AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಚಿತವಾಗಿ ಪೆಟ್ರೋಲ್​ ನೀಡುತ್ತಿದೆ ಈ ಖಾಸಗಿ ಕಂಪನಿ; ಆದರೆ ಅನುಮಾನ ಹುಟ್ಟಿಸಿದೆ ಸಂಸ್ಥೆ ಹಾಕಿರುವ ಷರತ್ತು !

Tamil Nadu: ಪೆಟ್ರೋಲ್​ ಬೆಲೆ ಗಗನಕ್ಕೇರಿರುವಾಗ ಹೀಗೆ ಒಂದು ಲೀಟರ್​ ಪೆಟ್ರೋಲ್​ ಪುಕ್ಕಟೆ ಸಿಕ್ಕರೆ ಯಾರಿಗೆ ಬೇಡ ಎನ್ನುತ್ತಿದ್ದಾರೆ.  ಆದರೆ ಈ ಬಗ್ಗೆ ಈಗಾಗಲೇ ಸ್ಥಳೀಯವಾಗಿ ವ್ಯಾಪಕ ಚರ್ಚೆಯೂ ಆಗುತ್ತಿದೆ.

ಉಚಿತವಾಗಿ ಪೆಟ್ರೋಲ್​ ನೀಡುತ್ತಿದೆ ಈ ಖಾಸಗಿ ಕಂಪನಿ; ಆದರೆ ಅನುಮಾನ ಹುಟ್ಟಿಸಿದೆ ಸಂಸ್ಥೆ ಹಾಕಿರುವ ಷರತ್ತು !
ಆಧಾರ್​-ಪಾನ್​ ವಿವರ ಪಡೆದು ಪೆಟ್ರೋಲ್​ ವಿತರಣೆ
TV9 Web
| Updated By: Lakshmi Hegde|

Updated on:Sep 11, 2021 | 8:59 PM

Share

ಪೆಟ್ರೋಲ್​ ದರ (Petrol Price) ಏರಿಕೆಯಾಗುತ್ತಿದೆ. ಇದು ಜನಸಾಮಾನ್ಯರ ಆಕ್ರೋಶಕ್ಕೆ ಕೂಡ ಕಾರಣ ಆಗುತ್ತಿದೆ. ಇನ್ನೂ ಅನೇಕರಿಗೆ ತಮ್ಮ ಬಳಿ ವಾಹನ ಇದ್ದರೂ ಅದಕ್ಕೆ ಪೆಟ್ರೋಲ್ (Petrol)​ ಹಾಕಲು ಸಾಧ್ಯವಾಗದ ಪರಿಸ್ಥಿತಿ. ಹೀಗಿರುವಾಗ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ಖಾಸಗಿ ಕಂಪನಿಯೊಂದು ಉಚಿತವಾಗಿ ಒಂದು ಲೀಟರ್​ ಪೆಟ್ರೋಲ್​ ಕೊಡೋದಾಗಿ ಹೇಳಿದೆ. ಆದರೆ ಒಂದು ಷರತ್ತು ಅನ್ವಯಿಸಿದೆ. ಆ ಷರತ್ತನ್ನು ಒಪ್ಪಿಕೊಂಡಿರುವ ಜನರು, ಖಾಸಗಿ ಕಂಪನಿ (Private Company)ಯ ಪೆಟ್ರೋಲ್​ ಪಂಪ್​ ಎದುರು ಸಾಲುಗಟ್ಟಿ ನಿಂತಿದ್ದಾರೆ. ಆದರೆ ಈ ಸಂಸ್ಥೆಯ ನಡೆ ಸ್ವಲ್ಪ ಅನುಮಾನ ಮೂಡಿಸಿದೆ. 

ಕಾಂಚೀಪುರಂನ ಖಾಸಗಿ ಕಂಪನಿ ಕೇಳಿದ್ದು ಮತ್ತೇನಲ್ಲ. ಪೆಟ್ರೋಲ್​ ಬೇಕಾದವರು ತಮ್ಮ ಆಧಾರ್​ ಮತ್ತು ಪಾನ್​ ಕಾರ್ಡ್ ಜೆರಾಕ್ಸ್ ಕಾಪಿಗಳನ್ನು ನಮಗೆ ಕೊಡಬೇಕು ಎಂದು ಹೇಳಿದೆ. ಕಾಂಚೀಪುರಂನ ಉತಿರಾಮೇರೂರು ಎಂಬ ಹಳ್ಳಿಯ ಬಳಿ ಕಂಪನಿ ಪೆಟ್ರೋಲ್​ ಪಂಪ್ ನಿರ್ಮಿಸಿದ್ದು, ಆ ಹಳ್ಳಿಯ ಜನರು ತಮ್ಮತಮ್ಮ ಆಧಾರ್​ ಮತ್ತು ಪಾನ್​ಕಾರ್ಡ್​ ಜೆರಾಕ್ಸ್​ ಕಾಪಿಗಳನ್ನು ಹಿಡಿದುಕೊಂಡು ಬಂದಿದ್ದಾರೆ. ನಮಗೂ ಒಂದು ಲೀಟರ್​ ಪೆಟ್ರೋಲ್​ ಕೊಡಿ ಎನ್ನುತ್ತಿದ್ದಾರೆ.

ಅನುಮಾನ ಹುಟ್ಟಿಸಿದ ಕಂಪನಿ ಹೀಗೊಂದು ಆಫರ್​ ಇಟ್ಟ ಕಂಪನಿಯ ಹೆಸರು ಶ್ರೀರಾಮ್​ ಕಮರ್ಷಿಯಲ್​ ವೆಹಿಕಲ್​ ಫೈನಾನ್ಸ್​. ಹಳ್ಳಿ ಜನರು ಇದೊಂದು ತುಂಬ ಸರಳವಾದ ಷರತ್ತು ಎಂದು ಭಾವಿಸಿ ತಮ್ಮತಮ್ಮ ಆಧಾರ್​-ಪಾನ್​ ಕಾರ್ಡ್​ ವಿವರಗಳನ್ನು ಕಂಪನಿಗೆ ಕೊಡುತ್ತಿದ್ದಾರೆ. ಪೆಟ್ರೋಲ್​ ಬೆಲೆ ಗಗನಕ್ಕೇರಿರುವಾಗ ಹೀಗೆ ಒಂದು ಲೀಟರ್​ ಪೆಟ್ರೋಲ್​ ಪುಕ್ಕಟೆ ಸಿಕ್ಕರೆ ಯಾರಿಗೆ ಬೇಡ ಎನ್ನುತ್ತಿದ್ದಾರೆ.  ಆದರೆ ಈ ಬಗ್ಗೆ ಈಗಾಗಲೇ ಸ್ಥಳೀಯವಾಗಿ ವ್ಯಾಪಕ ಚರ್ಚೆಯೂ ಆಗುತ್ತಿದೆ. ಕಂಪನಿಗೇಕೆ ಸ್ಥಳೀಯ ಜನರ ಆಧಾರ್​ ಮತ್ತು ಪಾನ್​ ಕಾರ್ಡ್​ ವಿವರ ಬೇಕು? ಅದನ್ನು ತೆಗೆದುಕೊಂಡು ಕಂಪನಿ ಏನು ಮಾಡುತ್ತದೆ? ಯಾವ ಉದ್ದೇಶಕ್ಕಾಗಿ ಹೀಗೊಂದು ಆಫರ್​ನ್ನು ಅದು ಮುಂದಿಟ್ಟಿದೆ? ಎಂಬಿತ್ಯಾದಿ ಪ್ರಶ್ನೆಗಳನ್ನು ವಿಚಾರವಂತರು ಎತ್ತಿದ್ದಾರೆ.

ಇದನ್ನೂ ಓದಿ: ಕಲಬುರಗಿ: ಸಿದ್ದರಾಮಯ್ಯ ‘ಹೂ‘ ಅನ್ನದೇ ಕಾಂಗ್ರೆಸ್​ ಜೆಡಿಎಸ್ ಒಪ್ಪಂದ ಆಗದು: ಸಚಿವ ಆರ್ ಅಶೋಕ್

Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 801 ಜನರಿಗೆ ಕೊರೊನಾ ದೃಢ; 15 ಮಂದಿ ಸಾವು

Published On - 8:59 pm, Sat, 11 September 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