ಉತ್ತರ ಪ್ರದೇಶ ವಿಧಾನ ಸಭೆ ಚುನಾವಣೆಯಲ್ಲಿ ಪ್ರಚಾರ ಮಾಡಲು ಮಧ್ಯಂತರ ಜಾಮೀನು ಕೋರಿ ಸರ್ವೋಚ್ಛ ನ್ಯಾಯಾಲಯ ಕದ ತಟ್ಟಿದ ಆಜಂ ಖಾನ್

ಉತ್ತರ ಪ್ರದೇಶ ವಿಧಾನ ಸಭೆ ಚುನಾವಣೆಯಲ್ಲಿ ಪ್ರಚಾರ ಮಾಡಲು ಮಧ್ಯಂತರ ಜಾಮೀನು ಕೋರಿ ಸರ್ವೋಚ್ಛ ನ್ಯಾಯಾಲಯ ಕದ ತಟ್ಟಿದ ಆಜಂ ಖಾನ್
ಜೈಲಿನಲ್ಲಿರುವ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್

ಚುನಾವಣೆ ಮುಗಿಯುವವರೆಗೆ ತಾವು ಸೆರೆಮನೆಯಲ್ಲೇ ಕೊಳೆಯಬೇಕು ಎಂಬ ದುರದ್ದೇಶದಿಂದ ಬಾಕಿಯಿರುವ ಮೂರು ಜಾಮೀನು ಆರ್ಜಿಗಳ ವಿಚಾರಣೆ ವಿಳಂಬಗೊಳ್ಳಲು ಉತ್ತರ ಪ್ರದೇಶ ಸರ್ಕಾರ ಸಾಧ್ಯವಿರುವ ಎಲ್ಲ ತಂತ್ರಗಳನ್ನು ಬಳಸಿದೆ ಎಂದು ತಮ್ಮ ಮನವಿಯಲ್ಲಿ ಖಾನ್ ಕೋರ್ಟ್​ಗೆ ತಿಳಿಸಿದ್ದಾರೆ.

TV9kannada Web Team

| Edited By: Arun Belly

Jan 23, 2022 | 1:14 AM

ಫೋರ್ಜರಿ ಪ್ರಕರಣವೊಂದರಲ್ಲಿ ತನ್ನ ಹೆಂಡತಿ ಮತ್ತು ಮಗನೊಂದಿಗೆ ಸೆರೆವಾಸ ಅನುಭವಿಸುತ್ತಿರುವ ಸಂಸತ್ ಸದಸ್ಯ ಮತ್ತು ಉತ್ತರ ಪ್ರದೇಶನಲ್ಲಿ ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಂ ಖಾನ್ (Azam Khan) ಮತ್ತೇ ಸುದ್ದಿಯಲ್ಲಿದ್ದಾರೆ. ಬೇರೆ ಪಕ್ಷಗಳ ನಾಯಕರ ಬಗ್ಗೆ ಅತಿರೇಕದ ಹೇಳಿಕೆ ಮತ್ತು ಮಹಿಳೆಯರ ಕುರಿತು ಕೀಳು ಅಭಿರುಚಿಯ ಕಾಮೆಂಟ್ಗಳನ್ನು ಮಾಡುತ್ತಾ ಸದಾ ಒಂದಿಲ್ಲೊಂದು ವಿವಾದದ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡಿರುತ್ತಿದ್ದ ಆಜಂ ಖಾನ್ ಮಧ್ಯಂತರ ಜಾಮೀನು (interim bail) ಕೋರಿ ಸುಪ್ರೀಮ್ ಕೋರ್ಟ್​ಗೆ  (Supreme Court) ಮನವಿ ಸಲ್ಲಿಸಿದ್ದಾರೆ. ಉತ್ತರ ಪ್ರದೇಶದ ಚುನಾವಣೆಯಲ್ಲಿ ತಾನು ಪಕ್ಷದ ಪರ ಪ್ರಚಾರ ಹೋಗಬೇಕಿದೆ ಹಾಗಾಗಿ ಜಾಮೀನು ನೀಡಬೇಕೆಂದು ಅವರು ನ್ಯಾಯಾಲಯವನ್ನು ಕೋರಿದ್ದಾರೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಆಜಂ ಖಾನ್ ಶನಿವಾರದಂದು ಸರ್ವೋಚ್ಛ ನ್ಯಾಯಾಲಯ ಮೊರೆ ಹೊಕ್ಕಿದ್ದಾರೆ.

