Republic Day 2022: ಇಂದು ಪ್ರಧಾನಿ ಮೋದಿಯಿಂದ ನೇತಾಜಿ ಸುಭಾಷ್​ ಚಂದ್ರ ಬೋಸ್​ರ ಹೊಲೋಗ್ರಾಮ್​ ಪ್ರತಿಮೆ ಅನಾವರಣ

ಇಂಡಿಯಾ ಗೇಟ್​​ನ ಬಳಿಯಿದ್ದ ಅಮರ ಜವಾನ್​ ಜ್ಯೋತಿಯನ್ನು ಯುದ್ಧ ಸ್ಮಾರಕ ಜ್ಯೋತಿಯೊಂದಿಗೆ ಶುಕ್ರವಾರ ವಿಲೀನಗೊಳಿಸಲಾಗಿದೆ. ಇದೀಗ ಆ ಅಮರ ಜವಾನ್ ಜ್ಯೋತಿ ಇದ್ದ ಜಾಗದ ಮೇಲ್ಛಾವಣಿ ಮೇಲೆ ನೇತಾಜಿ ಸುಭಾಷ್​ ಚಂದ್ರಬೋಸ್ ಅವರ ಹೊಲೋಗ್ರಾಮ್​ ಪ್ರತಿಮೆ ಅನಾವರಣಗೊಳ್ಳಲಿದೆ.

Republic Day 2022: ಇಂದು ಪ್ರಧಾನಿ ಮೋದಿಯಿಂದ ನೇತಾಜಿ ಸುಭಾಷ್​ ಚಂದ್ರ ಬೋಸ್​ರ ಹೊಲೋಗ್ರಾಮ್​ ಪ್ರತಿಮೆ ಅನಾವರಣ
ನೇತಾಜಿ ಸುಭಾಷ್​ ಚಂದ್ರ ಬೋಸ್ ಪ್ರತಿಮೆ (ಎಎನ್​ಐ ಚಿತ್ರ)
Follow us
TV9 Web
| Updated By: Lakshmi Hegde

Updated on:Jan 23, 2022 | 9:11 AM

ಗಣರಾಜ್ಯೋತ್ಸವ ಆಚರಣೆ ದೇಶದಲ್ಲಿ ಇಂದಿನಿಂದಲೇ ಪ್ರಾರಂಭವಾಗಲಿದೆ. ಇಂದು ನೇತಾಜಿ ಸುಭಾಷ್​ ಚಂದ್ರ ಬೋಸ್​ ಅವರ ಜನ್ಮದಿನ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೆಹಲಿಯಲ್ಲಿ ನೇತಾಜಿಯವರ ಹೊಲೋಗ್ರಾಮ್​ ಪ್ರತಿಮೆ (ಲೇಸರ್ ಅಥವಾ ಅಂಥ ಇತರ ಬೆಳಕಿನ ಕಿರಣಗಳ ಟಚ್​ ಕೊಡಲಾದ  ಮೂರು ಆಯಾಮದ ಪ್ರತಿಮೆ). ದೇಶದಲ್ಲಿ ಸಾಮಾನ್ಯವಾಗಿ ಜನವರಿ 24ರಿಂದ ಗಣರಾಜ್ಯೋತ್ಸವ ದಿನಾಚರಣೆ ಶುರುವಾಗುತ್ತಿತ್ತು. ಆದರೆ ಈ ಬಾರಿ ನೇತಾಜಿ ಸುಭಾಷ್​ ಚಂದ್ರ ಬೋಸ್​ ಜನ್ಮದಿನದಿಂದಲೇ ಗಣರಾಜ್ಯೋತ್ಸವ ಸಂಭ್ರಮವೂ ಶುರುವಾಗಲಿದೆ ಎಂದು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಹೇಳಿದೆ.

