AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs South Africa: 3ನೇ ಏಕದಿನ ಪಂದ್ಯ ಎಲ್ಲಿ?, ಎಷ್ಟು ಗಂಟೆಗೆ ಆರಂಭ?, ಯಾವುದರಲ್ಲಿ ನೇರಪ್ರಸಾರ?

ಇಂದು ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ. ಹಾಗಾದ್ರೆ ಇಂಡೋ-ಆಫ್ರಿಕಾ ಮೂರನೇ ಏಕದಿನ ಪಂದ್ಯ ಎಷ್ಟು ಗಂಟೆಗೆ?, ಯಾವುದರಲ್ಲಿ ನೇರಪ್ರಸಾರ?, ಭಾರತ ತಂಡ ಹೇಗಿದೆ? ಎಂಬ ಬಗೆಗಿನ ಮಾಹಿತಿಯನ್ನು ಇಲ್ಲಿದೆ.

India vs South Africa: 3ನೇ ಏಕದಿನ ಪಂದ್ಯ ಎಲ್ಲಿ?, ಎಷ್ಟು ಗಂಟೆಗೆ ಆರಂಭ?, ಯಾವುದರಲ್ಲಿ ನೇರಪ್ರಸಾರ?
SA vs IND 3rd ODI
TV9 Web
| Edited By: |

Updated on: Jan 23, 2022 | 10:31 AM

Share

ದಕ್ಷಿಣ ಆಫ್ರಿಕಾ (South Africa) ವಿರುದ್ಧದ ಮೊದಲ ಎರಡೂ ಏಕದಿನ ಪಂದ್ಯಗಳಲ್ಲಿ ಸೋಲು ಕಂಡ ಭಾರತ (India) ಸರಣಿಯನ್ನು ಕಳೆದುಕೊಂಡಾಗಿದೆ. ಉಳಿದಿರುವುದು ಒಂದು ಪಂದ್ಯ. ಅದು ಇಂದು ಆಯೋಜಿಸಲಾಗಿದೆ. ದಕ್ಷಿಣ ಆಫ್ರಿಕಾ ಕ್ಲೀನ್​ಸ್ವೀಪ್ ಮಾಡುವತ್ತ ಚಿತ್ತ ನೆಟ್ಟದ್ದರೆ ಇತ್ತ ಟೀಮ್ ಇಂಡಿಯಾ ವೈಟ್​ವಾಷ್​ನಿಂದ ಪಾರಾಗಿ ಕೊನೇ ಪಂದ್ಯವನ್ನಾದರು ಗೆದ್ದು ಮಾನ ಉಳಿಸಿಕೊಳ್ಳುವ ಪ್ಲಾನ್​ನಲ್ಲಿದೆ. ಭಾರತದ ಬ್ಯಾಟಿಂಗ್ – ಬೌಲಿಂಗ್ ಎರಡೂ ವಿಭಾಗಗಳಿಂದ ನಿರೀಕ್ಷೆಗೆ ತಕ್ಕ ಪ್ರದರ್ಶನ ಬರುತ್ತಿಲ್ಲ. ಬ್ಯಾಟರ್​ಗಳು ಮಧ್ಯಮ ಕ್ರಮಾಂಕದಲ್ಲಿ ವೈಫಲ್ಯ ಅನುಭವಿಸುತ್ತಿದ್ದರೆ, ಇತ್ತ ಬೌಲರ್​ಗಳು ಮಧ್ಯಮ ಓವರ್​ಗಳಲ್ಲಿ ವಿಕೆಟ್ ಕೀಳಲು ಪರದಾಡುತ್ತಿದ್ದಾರೆ. ಈ ಹಿಂದಿನ ಎರಡೂ ಪಂದ್ಯ ಸೋಲಲು ಇದೇ ಕಾರಣ. ಆಫ್ರಿಕಾ ಬ್ಯಾಟರ್​ಗಳನ್ನು ಪೆವಿಲಿಯನ್​ಗೆ ಅಟ್ಟಲು ಹರಸಾಹಸ ನಡೆಸಿದರೂ ಅದು ಸಾಧ್ಯವಾಗಲಿಲ್ಲ. ಇಂದು ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ. ಹಾಗಾದ್ರೆ ಇಂಡೋ-ಆಫ್ರಿಕಾ ಮೂರನೇ ಏಕದಿನ ಪಂದ್ಯ ಎಷ್ಟು ಗಂಟೆಗೆ?, ಯಾವುದರಲ್ಲಿ ನೇರಪ್ರಸಾರ?, ಭಾರತ ತಂಡ ಹೇಗಿದೆ? ಎಂಬ ಬಗೆಗಿನ ಮಾಹಿತಿಯನ್ನು ಇಲ್ಲಿದೆ.

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರನೇ ಏಕದಿನ ಪಂದ್ಯ ಜನವರಿ 23 ರಂದು ನಡೆಯಲಿದೆ.

ಈ ಪಂದ್ಯ ಕೇಪ್​ಟೌನ್​ನ ನ್ಯೂಲೆಂಡ್ಸ್ ಮೈದಾನದಲ್ಲಿ ಆಯೋಜಿಸಲಾಗಿದೆ.

ಭಾರತೀಯ ಕಾಲಮಾನದ ಪ್ರಕಾರ ಈ ಪಂದ್ಯ ಮಧ್ಯಾಹ್ನ 2 ಗಂಟೆಗೆ ಶುರುವಾಗಲಿದೆ.

