AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs Uganda U19: ಧವನ್ ದಾಖಲೆ ಪುಡಿ ಮಾಡಿದ ಅಂಡರ್-19 ಆಟಗಾರ: ಕ್ವಾರ್ಟರ್ ಫೈನಲ್​ಗೆ ಭಾರತ

India vs Uganda U19: ಧವನ್ ದಾಖಲೆ ಪುಡಿ ಮಾಡಿದ ಅಂಡರ್-19 ಆಟಗಾರ: ಕ್ವಾರ್ಟರ್ ಫೈನಲ್​ಗೆ ಭಾರತ

TV9 Web
| Edited By: |

Updated on: Jan 23, 2022 | 11:10 AM

Share

ಐಸಿಸಿ ಅಂಡರ್ – 19 ವಿಶ್ವಕಪ್​ನ ಉಗಾಂಡ ವಿರುದ್ಧದ ಪಂದ್ಯದಲ್ಲಿ ಭಾರತ ಅಂಡರ್-19 ತಂಡ ಬರೋಬ್ಬರಿ 326 ರನ್​ಗಳ ದಾಖಲೆಯ ಗೆಲುವು ಕಂಡಿತು.

ವೆಸ್ಟ್​ ಇಂಡೀಸ್​ನಲ್ಲಿ ನಡೆಯುತ್ತಿರುವ ಐಸಿಸಿ ಅಂಡರ್ – 19 ವಿಶ್ವಕಪ್​ನಲ್ಲಿ (ICC U19 World cup) ಭಾರತದ ಕಿರಿಯ ಆಟಗಾರರು ಧೂಳೆಬ್ಬಿಸುತ್ತಿದ್ದಾರೆ. ಶನಿವಾರ ಬ್ರಿಯಾನ್ ಲಾರ ಸ್ಟೇಡಿಯಂನಲ್ಲಿ ನಡೆದ ಉಗಾಂಡ ವಿರುದ್ಧದ ಪಂದ್ಯದಲ್ಲಿ ಭಾರತ ಅಂಡರ್-19 ತಂಡ (India U19 vs Uganda U19) ಬರೋಬ್ಬರಿ 326 ರನ್​ಗಳ ದಾಖಲೆಯ ಗೆಲುವು ಕಂಡಿತು. ರಘುವಂಶಿ 120 ಎಸೆತಗಳಲ್ಲಿ 22 ಫೋರ್ ಹಾಗೂ 4 ಸಿಕ್ಸರ್‌ ಸಹಿತ 144 ರನ್‌ ಗಳಿಸಿದರೆ, ರಾಜ್‌ (Raj Bawa) 108 ಎಸೆತಗಳಲ್ಲಿ 14 ಬೌಂಡರಿ ಮತ್ತು 8 ಸಿಕ್ಸರ್‌ ಒಳಗೊಂಡ ಅಜೇಯ 162 ರನ್‌ ಚಚ್ಚಿದರು. ಈ ಜೋಡಿ ಮೂರನೇ ವಿಕೆಟ್‌ ಜೊತೆಯಾಟದಲ್ಲಿ 206 ರನ್‌ ಕಲೆಹಾಕಿತು. ಇದರ ನೆರವಿನಿಂದ ಭಾರತ ತಂಡ 19 ವರ್ಷದೊಳಗಿನವರ ಕ್ರಿಕೆಟ್‌ನಲ್ಲಿ ಎರಡನೇ ಬಾರಿಗೆ 400ರ ಗಡಿ ದಾಟಿತು. ಭಾರತ ನೀಡಿದ್ದ 406 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಉಗಾಂಡ ಈ ಮೊತ್ತದ ಹತ್ತಿರ ಕೂಡ ಸಮೀಪಿಸಲಿಲ್ಲ. ತಂಡದ ಮೊತ್ತ 100ರ ಗಡಿ ಕೂಡ ದಾಟಲಿಲ್ಲ. ಭಾರತೀಯ ಬೌಲಿಂಗ್ ದಾಳಿಗೆ ನೆಲಕಚ್ಚಿದ ಉಗಾಂಡ ಬ್ಯಾಟರ್​ಗಳು 19.4 ಓವರ್​ನಲ್ಲಿ ಕೇವಲ 79 ರನ್​ಗೆ ಆಲೌಟ್ ಆಯಿತು. ಈ ಪಂದ್ಯದಲ್ಲಿ ಅಜೇಯ 162 ರನ್‌ ಕಲೆಹಾಕಿದ ರಾಜ್‌ ಬಾವ, 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌ ಟೂರ್ನಿಯ ಇನಿಂಗ್ಸ್‌ವೊಂದರಲ್ಲಿ ಭಾರತ ಪರ ವೈಯಕ್ತಿಕ ಗರಿಷ್ಠ ರನ್‌ ಗಳಿಸಿದ ಸಾಧನೆ ಮಾಡಿದರು. ಇದಕ್ಕೂ ಮೊದಲು ಈ ದಾಖಲೆ ಶಿಖರ್‌ ಧವನ್‌ ಅವರ ಹೆಸರಿನಲ್ಲಿತ್ತು. ಧವನ್‌, 2004ರಲ್ಲಿ ಕೀನ್ಯಾ ವಿರುದ್ಧದ ಪಂದ್ಯದಲ್ಲಿ 155 ರನ್‌ ಬಾರಿಸಿದ್ದರು. ಟೂರ್ನಿಯಲ್ಲಿ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ, ಆಡಿರುವ ಮೂರೂ ಪಂದ್ಯಗಳಲ್ಲಿ ಜಯದ ನಗೆ ಬೀರಿ ಟೇಬಲ್‌ ಟಾಪರ್‌ ಆಗಿದೆ. ಭಾರತ ಬಾಂಗ್ಲಾ ವಿರುದ್ಧ ಜನವರಿ 29ರಂದು ನಡೆಯುವ ಕ್ವಾರ್ಟರ್‌ಫೈನಲ್‌ ಸೆಣಸಾಟದಲ್ಲಿ ಮುಖಾಮುಖಿಯಾಗಲಿವೆ.

India vs South Africa: 3ನೇ ಏಕದಿನ ಪಂದ್ಯ ಎಲ್ಲಿ?, ಎಷ್ಟು ಗಂಟೆಗೆ ಆರಂಭ?, ಯಾವುದರಲ್ಲಿ ನೇರಪ್ರಸಾರ?

South Africa vs India: 3ನೇ ಏಕದಿನಕ್ಕೆ ಮೂರು ಬದಲಾವಣೆ: ಭಾರತದ ಸಂಭಾವ್ಯ ಪ್ಲೇಯಿಂಗ್ XI ಇಲ್ಲಿದೆ