ಚುನಾವಣೆ ಮುಗಿಯುವವರೆಗೆ ತಾವು ಸೆರೆಮನೆಯಲ್ಲೇ ಕೊಳೆಯಬೇಕು ಎಂಬ ದುರದ್ದೇಶದಿಂದ ಬಾಕಿಯಿರುವ ಮೂರು ಜಾಮೀನು ಆರ್ಜಿಗಳ ವಿಚಾರಣೆ ವಿಳಂಬಗೊಳ್ಳಲು ಉತ್ತರ ಪ್ರದೇಶ ಸರ್ಕಾರ ಸಾಧ್ಯವಿರುವ ಎಲ್ಲ ತಂತ್ರಗಳನ್ನು ಬಳಸಿದೆ ಎಂದು ತಮ್ಮ ಮನವಿಯಲ್ಲಿ ಖಾನ್ ಕೋರ್ಟ್​ಗೆ ತಿಳಿಸಿದ್ದಾರೆ. ಫೆಬ್ರುವರಿ 10ರಿಂದ ಮಾರ್ಚ್ 7 ರವರೆಗೆ 7 ಹಂತಗಳಲ್ಲಿ ನಡೆಯಲಿರುವ ವಿಧಾನ ಸಭೆ ಚುನಾವಣೆ ಪ್ರಚಾರ ಕಾರ್ಯದಲ್ಲಿ ತನಗೆ ಅವಕಾಶ ಸಿಗದಂತೆ ಸರ್ಕಾರ ತಡೆಯುವ ಪ್ರಯತ್ನ ಮಾಡುತ್ತಿದೆ ಎಂದು ಖಾನ್ ಮನವಿಯಲ್ಲಿ ದೂರಿದ್ದಾರೆ.

ತನ್ನ ವಿರುದ್ಧ ದಾಖಲಾಗಿರುವ ಎಲ್ಲ ಪ್ರಕರಣಗಳಲ್ಲಿ ಜಾಮೀನು ಪಡೆದುಕೊಂಡಿದ್ದರೂ ಕೇವಲ ಮೂರು ಪ್ರಕರಣಗಳ ವಿಚಾರಣೆ ಪ್ರಕ್ರಿಯೆಯನ್ನು ಉದ್ದೇಶಪೂರ್ವಕವಾಗಿ ಮುಂದೂಡಲಾಗುತ್ತಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಫೆಬ್ರವರಿ 2020 ರಿಂದ ಖಾನ್ ಉತ್ತರ ಪ್ರದೇಶದ ಸೀತಾಪುರ ಜೈಲಿನಲ್ಲಿದ್ದಾರೆ. ಅವರ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿವೆ. ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಸಮಾಜವಾದಿ ಪಕ್ಷದ ನಾಯಕನ ವಿರುದ್ಧ 80 ಪ್ರಕರಣಗಳು ದಾಖಲಾಗಿವೆ.

ಉತ್ತರ ಪ್ರದೇಶ ವಿಧಾನ ಸಭೆಯ 403 ಸ್ಥಾನಗಳಿಗೆ ಫೆಬ್ರುವರಿ 10 ರಿಂದ 7 ಹಂತಗಳ ಚುನಾವಣೆ ಆರಂಭವಾಗಲಿದೆ. ಫೆಬ್ರುವರಿ 10, 14, 20, 23, 27 ಮತ್ತು ಮಾರ್ಚ್ 3 ಹಾಗೂ 7 ರಂದು ಮತದಾನ ನಡೆಯಲಿದೆ. ಮತಗಳ ಎಣಿಕೆ ಕಾರ್ಯ ಮಾರ್ಚ್ 10 ರಂದು ನಡೆಯಲಿದೆ.

ಇದನ್ನೂ ಓದಿ:   Fact check ಯೋಗಿ ಸರ್ಕಾರ ಆಯ್ಕೆಯಾದರೆ ಉತ್ತರ ಪ್ರದೇಶ ಸಮೃದ್ಧಿ ಕಾಣಲಿದೆ ಎಂದು ಹೇಳಿದ್ದಾರೆಯೇ ಅಖಿಲೇಶ್ ಯಾದವ್?  

ಇದನ್ನೂ ಓದಿ:   ಉತ್ತರ ಪ್ರದೇಶನಲ್ಲಿ ನಮ್ಮ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ಇಬ್ಬರು ಮುಖ್ಯಮಂತ್ರಿಗಳು ಎಂದರು ಅಸದುದ್ದೀನ್ ಒವೈಸಿ

Follow us on

Related Stories

Most Read Stories

Click on your DTH Provider to Add TV9 Kannada