ಇಂದಿರಾ ಗಾಂಧಿ ಅವರನ್ನು ಅನರ್ಹಗೊಳಿಸಿದ ತೀರ್ಪು ಮಹಾ ಧೈರ್ಯದ್ದಾಗಿತ್ತು: ಸಿಜೆಐ ಎನ್ ವಿ ರಮಣ

ಅಲಹಾಬಾದ್ ಹೈಕೋರ್ಟ್ 1975ರಲ್ಲಿ ಇಂದಿರಾ ಗಾಂಧಿ ಅವರ ವಿರುದ್ಧ ತೀರ್ಪು ನೀಡಿತ್ತು,. ಮುಂದಿನ 6 ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆಯೂ ಅಲಹಾಬಾದ್ ಹೈಕೋರ್ಟ್ ತಡೆ ಒಡ್ಡಿತ್ತು.

ಇಂದಿರಾ ಗಾಂಧಿ ಅವರನ್ನು ಅನರ್ಹಗೊಳಿಸಿದ ತೀರ್ಪು ಮಹಾ ಧೈರ್ಯದ್ದಾಗಿತ್ತು: ಸಿಜೆಐ ಎನ್ ವಿ ರಮಣ
ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ
Follow us
TV9 Web
| Updated By: guruganesh bhat

Updated on: Sep 11, 2021 | 10:14 PM

ಇಂದಿರಾ ಗಾಂಧಿ ಅವರನ್ನು ಅನರ್ಹಗೊಳಿಸಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯೊಡ್ಡಿದ್ದ 1975ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪು ಅತ್ಯಂತ ಧೈರ್ಯಶಾಲಿ ತೀರ್ಪಾಗಿತ್ತು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ವ್ಯಾಖ್ಯಾನಿಸಿದ್ದಾರೆ. ಪ್ರಯಾಗ್​ರಾಜ್ ಹೈಕೋರ್ಟ್​ ಹೊಸ ಸಂಕೀರ್ಣದ ಶಂಕುಸ್ಥಾಪನೆ ಮಾಡಿದ ಅವರು, ಅಂದು ಇಂದಿರಾ ಗಾಂಧಿ ಅವರನ್ನು ಅನರ್ಹಗೊಳಿಸಿದ ತೀರ್ಪು ಮುಂದಿನ ದಿನಗಳಲ್ಲಿ ದೇಶದಲ್ಲಿ ಘೋಷಣೆಯಾದ ತುರ್ತು ಪರಿಸ್ಥಿತಿಗೂ ಕಾರಣವಾಗಿರಬಹುದು ಎಂದು ಅಭಿಪ್ರಾಯಪಟ್ಟರು.

ಅಂದು ಇಂದಿರಾ ಗಾಂಧಿ ಅವರನ್ನು ಅನರ್ಹಗೊಳಿಸಿ ಅಲಹಾಬಾದ್ ಹೈಕೋರ್ಟ್​ನ ನ್ಯಾಯಮೂರ್ತಿಯಾಗಿದ್ದ ಜಗಮೋಹನಲಾಲ್ ಸಿನ್ಹಾ ಆದೇಶಿಸಿದ್ದರು. ಅವರು ನೀಡಿದ್ದ ಆದೇಶ ರಾಷ್ಟ್ರವನ್ನೇ ಬೆಚ್ಚಿ ಬೀಳಿಸುವಂತಿತ್ತು. ಆದರೆ ಆನಂತರದ ತುರ್ತು ಪರಿಸ್ಥಿತಿಯ ಪರಿಣಾಮಗಳನ್ನು ವಿವರಿಸಲು ನಾನು ಬಯಸುವುದಿಲ್ಲ ಎಂದು ಸಹ ಸಿಜೆಐ ರಮಣ ಹೇಳಿದ್ದಾರೆ.

1971ರ ರಾಯ್​ಬರೇಲಿ ಲೋಕಸಭಾ ಕ್ಷೇತ್ರದಿಂದ ಇಂದಿರಾ ಗಾಂಧಿ ಸ್ಪರ್ಧಿಸಿದ್ದರು. ಈ ಚುನಾವಣೆಗೆ ಸಂಬಂಧಿಸಿಯೇ ಅಲಹಾಬಾದ್ ಹೈಕೋರ್ಟ್ 1975ರಲ್ಲಿ ಇಂದಿರಾ ಗಾಂಧಿ ಅವರ ವಿರುದ್ಧ ತೀರ್ಪು ನೀಡಿತ್ತು,. ಮುಂದಿನ 6 ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆಯೂ ಅಲಹಾಬಾದ್ ಹೈಕೋರ್ಟ್ ತಡೆ ಒಡ್ಡಿತ್ತು.

