ಅಕ್ಟೋಬರ್​ ಪ್ರಾರಂಭದಲ್ಲಿ ಬಿಡುಗಡೆಯಾಗಲಿದೆ ಜೈಡಸ್ ಕ್ಯಾಡಿಲಾ ಕೊವಿಡ್​ 19 ಲಸಿಕೆ; 3 ಡೋಸ್​ನ ವ್ಯಾಕ್ಸಿನ್ ಇದು

ಅಕ್ಟೋಬರ್​ ಪ್ರಾರಂಭದಲ್ಲಿ ಬಿಡುಗಡೆಯಾಗಲಿದೆ ಜೈಡಸ್ ಕ್ಯಾಡಿಲಾ ಕೊವಿಡ್​ 19 ಲಸಿಕೆ; 3 ಡೋಸ್​ನ ವ್ಯಾಕ್ಸಿನ್ ಇದು
ಕೊವಿಡ್ 19 ಲಸಿಕೆ

Zydus Cadila: ಝೈಕೊವ್​ -ಡಿ ಲಸಿಕೆ ಒಮ್ಮೆ ಬಳಕೆ ಶುರುವಾದರೆ 12ವರ್ಷ ಮೇಲ್ಪಟ್ಟ ಎಲ್ಲರೂ ತೆಗೆದುಕೊಳ್ಳಬಹುದಾಗಿದೆ. ಮಕ್ಕಳಿಗೂ ಲಸಿಕೆ ಅಭಿಯಾನ ಪ್ರಾರಂಭ ಮಾಡಬಹುದಾಗಿದೆ.

TV9kannada Web Team

| Edited By: Lakshmi Hegde

Sep 11, 2021 | 9:58 PM

ದೆಹಲಿ: ಜೈಡಸ್​ ಕ್ಯಾಡಿಲಾದ ಕೊವಿಡ್​ 19 ಲಸಿಕೆ ಝೈಕೊವ್​-ಡಿ (ZyCov-D) ಅಕ್ಟೋಬರ್​ ಪ್ರಾರಂಭದಿಂದ ಬಳಕೆಗೆ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿದ್ದಾಗಿ ಎಎನ್​ಐ ವರದಿ ಮಾಡಿದೆ.  ZyCov-D 12ವರ್ಷ ಮೇಲ್ಪಟ್ಟವರಿಗೆ ನೀಡಲು ಅನುಮತಿ ಪಡೆದ ದೇಶದ ಮೊದಲ ಲಸಿಕೆಯಾಗಿದ್ದು ಸೆಪ್ಟೆಂಬರ್​ನಲ್ಲಿಯೇ ಬಳಕೆಗೆ ಸಿಗಲಿದೆ ಎಂದು ಹೇಳಲಾಗಿತ್ತು. ಇದು ಮೂರು ಡೋಸ್​ಗಳ, ಜಗತ್ತಿನ ಮೊದಲ ಪ್ಲಾಸ್ಮಿಡ್​ ಡಿಎನ್​ಎ ಲಸಿಕೆಯಾಗಿದೆ. ಹಾಗೇ, ಈ ಲಸಿಕೆಯ ತುರ್ತು ಬಳಕೆಗೆ ಆಗಸ್ಟ್​ 20ರಂದೇ ಭಾರತೀಯ ಔಷಧ ನಿಯಂತ್ರಣಾ ಪ್ರಾಧಿಕಾರ ಅನುಮೋದನೆಯನ್ನೂ ನೀಡಿದೆ. ಇದನ್ನು ಮೊದಲ ಡೋಸ್ ತೆಗೆದುಕೊಂಡ 28 ದಿನಗಳ ಬಳಿಕ ಇನ್ನೊಂದು ಡೋಸ್​ ಮತ್ತು ಅದಾದ 28 ದಿನ ಅಂದರೆ ಮೊದಲ ಡೋಸ್​ನಿಂದ 56 ದಿನಗಳಾದ ಬಳಿಕ ಮೂರನೇ ಡೋಸ್ ಪಡೆಯಬೇಕು.  

