AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

2026ರೊಳಗೆ ಅಮೆರಿಕದ ಮಾರುಕಟ್ಟೆಗೆ ಶೇ. 100 ಮೇಡ್ ಇನ್ ಇಂಡಿಯಾ ಐಫೋನ್: ಆ್ಯಪಲ್ ಗುರಿ

Apple iPhone production in India: ಒಂದೆರಡು ವರ್ಷದಲ್ಲಿ ಭಾರತದಲ್ಲಿ ಐಫೋನ್ ತಯಾರಿಕೆಯನ್ನು ಶೇ. 20ಕ್ಕೆ ಹೆಚ್ಚಿಸಿರುವ ಆ್ಯಪಲ್ ಕಂಪನಿ ಮತ್ತಷ್ಟು ವೇಗದಲ್ಲಿ ಹೆಜ್ಜೆ ಇಡುತ್ತಿದೆ. 2026ರೊಳಗೆ ಅಮೆರಿಕಕ್ಕೆ ಬೇಕಾದ ಎಲ್ಲಾ ಐಫೋನ್​​ಗಳು ಭಾರತದಿಂದಲೇ ರಫ್ತು ಮಾಡಬೇಕೆಂಬುದು ಆ್ಯಪಲ್ ಗುರಿ. ಡೊನಾಲ್ಡ್ ಟ್ರಂಪ್ ಅವರ ಟ್ಯಾರಿಫ್ ಕ್ರಮಗಳು ಆ್ಯಪಲ್ ನಡೆಗೆ ಚುರುಕು ಮುಟ್ಟಿಸಿವೆ.

2026ರೊಳಗೆ ಅಮೆರಿಕದ ಮಾರುಕಟ್ಟೆಗೆ ಶೇ. 100 ಮೇಡ್ ಇನ್ ಇಂಡಿಯಾ ಐಫೋನ್: ಆ್ಯಪಲ್ ಗುರಿ
ಐಫೋನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 25, 2025 | 6:17 PM

Share

ನವದೆಹಲಿ, ಏಪ್ರಿಲ್ 25: ಆ್ಯಪಲ್ ಸಂಸ್ಥೆ ಭಾರತದಲ್ಲಿ ಐಫೋನ್ ತಯಾರಿಕೆ (iPhone production) ಹೆಚ್ಚಿಸುವ ತರಾತುರಿ ತೋರುತ್ತಿದೆ. ಅಮೆರಿಕದ ಮಾರುಕಟ್ಟೆಗೆ ಬೇಕಾದ ಎಲ್ಲಾ ಐಫೋನ್​​​ಗಳನ್ನು 2026ರೊಳಗೆ ಭಾರತದಲ್ಲಿ ತಯಾರಿಸುವಂತಾಗುವ ಗುರಿಯನ್ನು ಆ್ಯಪಲ್ ಇಟ್ಟಿದೆ. ಆ್ಯಪಲ್ ಕಂಪನಿ ತನ್ನ ಉತ್ಪನ್ನಗಳಿಗೆ ಜಾಗತಿಕ ಸರಬರಾಜು ಸರಪಳಿಯ ವ್ಯವಸ್ಥೆಯಲ್ಲಿ (global supply chain) ಮಹತ್ತರ ಬದಲಾವಣೆ ತರುತ್ತಿದೆ. ಅಮೆರಿಕದ ಮಾರುಕಟ್ಟೆಗೆ ಮೇಡ್ ಇನ್ ಚೀನಾ ಬದಲು ಮೇಡ್ ಇನ್ ಇಂಡಿಯಾದ ಫೋನ್​​ಗಳನ್ನು ಕಳುಹಿಸುವ ಸಂಕಲ್ಪ ತೊಟ್ಟಿದೆ.

ಭಾರತದಲ್ಲಿ ಈಗ ತಯಾರಾಗುತ್ತಿರುವ ಫೋನ್​​ಗಳಲ್ಲಿ ಬಹಳಷ್ಟನ್ನು ರಫ್ತು ಮಾಡಲಾಗುತ್ತಿದೆ. ಹೀಗೆ ರಫ್ತು ಮಾಡಲಾಗುತ್ತಿರುವ ಬಹುತೇಕ ಐಫೋನ್​​ಗಳು ಅಮೆರಿಕದ ಮಾರುಕಟ್ಟೆಗೆ ಹೋಗುತ್ತಿವೆ. ಆದರೂ ಕೂಡ ಈ ರಫ್ತು ಪ್ರಮಾಣ ಸಾಕಾಗುತ್ತಿಲ್ಲ. 2026ರೊಳಗೆ ಅಮೆರಿಕಕ್ಕೆ ಅಗತ್ಯವಾದ ಎಲ್ಲಾ ಐಫೋನ್​​ಗಳನ್ನೂ ಭಾರತದಿಂದಲೇ ನಿರ್ಮಿಸಿ ಕೊಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಭಾರತ, ಸೌತ್ ಕೊರಿಯಾಗಿಂತಲೂ ಶ್ರೀಮಂತವಾಗಿದ್ದ ಪಾಕಿಸ್ತಾನ ಎಡವಿದ್ದು ಎಲ್ಲಿ? ಇಲ್ಲಿವೆ ರೋಚಕ ಅಂಶಗಳು