ಸುದ್ದಿಗಳಿಗೆ ಕೋಮು ಸ್ಪರ್ಶ ಕೊಡುವ ವೆಬ್​ಪೋರ್ಟಲ್, ಸೋಷಿಯಲ್​ ಮೀಡಿಯಾಗಳ ವಿರುದ್ಧ ಸಿಜೆಐ ಎನ್​.ವಿ.ರಮಣ ಅಸಮಾಧಾನ

ಕೆಲವು ಆನ್​​ಲೈನ್​  ಸುದ್ದಿಮಾಧ್ಯಮಗಳಲ್ಲಿ ಮತ್ತು ಸೋಷಿಯಲ್ ಮೀಡಿಯಾ (Social Media)ಗಳಲ್ಲಿ ಒಂದಷ್ಟು ಸುದ್ದಿಗಳಿಗೆ ಕೋಮು ಬಣ್ಣ ಬಳಿಯುವ ಪ್ರಯತ್ನಗಳು ಹೆಚ್ಚಾಗುತ್ತಿವೆ. ಇಂಥ ಪ್ರವೃತ್ತಿ ದೇಶಕ್ಕೆ ಕೆಟ್ಟ ಹೆಸರು ತರುತ್ತದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ  (CJI N V Ramana)ಹೇಳಿದರು. ಹಾಗೇ, ವೆಬ್​ ಪೋರ್ಟಲ್​ಗಳನ್ನು ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನು ಸಾಮಾಜಿಕ ಮಾಧ್ಯಮ ಕಂಪನಿಗಳು ಪ್ರಭಾವಶಾಲಿ ಜನರ ಮಾತುಗಳನ್ನಷ್ಟೇ ಕೇಳುತ್ತವೆ. ಯಾವುದೇ ಸಂಸ್ಥೆ ಅಥವಾ ಸಾಮಾನ್ಯ ಜನರ ಬಗ್ಗೆ ಅವುಗಳ ಗಮನವಿಲ್ಲ ಎಂದೂ ವಿಷಾದ ವ್ಯಕ್ತಪಡಿಸಿದರು.

ಕೊರೊನಾ ಪ್ರಾರಂಭದ ದಿನಗಳಲ್ಲಿ ದೆಹಲಿಯ ನಿಜಾಮುದ್ದೀನ್​ ಮರ್ಕಜ್​​ನಲ್ಲಿ ತಬ್ಲಿಘಿ ಜಮಾತ್​ ಸಮಾವೇಶ ನಡೆದಿತ್ತು.  ದೇಶ-ವಿದೇಶಗಳ ಸಾವಿರಾರು ಮುಸ್ಲಿಮರು ಭಾಗಿಯಾಗಿದ್ದರು. ನಂತರ ತಮ್ಮತಮ್ಮ ವಾಸಸ್ಥಳಕ್ಕೆ ತೆರಳಿದ್ದರು. ಅದು ಕೊರೊನಾ ಮಿತಿಮೀರಲು ಪ್ರಮುಖ ಕಾರಣವಾಗಿತ್ತು ಎಂದು ಈ ಬಗ್ಗೆ ವರದಿ ಮಾಡುವ ಭರದಲ್ಲಿ ಹಲವು ಮಾಧ್ಯಮಗಳು ಸುದ್ದಿಗೆ ಕೋಮು ಸ್ಪರ್ಶ ನೀಡಿವೆ. ಅಂಥ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಹಲವರು ಸುಪ್ರೀಂಕೋರ್ಟ್​ಗೆ ರಿಟ್​ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳ ವಿಚಾರಣೆ ವೇಳೆ ಸಿಜೆಐ ಎನ್​. ವಿ.ರಮಣ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸಂಸತ್ತಿನಲ್ಲಿ ಯಾವ ಕಾಯ್ದೆಯ ಬಗ್ಗೆಯೂ ಗುಣಮಟ್ಟದ ಚರ್ಚೆ ನಡೆಯುತ್ತಿಲ್ಲ, ಇದು ವಿಷಾದನೀಯ: ಸಿಜೆಐ ಎನ್​ ವಿ ರಮಣ

ಸಿಹಿ ಸುದ್ದಿ: ಮಹಿಳೆಯರ ಎನ್​ಡಿಎ ಪ್ರವೇಶ, ಶಾಶ್ವತ ಆಯೋಗಕ್ಕೆ ಕೇಂದ್ರದ ಒಪ್ಪಿಗೆ; ಸುಪ್ರೀಂಕೋರ್ಟ್​ಗೆ ಮಾಹಿತಿ

(Supreme Court CJI NV Ramana says 1975 Allahabad High Court verdict Indira Gandhi disqualifying was a great courage)