ಈ ಜೈಡಸ್ ಕ್ಯಾಡಿಲಾ ಆ್ಯಂಟಿಬಾಡಿ ಕಾಕ್​ಟೇಲ್ ನೀಡುವ ಮೂಲಕ ಶ್ವಾಸಕೋಶದಲ್ಲಿ ಉಂಟಾಗಬಹುದಾದ ಹಾನಿಯನ್ನು ತಡೆಗಟ್ಟಲು ಸಾಧ್ಯವಿದೆ ಎನ್ನಲಾಗುತ್ತಿದ್ದು, ಪ್ರಾಣಿಗಳ ಮೇಲೆ ನಡೆಸಲಾದ ಪ್ರಯೋಗದಲ್ಲಿ ಸಂಶೋಧನಾಕಾರರು ಈ ಅಂಶವನ್ನು ಕಂಡುಕೊಂಡಿದ್ದಾರೆ. ಇದು ಎರಡು ಮೋನೋಕ್ಲೋನಲ್ ಪ್ರತಿಕಾಯಗಳ ಸಮ್ಮಿಶ್ರಣವಾಗಿದ್ದು ದೇಹದಲ್ಲಿನ ಪ್ರತಿಕಾಯಗಳನ್ನು ಸದೃಢಗೊಳಿಸಲು ಸದರಿ ಚಿಕಿತ್ಸೆ ಸಹಕಾರಿಯಾಗಲಿದೆ ಎಂದು ತಜ್ಞರು ವಿವರಿಸಿದ್ದಾರೆ.

ಇನ್ನು ಝೈಕೊವ್​ -ಡಿ ಲಸಿಕೆ ಒಮ್ಮೆ ಬಳಕೆ ಶುರುವಾದರೆ 12ವರ್ಷ ಮೇಲ್ಪಟ್ಟ ಎಲ್ಲರೂ ತೆಗೆದುಕೊಳ್ಳಬಹುದಾಗಿದೆ. ಇಷ್ಟು ದಿನಗಳ ಕಾಲ ನೀಡಲಾಗುತ್ತಿರುವ ಕೊವಿಶೀಲ್ಡ್, ಕೊವ್ಯಾಕ್ಸಿನ್​, ಸ್ಪುಟ್ನಿಕ್​ ವಿ ಸೇರಿ ಎಲ್ಲವೂ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಕೊಡಬಹುದಾದ ವ್ಯಾಕ್ಸಿನ್​ಗಳು. ಮಕ್ಕಳಿಗೆ ಇನ್ನೂ ಯಾವುದೇ ಲಸಿಕೆಗಳೂ ಹೊರಬಂದಿಲ್ಲ. ಹೈದರಾಬಾದ್​ ಮೂಲದ ಜೈಡಸ್ ಕ್ಯಾಡಿಲಾ ಲಸಿಕೆ ಅಭಿವೃದ್ಧಿ ಪಡಿಸುವಾಗಲೇ 12 ವರ್ಷ ಮೇಲ್ಪಟ್ಟವರಿಗೆ ಎಂದೇ ಹೇಳಿತ್ತು. ಹಾಗೇ 12 ವರ್ಷ ಮೇಲ್ಪಟ್ಟವರ ಮೇಲೆ ಕೂಡ ಕ್ಲಿನಿಕಲ್ ಪ್ರಯೋಗ ನಡೆದಿದೆ.  ಇದು ಕೊರೊನಾ ವಿರುದ್ಧ ಶೇ.66ರಷ್ಟು ಸುರಕ್ಷಿತ ಎಂದು ಕಂಪನಿ ತಿಳಿಸಿದೆ. ಅಂತೆಯೇ 12-18 ವಯಸ್ಸಿನವರಿಗೂ ಸುರಕ್ಷಿತ ಎನ್ನಲಾಗಿದೆ.

ಇದನ್ನೂ ಓದಿ: ಗುಜರಾತ್​​ನ ಮುಂದಿನ ಮುಖ್ಯಮಂತ್ರಿ ಯಾರು?-ರೇಸ್​​ನಲ್ಲಿದ್ದಾರೆ ಈ ಎಲ್ಲ ಪ್ರಮುಖ ನಾಯಕರು

ಕಲಬುರಗಿ: ಸಿದ್ದರಾಮಯ್ಯ ‘ಹೂ‘ ಅನ್ನದೇ ಕಾಂಗ್ರೆಸ್​ ಜೆಡಿಎಸ್ ಒಪ್ಪಂದ ಆಗದು: ಸಚಿವ ಆರ್ ಅಶೋಕ್

(Zydus Cadila Covid 19 vaccine likely to be launched In October)

Follow us on

Most Read Stories

Click on your DTH Provider to Add TV9 Kannada