ಇದನ್ನೂ ಓದಿ
Image
ಭಾರತದ ಷೇರುಬಜಾರು ಮುಂದೆ ಚೈನಾ ಬಜಾರು ಸೊನ್ನೆ
Image
ಭಾರತದಲ್ಲಿ ಜಾಣರೂ ಕೂಡ ಕೆಲಸದ ಹಿಂದೆ ಬೀಳುತ್ತಾರೆ: ಭಾಟಿಯಾ
Image
ವಿಯೆಟ್ನಾಂನಿಂದ ಭಾರತಕ್ಕೆ ಗೂಗಲ್ ಪಿಕ್ಸೆಲ್ ಫೋನ್ ತಯಾರಿಕೆ?
Image
ಫಲಪ್ರದವಾಗಲಿರುವ ಮೋದಿ-ವ್ಯಾನ್ಸ್ ಮಾತುಕತೆ

ವರದಿಗಳ ಪ್ರಕಾರ, ವಿಶ್ವದ ಶೇ. 20ರಷ್ಟು ಐಫೋನ್​​ಗಳು ಈಗ ಭಾರತದಲ್ಲಿ ಅಸೆಂಬಲ್ ಆಗುತ್ತಿವೆ. ಈ ವರ್ಷಾಂತ್ಯದೊಳಗೆ ಭಾರತದಲ್ಲಿ ಐಫೋನ್ ತಯಾರಿಕೆ ಪ್ರಮಾಣ ಶೇ. 25ರಷ್ಟಾಗಬೇಕು ಎನ್ನುವ ಗುರಿ ಆ್ಯಪಲ್​​ಗೆ ಇತ್ತು. ಅದು ಈಗ ಬಹುತೇಕ ಈಡೇರುತ್ತಿದೆ. ಈಗ ಅಮೆರಿಕದ ಮಾರುಕಟ್ಟೆಗೆ ಬೇಕಾದ ಎಲ್ಲಾ ಐಫೋನ್​​ಗಳನ್ನೂ ಭಾರತದಿಂದಲೇ ಸರಬರಾಜು ಮಾಡುವ ಉದ್ದೇಶ ಇದೆ.

ವಿವಿಧ ಕ್ಷೇತ್ರಗಳಲ್ಲಿ ಉತ್ಪಾದನೆಯ ವಿಷಯಕ್ಕೆ ಬಂದರೆ ಚೀನಾ ಜಾಗತಿಕ ಫ್ಯಾಕ್ಟರಿ ಎನಿಸಿದ್ದ ದೇಶ. ಆದರೆ, ಕೋವಿಡ್ ಬಳಿಕ ಚೀನಾ ಅವಶ್ಯಕತೆಗಿಂತ ಹೆಚ್ಚು ಲಾಕ್ ಡೌನ್ ಮಾಡಿದ ಪರಿಣಾಮ ಉತ್ಪಾದನೆ ಕುಂಠಿತಗೊಂಡಿತು. ಜಾಗತಿಕ ಕಂಪನಿಗಳ ಸರಬರಾಜು ಸರಪಳಿ ವ್ಯವಸ್ಥೆ ಅಲ್ಲೋಲಕಲ್ಲೋಲಗೊಂಡಿತ್ತು. ಹೀಗಾಗಿ, ಅಮೆರಿಕನ್ ಕಂಪನಿಗಳು ಚೀನಾದಲ್ಲಿದ್ದ ತಮ್ಮ ಉತ್ಪಾದನಾ ಸರಪಳಿಯನ್ನು ಭಾರತ, ವಿಯೆಟ್ನಾಂ, ಇಂಡೋನೇಷ್ಯ ಇತ್ಯಾದಿ ಪರ್ಯಾಯ ಸ್ಥಳಗಳಿಗೆ ವಿಸ್ತರಿಸತೊಡಗಿವೆ. ಆ್ಯಪಲ್ ಕಂಪನಿ ತನ್ನ ಪರ್ಯಾಯ ಸ್ಥಳವಾಗಿ ಭಾರತಕ್ಕೆ ಆದ್ಯತೆ ಕೊಟ್ಟಿದೆ.

ಇದನ್ನೂ ಓದಿ: ಚೀನಾ ಜಿಡಿಪಿ ಸಖತ್ತಾಗಿದ್ದರೂ ಷೇರು ಮಾರುಕಟ್ಟೆ ಲತ್ತೆ ಹೊಡೆಯುತ್ತಿರೋದ್ಯಾಕೆ? ಇಲ್ಲಿದೆ ಇಂಟರೆಸ್ಟಿಂಗ್ ಡಾಟಾ

ಈಗ ಡೊನಾಲ್ಡ್ ಟ್ರಂಪ್ ಅವರು ಚೀನಾ ಮೇಲೆ ಟ್ಯಾರಿಫ್ ಹೆಚ್ಚಿಸಿರುವುದರಿಂದ ಆ್ಯಪಲ್ ಕಂಪನಿ ಇನ್ನಷ್ಟು ತರಾತುರಿಯಲ್ಲಿ ಚೀನಾದಿಂದ ಕಾಲ್ತೆಗೆಯಲು ನಿರ್ಧರಿಸಿದೆ. ಈಗ ಶೇ. 75ಕ್ಕಿಂತಲೂ ಹೆಚ್ಚು ಐಫೋನ್​​ಗಳು ಚೀನಾದಲ್ಲೇ ತಯಾರಾಗುತ್ತಿವೆ. ಇದನ್ನು ಸಾಧ್ಯವಾದಷ್ಟೂ ಕಡಿಮೆ ಮಾಡುವುದು ಆ್ಯಪಲ್​​ನ ಸಂಕಲ್ಪವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಬೆಂಗಳೂರು–ಮೈಸೂರು ಟೋಲ್ ದರ ವರ್ಷದಲ್ಲಿ 2ನೇ ಬಾರಿ ಏರಿಕೆ
ಬೆಂಗಳೂರು–ಮೈಸೂರು ಟೋಲ್ ದರ ವರ್ಷದಲ್ಲಿ 2ನೇ ಬಾರಿ ಏರಿಕೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು