ಗದಗ ಆರೋಗ್ಯ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲು! ಒಂದು ನರ್ಸಿಂಗ್ ಹುದ್ದೆಗೆ 1 ಲಕ್ಷ ರೂ. ಡಿಮ್ಯಾಂಡ್

ತಿಂಗಳ ಹಿಂದೆ ಎನ್ಎಚ್ಎಮ್ ಯೋಜನೆಯಡಿ 31 ನರ್ಸಿಂಗ್ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ ಮಾಡಲಾಗಿದೆ. ಅಂಕದ ಆಧಾರದ ಮೇಲೆ ನೇಮಕಾತಿ ಪಟ್ಟಿ ಸಿದ್ಧ ಮಾಡಿದ್ದಾರೆ. ಅಭ್ಯರ್ಥಿಗಳು ಆದೇಶ ಬರುತ್ತೆ ಅಂತ ಕಾಯುತ್ತಿದ್ದಾರೆ.

ಗದಗ ಆರೋಗ್ಯ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲು! ಒಂದು ನರ್ಸಿಂಗ್ ಹುದ್ದೆಗೆ 1 ಲಕ್ಷ ರೂ. ಡಿಮ್ಯಾಂಡ್
ಎಸಿಬಿ ರೇಡ್ ಬಳಿಕ ಆರೋಗ್ಯ ಇಲಾಖೆಯಲ್ಲಿ ಭ್ರಷ್ಟಾಚಾರ ಬಯಲಾಗಿದೆ
Follow us
TV9 Web
| Updated By: sandhya thejappa

Updated on: Jan 23, 2022 | 12:23 PM

ಗದಗ: ಸರ್ಕಾರ ಕೊರೊನಾ (Coronavirus) ನಿಯಂತ್ರಣಕ್ಕೆ ಹೆಣಗಾಡುತ್ತಿದ್ದರೆ, ಇತ್ತ ಜಿಲ್ಲೆಯ ಆರೋಗ್ಯ ಇಲಾಖೆ ಅಧಿಕಾರಿಗಳು ಹಣ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಎನ್ಎಚ್ಎಮ್ (NHM) ಯೋನೆಯಡಿ ನರ್ಸಿಂಗ್ ಸಿಬ್ಬಂದಿ ನೇಮಕಾತಿಯಲ್ಲಿ ಭಾರಿ ಹಗರಣ ನಡೆದಿದೆ. ಒಂದೊಂದು ಹುದ್ದೆಗೆ ಒಂದು ಲಕ್ಷ ರೂಪಾಯಿ ನಿಗದಿ ಮಾಡಿದ್ದಾರೆ. ಆರೋಗ್ಯ ಇಲಾಖೆ (Health Department) ಈ ದೊಡ್ಡ ಹಗರಣ ಎಸಿಬಿ ರೇಡ್ ಬಳಿಕ ಬಯಲಾಗಿದೆ. ಡಿಎಚ್ಓ ಹಾಗೂ ಎನ್ಎಚ್ಎಮ್ ವಿಭಾಗದ ಮುಖ್ಯಸ್ಥರು, ಸಿಬ್ಬಂದಿಗಳು ಭಾಗಿಯಾಗಿ ಈ ಹಗರಣ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ತಿಂಗಳ ಹಿಂದೆ ಎನ್ಎಚ್ಎಮ್ ಯೋಜನೆಯಡಿ 31 ನರ್ಸಿಂಗ್ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ ಮಾಡಲಾಗಿದೆ. ಅಂಕದ ಆಧಾರದ ಮೇಲೆ ನೇಮಕಾತಿ ಪಟ್ಟಿ ಸಿದ್ಧ ಮಾಡಿದ್ದಾರೆ. ಅಭ್ಯರ್ಥಿಗಳು ಆದೇಶ ಬರುತ್ತೆ ಅಂತ ಕಾಯುತ್ತಿದ್ದಾರೆ. ಆದರೆ ಈ ನಡುವೆ ಆರೋಗ್ಯ ಇಲಾಖೆಯಲ್ಲಿ ಹಣಕ್ಕೆ ಬೇಡುತ್ತಿದ್ದಾರೆ. ಗದಗ ನಗರದ ರಮೇಶ್ ಸಜ್ಜಗಾರ ಎಂಬ ಖಾಸಗಿ ವ್ಯಕ್ತಿ ಮೂಲಕ ಆಯ್ಕೆಯಾದ ಅಭ್ಯರ್ಥಿಗಳಿಗೆ ಫೋನ್ ಮೂಲಕ ಸಂಪರ್ಕ ಮಾಡಿ ಒಂದು ಹುದ್ದೆಗೆ ಒಂದು ಲಕ್ಷ ಹಣ ನಿಗದಿ ಮಾಡಿ ಬೇಡಿಕೆ ಇಟ್ಟಿದ್ದಾರೆ. ಸುಮಾರು 30 ಜದರು ಒಂದೊಂದು ಲಕ್ಷ ಹಣ ನೀಡಿದ್ದಾರೆ ಎನ್ನಲಾಗಿದೆ. ಆದರೆ ಓರ್ವ ಮಹಿಳೆ ಮಾತ್ರ ಆರೋಗ್ಯ ಇಲಾಖೆಯ ಈ ಹಗರಣ ಬಯಲಿಗೆ ತಂದಿದ್ದಾರೆ.

