ಅಪ್ರಾಪ್ತ ಮಗಳ ಮೇಲೆ ರೇಪ್​ ಮಾಡಿದ್ದವನನ್ನು ಗೋರಖ್​ಪುರ ಕೋರ್ಟ್ ಆವರಣದಲ್ಲಿಯೇ ಕೊಂದ ಮಾಜಿ ಬಿಎಸ್​ಎಫ್​ ಯೋಧ

ದಿಲ್​ಶಾದ್​ ಹುಸೇನ್​ ಮೂಲತಃ ಬಿಹಾರದ ಮುಜಾಫರ್​ಪುರದವನು. ಈತ ನಿವೃತ್ತ ಬಿಎಸ್​ಎಫ್ ಯೋಧನ ಅಪ್ರಾಪ್ತ ಪುತ್ರಿಯ ಮೇಲೆ ಎರಡು ವರ್ಷಗಳ ಹಿಂದೆ ಅತ್ಯಾಚಾರ ಮಾಡಿದ್ದ. ಆತನ ವಿರುದ್ಧ ಪೋಕ್ಸೋ ಕಾಯ್ದೆ (POCSO Act)ಯಡಿ ಪ್ರಕರಣ ದಾಖಲಾಗಿತ್ತು. ಹಾಗಿದ್ದಾಗ್ಯೂ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದ

ಅಪ್ರಾಪ್ತ ಮಗಳ ಮೇಲೆ ರೇಪ್​ ಮಾಡಿದ್ದವನನ್ನು ಗೋರಖ್​ಪುರ ಕೋರ್ಟ್ ಆವರಣದಲ್ಲಿಯೇ ಕೊಂದ ಮಾಜಿ ಬಿಎಸ್​ಎಫ್​ ಯೋಧ
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Jan 23, 2022 | 12:37 PM

ಮಗಳ ಮೇಲೆ ಅತ್ಯಾಚಾರ ಮಾಡಿದ ಆರೋಪಿಯನ್ನು ಆಕೆಯ ತಂದೆ ಕೋರ್ಟ್ ಆವರಣದಲ್ಲಿಯೇ ಗುಂಡಿಕ್ಕಿ ಕೊಂದ ಘಟನೆ ಉತ್ತರಪ್ರದೇಶ(Uttar Pradesh)ದ ಗೋರಖ್​ಪುರದಲ್ಲಿ ನಡೆದಿದೆ. ಈ ಅತ್ಯಾಚಾರ ಸಂತ್ರಸ್ತೆಯ ತಂದೆ ಗಡಿ ಭದ್ರತಾ ಪಡೆಯ (BSF) ಯೋಧನಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು. ಅವರಿಗೀಗ ಸುಮಾರು 50 ವರ್ಷ. ಆರೋಪಿ ದಿಲ್​ಶಾದ್ ಹುಸೇನ್​ (30)ನನ್ನು ಗೋರಖ್​ಪುರ ಜಿಲ್ಲೆ ಸಿವಿಲ್​ ಕೋರ್ಟ್​ ಆವರಣದಲ್ಲಿಯೇ ಕೊಂದಿದ್ದಾರೆ. ಆರೋಪಿಯ ತಲೆಗೆ ನೇರವಾಗಿ ಗುಂಡುಹೊಡೆದು ಹತ್ಯೆ ಮಾಡಿದ್ದಾರೆ. ಆವರಣದಲ್ಲಿ ಆರೋಪಿಯನ್ನು ಕೊಂದ ಮಾಜಿ ಬಿಎಸ್​ಎಫ್​ ಯೋಧನನ್ನು ಅಲ್ಲಿಯೇ ಇದ್ದ ಪೊಲೀಸರು ಹಿಡಿದಿದ್ದಾರೆ. ಹಾಗಂತ ಅವರ ವಿರುದ್ಧ ಪ್ರಕರಣ ದಾಖಲಾದ ಬಗ್ಗೆ ಸದ್ಯ ಮಾಹಿತಿ ಇಲ್ಲ. 

