ಬೆಂಗಳೂರಿನಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ! ಪಕ್ಕದ ಮನೆಯ ಯುವಕನಿಂದ ದುಷ್ಕೃತ್ಯ

ಬೆಂಗಳೂರಿನಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ! ಪಕ್ಕದ ಮನೆಯ ಯುವಕನಿಂದ ದುಷ್ಕೃತ್ಯ
ಸಾಂದರ್ಭಿಕ ಚಿತ್ರ

ಬಾಲಕಿ ತಾಯಿ ಮಗಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಿದ್ದರು. ಈ ವೇಳೆ ಪಕ್ಕದ ಮನೆಯ ಯುವಕ ದುಷ್ಕೃತ್ಯ ಎಸಗಿದ್ದಾನೆ. ಸದ್ಯ ಆರೋಪಿಯನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

TV9kannada Web Team

| Edited By: sandhya thejappa

Jan 23, 2022 | 10:11 AM

ಬೆಂಗಳೂರು: ನಗರದಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ (Rape) ನಡೆದಿದೆ. ನಿನ್ನೆ ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ದುಷ್ಕೃತ್ಯ ನಡೆದಿದೆ. ಬಾಲಕಿ ತಾಯಿ (Mother) ಮಗಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಿದ್ದರು. ಈ ವೇಳೆ ಪಕ್ಕದ ಮನೆಯ ಯುವಕ ದುಷ್ಕೃತ್ಯ ಎಸಗಿದ್ದಾನೆ. ಸದ್ಯ ಆರೋಪಿಯನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಬಾಲಕಿ ಮತ್ತು ಆರೋಪಿಯ ವೈದ್ಯಕೀಯ ಪರೀಕ್ಷೆಯನ್ನ (Medical Test) ಪೊಲೀಸರು ನಡೆಸಲಿದ್ದಾರೆ.

ಬಾಲಕಿ ತಾಯಿ ಮಗಳನ್ನು ಬಿಟ್ಟು ಗಾಮೆಂಟ್ ಒಂದರಲ್ಲಿ ಕೆಲಸ ಮಾಡಲು ಹೋಗಿದ್ದರು. ಆಗ ಬಂಧಿತ ಆರೋಪಿ ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಕೃತ್ಯ ಎಸಗಿದ್ದಾನೆ. ಮನೆಗೆ ಬಂದ ತಾಯಿಗೆ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಬಾಲಕಿ ತಾಯಿ ಮನೆಗೆ ಬರುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದ. ಆದರೆ ದೂರಿನನ್ವಯ ಆರೋಪಿ ಯುವಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಿನ್ನೆ ರಾತ್ರಿ ತಡವಾಗಿದ್ದ ಕಾರಣ ವೈದ್ಯಕೀಯ ಪರೀಕ್ಷೆ ನಡೆಸಲು ಆಗಿರಲಿಲ್ಲ. ಇಂದು ಪರೀಕ್ಷೆ ನಡೆಸಲು ಪೊಲೀಸರು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ಅಂಬೇಡ್ಕರ್ ಭವನ ವಿಚಾರಕ್ಕೆ ಗಲಾಟೆ ನಡೆದು, ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಹೊರಟೂರು ಬಳಿ ಸಂಭವಿಸಿದೆ. ನಂದಣ್ಣಗೌಡ ಎಂಬುವವರು ಅಂಬೇಡ್ಕರ್ ಭವನವನ್ನು ಕಬ್ಜಾ ಮಾಡಿಕೊಂಡಿದ್ದರು. ಭವನ ಸಮುದಾಯಕ್ಕೆ ಬಿಟ್ಟು ಕೊಡುವಂತೆ ಹೇಳಿದ್ದಕ್ಕೆ ಬಸಪ್ಪ ಮೇಲೆ ಹಲ್ಲೆ ಮಾಡಿದ್ದಾರೆ. ಬಸಪ್ಪ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಲ್ಲದೇ, ಮನೆಯಲ್ಲಿದ್ದ ವಸ್ತುಗಳಿಗೆ ಬೆಂಕಿ ಹಾಕಿದ್ದಾರೆ ಅಂತ ನಂದಣ್ಣಗೌಡ, ಬೆಂಬಲಿಗರ ವಿರುದ್ಧ ಆರೋಪ ಕೇಳಿಬಂದಿದೆ. ಗಾಯಾಳು ಬಸಪ್ಪಗೆ ಕಲಬುರಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ವಡಗೇರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ

ಉತ್ತರ ಪ್ರದೇಶ ವಿಧಾನ ಸಭೆ ಚುನಾವಣೆಯಲ್ಲಿ ಪ್ರಚಾರ ಮಾಡಲು ಮಧ್ಯಂತರ ಜಾಮೀನು ಕೋರಿ ಸರ್ವೋಚ್ಛ ನ್ಯಾಯಾಲಯ ಕದ ತಟ್ಟಿದ ಆಜಂ ಖಾನ್

Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 42,470 ಜನರಿಗೆ ಕೊರೊನಾ ದೃಢ; 26 ಮಂದಿ ಸಾವು

Follow us on

Related Stories

Most Read Stories

Click on your DTH Provider to Add TV9 Kannada