ರಮೇಶ್ ಸಜ್ಜಗಾರ ನರ್ಸಿಂಗ್ ಹುದ್ದೆ ಕೋಡಿಸುತ್ತೇನೆ ಎಂದು ಮಹಿಳೆಯೊಬ್ಬರಿಗೆ 1 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾನೆ. ಏನ್ ಗ್ಯಾರಂಟಿ? ನೀವು ಯಾರೂ? ಅಂತ ಪ್ರಶ್ನೆ ಮಾಡಿದ್ದಾರೆ. ಆಗ ಖಾಸಗಿ ವ್ಯಕ್ತಿ NHM ವಿಭಾಗದ ಗದಗಿನವರ ಎಂಬುವರಿಂದ ಮಾತನಾಡಿಸಿ ಕನ್ಫರ್ಮ ಮಾಡಿದ್ದಾನೆ. ಆಗ ಈ ಮಹಿಳೆ ಎಸಿಬಿಗೆ ದೂರು ನೀಡಿದ್ದಳು. ಖಾಸಗಿ ಹೋಟೆಲ್​ನಲ್ಲಿ 90 ಸಾವಿರ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಎಸಿಬಿ, ಡಿವೈಎಸ್​ಪಿ ಸುರೇಶ್ ರೆಡ್ಡಿ ನೇತೃತ್ವದ ತಂಡ ಆರೋಗ್ಯ ಇಲಾಖೆ ಕಚೇರಿ ಮೇಲೂ ದಾಳಿ ಮಾಡಿ ದಾಖಲೆಗಳು ಪರಿಶೀಲನೆ ಮಾಡಿದ್ದಾರೆ.

ರಮೇಶ್ನನ್ನು ವಶಕ್ಕೆ ಪಡೆದ ಎಸಿಬಿ ಅಧಿಕಾರಿಗಳು, ತನಿಖೆ ಮುಂದುವರೆಸಿದ್ದಾರೆ. ಗದಗ ಆರೋಗ್ಯ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಸರ್ಕಾರ, ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಅಂತ ಅಭ್ಯರ್ಥಿ ಪತಿ ಒತ್ತಾಯಿಸಿದ್ದಾರೆ.

ಈ ಹಗರಣದ ಪ್ರಮುಖ ರೂವಾರಿ ಡಿಎಚ್ಓ ಡಾ ಸತೀಶ್ ಬಸರಿಗಿಡ ಎನ್ನುವ ಗುಸುಗುಸು ಗದಗ ಆರೋಗ್ಯ ಇಲಾಖೆಯಲ್ಲಿ ಕೇಳಿ ಬರುತ್ತಿದೆ. ಆಯ್ಕೆ ಪಟ್ಟಿ ಖಾಸಗಿ ವ್ಯಕ್ತಿಗೆ ನೀಡಿದ್ದು, ಹಿಂದಿನ ಡಿಎಚ್ಓ ಅನ್ನೋದು ಆರೋಗ್ಯ ಇಲಾಖೆ ಭಾರಿ ಚರ್ಚೆ ನಡೆದಿದೆ. ಹಿಂದಿನ ಡಿಎಚ್ಓ ವರ್ಗಾವಣೆ ಬಳಿಕ ನೇಮಕಾತಿ ಪಟ್ಟಿಯೇ ತೆಗೆದುಕೊಂಡ ಹೋಗಿದ್ದಾರಂತೆ. ಕಚೇರಿಯಲ್ಲಿ ಇರಬೇಕಾದ ಸರ್ಕಾರಿ ದಾಖಲೆಗಳು ತೆಗೆದುಕೊಂಡು ಹೋಗುವಂತಿಲ್ಲ. ಆದರೆ ಎಲ್ಲ ಫೈಲ್ ಇದೆ. ಆದರೆ ನೇಮಕಾತಿ ಪಟ್ಟಿ ಮಾತ್ರ ಇಲ್ಲ. ನನಗೂ ಈ ನೇಮಕಾತಿಗೂ ಯಾವುದೇ ಸಂಬಂಧ ಇಲ್ಲ ಅಂತ 5 ದಿನಗಳ ಹಿಂದೆ ಅಧಿಕಾರ ವಹಿಸಿಕೊಂಡ ನೂತನ ಡಿಎಚ್ಓ ಡಾ. ಜಗದೀಶ್ ನುಚ್ಚಿನ್ ಟಿವಿ9ಗೆ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಆರೋಗ್ಯ ಇಲಾಖೆಗೆ ಸಮಗ್ರ ವರದಿ ನೀಡುತ್ತೇನೆ. ಜೊತೆಗೆ ನೇಮಕಾತಿಯಲ್ಲಿ ಆದ ಅವ್ಯವಹಾರದಲ್ಲಿ ಯಾರು ಯಾರು ಸಿಬ್ಬಂದಿಗಳು ಇದ್ದಾರೆ ಎನ್ನುವ ಬಗ್ಗೆ ತನಿಖೆ ಮಾಡುತ್ತೇನೆ ಅಂತ ಡಿಎಚ್ಓ ಡಾ. ಜಗದೀಶ್ ನುಚ್ಚಿನ ಹೇಳಿದ್ದಾರೆ.

ವರದಿ: ಸಂಜೀವ ಪಾಂಡ್ರೆ

ಇದನ್ನೂ ಓದಿ

Crime News: ನೆಲಮಂಗಲದ ಎರಡು ಕಡೆ ಬೀಗ ಒಡೆದು ಕಳ್ಳತನ, ವಿಜಯಪುರ ಅಗ್ನಿ ಅವಘಡದಲ್ಲಿ ಇಬ್ಬರು ಸಜೀವ ದಹನ

ಶಾಖ ಉತ್ಪತ್ತಿ ಮಾಡುವ ದಿನಬಳಕೆಯ ವಸ್ತುಗಳಿಂದ ಚರ್ಮ ಸುಡಬಹುದು; ಎಚ್ಚರಿಕೆಯಿಂದಿರಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