ದಿಲ್​ಶಾದ್​ ಹುಸೇನ್​ ಮೂಲತಃ ಬಿಹಾರದ ಮುಜಾಫರ್​ಪುರದವನು. ಈತ ನಿವೃತ್ತ ಬಿಎಸ್​ಎಫ್ ಯೋಧನ ಅಪ್ರಾಪ್ತ ಪುತ್ರಿಯ ಮೇಲೆ ಎರಡು ವರ್ಷಗಳ ಹಿಂದೆ ಅತ್ಯಾಚಾರ ಮಾಡಿದ್ದ. ಆತನ ವಿರುದ್ಧ ಪೋಕ್ಸೋ ಕಾಯ್ದೆ (POCSO Act)ಯಡಿ ಪ್ರಕರಣ ದಾಖಲಾಗಿತ್ತು. ಹಾಗಿದ್ದಾಗ್ಯೂ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದ. ಆದರೆ ಗೋರಖ್​ಪುರದ ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ಆತ ವಿಚಾರಣೆಗೆ ಹಾಜರಾಗಬೇಕಿತ್ತು. ಅದರಂತೆ ಶುಕ್ರವಾರ ಆರೋಪಿ ಕೋರ್ಟ್​ಗೆ ಬಂದಿದ್ದ. ತನ್ನ ಪರ ವಕೀಲನನ್ನು ಭೇಟಿಯಾಗಲು ನ್ಯಾಯಾಲಯ ಆವರಣದೊಳಗೆ ಬಂದಿದ್ದರೂ, ಒಳಗೆ ಪ್ರವೇಶಕ್ಕೆ ತಡೆಯಲಾಯಿತು. ಕೊವಿಡ್ 19 ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಆತನನ್ನು ಅಲ್ಲಿ ತಡೆದು ನಿಲ್ಲಿಸಲಾಗಿತ್ತು.  ಇದೇ ವೇಳೆ  ಅಲ್ಲಿದ್ದ ಮಾಜಿ ಯೋಧ, ಸಂತ್ರಸ್ತೆಯ ಅಪ್ಪ ಆತನ ತಲೆಗೆ ಗುಂಡು ಹೊಡೆದಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ನೀಡಿದ ಗೋರಖ್​ಪುರ ಹಿರಿಯ ಪೊಲೀಸ್ ಅಧಿಕಾರಿ ವಿಪಿನ್ ತಾಡಾ, ಮಾಜಿ ಯೋಧನನ್ನು ನಾವು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದೇವೆ. ಈ ವೇಳೆ ಅವರು ದಿಲ್​ಶಾದ್​ ಕೃತ್ಯದ ಬಗ್ಗೆ ವಿವರಿಸಿದ್ದಾರೆ. 2020ರ ಫೆಬ್ರವರಿಯಲ್ಲಿ ತಮ್ಮ ಮಗಳ ಮೇಲೆ ಆತ ಅತ್ಯಾಚಾರ ಮಾಡಿದ್ದಾಗಿ ಹೇಳಿದ್ದಾರೆ.  ಇನ್ನು ಮೃತ ಅತ್ಯಾಚಾರ ಆರೋಪಿಯ ಶವವನ್ನು ಪೋಸ್ಟ್​ಮಾರ್ಟಮ್​ಗೆ ಕಳಿಸಲಾಗಿದೆ ಎಂದು ತಿಳಿಸಿದ್ದಾರೆ. ದಿಲ್​ಶಾದ್​ ಹುಸೇನ್,​ ಬರ್ಹಲ್ಗಂಜ್ ಎಂಬಲ್ಲಿ ಸೈಕಲ್ ರಿಪೇರಿ ಮಾಡುವ ಅಂಗಡಿಯಿಟ್ಟಿದ್ದ. ಈತನ ಶಾಪ್​ ಬಳಿಯೇ ಈ ಮಾಜಿ ಯೋಧನ ಮನೆಯಿತ್ತು. 2020ರ ಫೆಬ್ರವರಿ 12ರಂದು ದಿಲ್​ಶಾದ್​, ಮಾಜಿ ಯೋಧನ ಅಪ್ರಾಪ್ತ ಪುತ್ರಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದ. ಅದಾದ ನಂತರ ಆಕೆಯ ತಂದೆಯೇ ದೂರು ನೀಡಿದ್ದರು. 2021ರ ಮಾರ್ಚ್​ 12ರಂದು ಹೈದರಾಬಾದ್​ನಲ್ಲಿ ದಿಲ್​ಶಾದ್ ಅರೆಸ್ಟ್ ಆಗಿದ್ದ.  ಆದರೆ ನಂತರದ ದಿನಗಳಲ್ಲಿ ಈತನಿಗೆ ಜಾಮೀನು ಸಿಕ್ಕಿತ್ತು.

ಇದನ್ನೂ ಓದಿ: ಗದಗ ಆರೋಗ್ಯ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲು! ಒಂದು ನರ್ಸಿಂಗ್ ಹುದ್ದೆಗೆ 1 ಲಕ್ಷ ರೂ. ಡಿಮ್ಯಾಂಡ್

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