುದು.
ಒಲೆಕ್ಟ್ರಾ ಬಗ್ಗೆ
2000 ರಲ್ಲಿ ಸ್ಥಾಪನೆಯಾದ ಒಲೆಕ್ಟ್ರಾ ಗ್ರೀನ್‌ಟೆಕ್ ಲಿಮಿಟೆಡ್ MEIL ಭಾಗವಾಗಿದೆ. 2015 ರಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸಿದ್ದು, ಒಲೆಕ್ಟ್ರಾ. ಇದು ವಿದ್ಯುತ್ ಪ್ರಸರಣ ವ್ಯವಸ್ಥೆಗಳಿಗಾಗಿ ಸಿಲಿಕೋನ್ ರಬ್ಬರ್ ಇನ್ಸುಲೇಟರ್‌ಗಳನ್ನು ತಯಾರಿಸುವ ಭಾರತದ ಅತಿದೊಡ್ಡ ಉತ್ಪಾದಕರಲ್ಲಿ ಒಂದಾಗಿದೆ.




