Lata Mangeshkar: ಲತಾ ಮಂಗೇಶ್ಕರ್ ಆರೋಗ್ಯದಲ್ಲಿ ತುಸು ಚೇತರಿಕೆ; ವೈದ್ಯರು ನೀಡಿದ ಮಾಹಿತಿ ಇಲ್ಲಿದೆ
Lata Mangeshkar Health Update: ಗಾಯಕಿ ಲತಾ ಮಂಗೇಶ್ಕರ್ ಅವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಪ್ರಸ್ತುತ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮುಂಬೈ: ಖ್ಯಾತ ಗಾಯಕಿ ಲತಾ ಮಂಗೇಶ್ಕರ್ (Lata Mangeshkar) ಅವರಿಗೆ ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರೆಸಲಾಗುತ್ತಿದೆ. ಅವರ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡಿದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ.ಪ್ರತೀತ್ ಸಮ್ದಾನಿ ಮಾಹಿತಿ ನೀಡಿದ್ದಾರೆ. ಈ ಕುರಿತು ಎಎನ್ಐ ಶನಿವಾರ ಮಾಹಿತಿ ನೀಡಿದೆ. ಈ ತಿಂಗಳ ಆರಂಭದಲ್ಲಿ ಲತಾ ಮಂಗೇಶ್ಕರ್ ಅವರಿಗೆ ಕೊರೊನಾ (Covid) ಪಾಸಿಟಿವ್ ಆಗಿತ್ತು. ನಂತರ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿತ್ತು. ಇತ್ತೀಚೆಗೆ ಲತಾ ಅವರ ಆರೋಗ್ಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹಂಚಿಕೆಯಾಗಿತ್ತು. ಅದನ್ನು ಉಲ್ಲೇಖಿಸಿ ಲತಾ ಮಂಗೇಶ್ಕರ್ ವಕ್ತಾರರು ಗಾಯಕಿಯ ಖಾತೆಯಿಂದ ಟ್ವೀಟ್ ಮಾಡಿ, ‘92 ವರ್ಷದ ಲತಾ ಅವರು ಐಸಿಯುವಿನಲ್ಲಿದ್ದಾರೆ. ಚಿಕಿತ್ಸೆ ಮುಂದುವರೆಯುತ್ತಿದೆ. ಯಾರೂ ತಪ್ಪು ಮಾಹಿತಿ ಅಥವಾ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ’’ ಎಂದು ತಿಳಿಸಿದ್ದರು. ಹಾಗೆಯೇ ಗಾಯಕಿ ಹಾಗೂ ಅವರ ಕುಟುಂಬದ ಖಾಸಗಿತನಕ್ಕೆ ಭಂಗ ತರದಂತೆ ವಕ್ತಾರರು ಕೋರಿಕೊಂಡಿದ್ದರು. ಇದೀಗ ಲತಾ ಅವರ ಆರೋಗ್ಯದಲ್ಲಿ ತುಸು ಚೇತರಿಕೆಯಾಗಿದ್ದು, ಅಭಿಮಾನಿಗಳಿಗೆ ಸಮಾಧಾನ ತಂದಿದೆ.
Singer Lata Mangeshkar is still in the ICU ward but there has been a slight improvement in her health today: Dr Pratit Samdani, who’s treating her at Mumbai’s Breach Candy Hospital
(file photo) pic.twitter.com/U5PkbWGp3T
— ANI (@ANI) January 22, 2022
ಇದನ್ನೂ ಓದಿ:
Lata Mangeshkar: ಲತಾ ಮಂಗೇಶ್ಕರ್ ಆರೋಗ್ಯದ ಕುರಿತು ಮಾಹಿತಿ ನೀಡಿದ ವಕ್ತಾರರು; ವದಂತಿಗಳಿಗೆ ಕಿವಿಗೊಡದಂತೆ ಮನವಿ
‘ಯಾವ ಉಡುಪು ಧರಿಸಬೇಕು ಎಂಬ ಅರಿವಿರದ ದಡ್ಡಿ ನಾನಲ್ಲ’; ಟ್ರೋಲಿಗರಿಗೆ ಖಾರವಾಗಿ ಪ್ರತಿಕ್ರಿಯಿಸಿದ ಮಲೈಕಾ