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಏಕದಿನ ಪಂದ್ಯ ಸ್ಟಾರ್ ಸ್ಫೋರ್ಟ್ಸ್​ ನೆಟ್​ವರ್ಕ್​​ನಲ್ಲಿ ನೇರಪ್ರಸಾರ ಕಾಣಲಿದೆ. ಡಿಸ್ನಿ+ ಹಾಟ್​ಸ್ಟಾರ್​ನಲ್ಲೂ ಲೈವ್ ಸ್ಟ್ರೀಮ್ ಆಗಲಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್‌ ಸರಣಿಯನ್ನು 1-2 ಅಂತರದಲ್ಲಿ ಸೋಲು ಅನುಭವಿಸಿದ್ದ ಭಾರತ ತಂಡ ಅಷ್ಟೇ ಪಂದ್ಯಗಳ ಏಕದಿನ ಸರಣಿಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಯೋಜನೆ ರೂಪಿಸಿಕೊಂಡಿತ್ತು. ಆದರೆ ಮೊದಲನೇ ಪಂದ್ಯದಲ್ಲಿ 31 ರನ್‌ನಿಂದ ಸೋಲು ಅನುಭವಿಸಿದ್ದ ಟೀಮ್‌ ಇಂಡಿಯಾ, ಎರಡನೇ ಓಡಿಐನಲ್ಲಿಯೂ 7 ವಿಕೆಟ್‌ಗಳಿಂದ ಸೋಲಿಗೆ ಶರಣಾಗಿತ್ತು. ಆ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಏಕದಿನ ಸರಣಿಯನ್ನು ಭಾರತ ಕಳೆದುಕೊಂಡಿದೆ.

ಟೀಮ್ ಇಂಡಿಯಾ ಮೂರನೇ ಏಕದಿನ ಪಂದ್ಯಕ್ಕೆ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಬದಲಾವಣೆ ಮಾಡುವುದು ಬಹುತೇಕ ಖಚಿತವಾಗಿದೆ. ಭಾರತ ಪರ ಓಪನರ್​ಗಳಾಗಿ ಶಿಖರ್ ಧವನ್ ಜೊತೆ ಕೆಎಲ್ ರಾಹುಲ್ ಕಣಕ್ಕಿಳಿಯುವುದು ಅನುಮಾನ. ಯಾಕಂದ್ರೆ ರಾಹುಲ್ ಏಕದಿನ ಕ್ರಿಕೆಟ್​ನ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಯಶಸ್ಸು ಸಾಧಿಸಿದ್ದಾರೆ. ಹೀಗಾಗಿ ಇವರು 5ನೇ ಸ್ಥಾನದಲ್ಲಿ ಆಡುವ ಸಾಧ್ಯತೆ ಇದೆ. ಇತ್ತ ಅವಕಾಶಕ್ಕಾಗಿ ಕಾಯುತ್ತಿರುವ ರುತುರಾಜ್ ಗಾಯಕ್ವಾಡ್​ಗೆ ಸ್ಥಾನ ನೀಡಿ ಧವನ್ ಜೊತೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ.

ಸ್ಪಿನ್ನರ್​ಗಳು ಕೂಡ ಈ ಪಿಚ್​ನಲ್ಲಿ ವಿಕೆಟ್ ಪಡೆಯಲು ಸಾಧ್ಯವಾಗುತ್ತಿಲ್ಲ. ಪ್ರಮುಖವಾಗಿ ಆರ್. ಅಶ್ವಿನ್ ಕೈಚಳಕ ನಡೆಯುತ್ತಿಲ್ಲ. ಹೀಗಾಗಿ ಇವರ ಜಾಗದಲ್ಲಿ ಆಲ್ರೌಂಡರ್ ಜಯಂತ್ ಯಾದವ್ ಅವರನ್ನು ನಿರೀಕ್ಷಿಸಲಾಗಿದೆ. ಯುಜ್ವೇಂದ್ರ ಚಹಾಲ್​ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು. ಶಾರ್ದೂಲ್ ಥಾಕೂರ್ ಬೌಲಿಂಗ್‌ನಲ್ಲಿ ದುಬಾರಿಯಾಗಿದ್ದರೂ ಬ್ಯಾಟಿಂಗ್​ನಲ್ಲಿ ನೆರವು ನೀಡುತ್ತಿದ್ದಾರೆ. ಇನ್ನು ಭುವನೇಶ್ವರ್ ಕುಮಾರ್​​ ಸ್ಥಾನ ಕಳೆದುಕೊಳ್ಳುವುದು ಖಚಿತ. ಇವರ ಜಾಗಕ್ಕೆ ದೀಪಕ್ ಚಹರ್ ಅಥವಾ ಮೊಹಮ್ಮದ್ ಸಿರಾಜ್ ಕಣಕ್ಕಿಳಿಯುವ ಸಾಧ್ಯತೆ ಇದೆ.

South Africa vs India: 3ನೇ ಏಕದಿನಕ್ಕೆ ಮೂರು ಬದಲಾವಣೆ: ಭಾರತದ ಸಂಭಾವ್ಯ ಪ್ಲೇಯಿಂಗ್ XI ಇಲ್ಲಿದೆ

U19 World cup: ದಾಖಲೆ ಬರೆದ ರಾಜ್ ಬಾವಾ: ಭಾರತಕ್ಕೆ 326 ರನ್​ಗಳ ಗೆಲುವು, ಕಲೆಹಾಕಿದ ರನ್​ ಎಷ್ಟು ಗೊತ್ತೇ?