ನೇತಾಜಿ ಸುಭಾಷ್​ ಚಂದ್ರ ಬೋಸ್​ ಪ್ರತಿಮೆಯನ್ನು ಗ್ರಾನೈಟ್​​ನಿಂದ ಮಾಡಲಾಗಿದ್ದು, ಅದನ್ನು ಇಂಡಿಯಾ ಗೇಟ್​ ಬಳಿ ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.  ಈ ಬಗ್ಗೆ ನಿನ್ನೆ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ, ಈ ಬಾರಿ ದೇಶ ನೇತಾಜಿ ಸುಭಾಷ್​ ಚಂದ್ರ ಅವರ 125ನೇ ಜನ್ಮ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಗ್ರಾನೈಟ್​​ನಿಂದ ನಿರ್ಮಿಸಲಾದ ಅವರ ಬಹುದೊಡ್ಡ ಪ್ರತಿಮೆಯನ್ನು ಇಂಡಿಯಾ ಗೇಟ್​ಬಳಿ ಸ್ಥಾಪಿಸಲಾಗುತ್ತಿರುವುದಕ್ಕೆ ನನಗೆ ತುಂಬ ಸಂತೋಷವಾಗುತ್ತಿದೆ. ನೇತಾಜಿಯವರ ಋಣ ತೀರಿಸುವ ಒಂದು ಅವಕಾಶ ಎಂದೇ ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ನೇತಾಜಿ ಸುಭಾಷ್​ ಚಂದ್ರ ಬೋಸ್​ ಅವರ ಗ್ರಾನೈಟ್​ ಪ್ರತಿಮೆ ಪೂರ್ಣಗೊಳ್ಳಲು ಇನ್ನೂ ಸಮಯ ಬೇಕು. ಅಲ್ಲಿಯವರೆಗೆ ಈ ಹೊಲೋಗ್ರಾಮ್​ ಪ್ರತಿಮೆ ಇರುತ್ತದೆ ಎಂದೂ ಪ್ರಧಾನಿ ತಿಳಿಸಿದ್ದಾರೆ. ಸುಭಾಷ್​ ಚಂದ್ರ ಬೋಸ್ ಅವರ ಹೊಲೋಗ್ರಾಮ್​ ಮೂರ್ತಿ 30 ಸಾವಿರ ಲ್ಯೂಮೆನ್ಸ್​ 4ಕೆ ಪ್ರಾಜೆಕ್ಟರ್​​ನಿಂದ ಚಾಲಿತವಾಗಿದೆ ಎಂದು ಪಿಎಂಒ ತಿಳಿಸಿದೆ.

ಇಂಡಿಯಾ ಗೇಟ್​​ನ ಬಳಿಯಿದ್ದ ಅಮರ ಜವಾನ್​ ಜ್ಯೋತಿಯನ್ನು ಯುದ್ಧ ಸ್ಮಾರಕ ಜ್ಯೋತಿಯೊಂದಿಗೆ ಶುಕ್ರವಾರ ವಿಲೀನಗೊಳಿಸಲಾಗಿದೆ. ಇದೀಗ ಆ ಅಮರ ಜವಾನ್ ಜ್ಯೋತಿ ಇದ್ದ ಜಾಗದ ಮೇಲ್ಛಾವಣಿ ಮೇಲೆ ನೇತಾಜಿ ಸುಭಾಷ್​ ಚಂದ್ರಬೋಸ್ ಅವರ ಹೊಲೋಗ್ರಾಮ್​ ಪ್ರತಿಮೆ ಅನಾವರಣಗೊಳ್ಳಲಿದೆ. ಗ್ರಾನೈಟ್​ನ ಭವ್ಯ ಮೂರ್ತಿ ಪೂರ್ಣಪ್ರಮಾಣದಲ್ಲಿ ಸಿದ್ಧ ಆಗುವವರೆಗೂ ಈ ಪ್ರತಿಮೆ ಇರಲಿದೆ.  ಅಂದಹಾಗೇ, ಸುಭಾಷ್​ ಚಂದ್ರ ಬೋಸ್​​ ಅವರ ಗ್ರಾನೈಟ್​ ಪ್ರತಿಮೆ 28 ಅಡಿ ಎತ್ತರ ಮತ್ತು ಆರು ಅಡಿ ಅಗಲ ಇರಲಿದೆ ಎಂದು ನ್ಯಾಶನಲ್​ ಮಾಡರ್ನ್​ ಆರ್ಟ್​ ಗ್ಯಾಲರಿಯ ಪ್ರಧಾನ ನಿರ್ದೇಶಕರಾದ ಅದ್ವೈತಾ ಗಡನಾಯಕ್​ ತಿಳಿಸಿದ್ದಾರೆ. ನೇತಾಜಿ ಗ್ರಾನೈಟ್​ ಪ್ರತಿಮೆಯನ್ನು ಇಂಡಿಯಾ ಗೇಟ್​ ಬಳಿ ಸ್ಥಾಪಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಟಿಎಂಸಿ ಸೇರಿ ಹಲವು ಪ್ರತಿಪಕ್ಷಗಳು ಸ್ವಾಗತಿಸಿವೆ.

ಇದನ್ನೂ ಓದಿ: Lata Mangeshkar: ಲತಾ ಮಂಗೇಶ್ಕರ್ ಆರೋಗ್ಯದಲ್ಲಿ ತುಸು ಚೇತರಿಕೆ; ವೈದ್ಯರು ನೀಡಿದ ಮಾಹಿತಿ ಇಲ್ಲಿದೆ

Published On - 8:20 am, Sun, 23 January 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್