ಆಹಾರವನ್ನು ಅರಸುತ್ತ ಹಾವುಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುತ್ತಿರುತ್ತವೆ. ಹಾವುಗಳು ಅವುಗಳ ಪಾಡಿಗೆ ಇರುತ್ತವೆ. ಸ್ವಲ್ಪ ಏನಾದರೂ ತೊಂದರೆ ನೀಡಿದರೆ ಮಾತ್ರ ತನ್ನನ್ನು ರಕ್ಷಿಸಿಕೊಳ್ಳಲು ಎದುರಿಗಿದ್ದವರಿಗೆ ಕಚ್ಚುತ್ತದೆ. ಅದರಲ್ಲೂ ಕಾಳಿಂಗ ಸರ್ಪ ತುಂಬಾ ನಾಚಿಕೆ ಹೊಂದಿರುವ ಹಾವು. ಈ ಹಾವು ಸಾಮಾನ್ಯವಾಗಿ ಮಲೆನಾಡಿನಲ್ಲಿ ಹೆಚ್ಚು ಇರುತ್ತವೆ. ಇಂದು (ಜ.23) ಶೃಂಗೇರಿಯ ಶಾರದಾಂಬೆ ಸನ್ನಿಧಿಗೆ ಕಾಳಿಂಗ ಸರ್ಪವೊಂದು ಬಂದಿತ್ತು. ಸುಮಾರು 10 ಅಡಿ ಕಾಳಿಂಗ ಸರ್ಪವನ್ನು ಉರಗ ತಜ್ಞರು ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ. ದೇವಾಲಯದ ಕಾಂಪೌಂಡ್ ಹೊರಗೆ ಸ್ವಲ್ಪ ಹೊತ್ತು ಹಾವು ಇತ್ತು. ಜನರನ್ನು ಕಂಡು ಭಯಗೊಂಡಿದ್ದ ಕಾಳಿಂಗವನ್ನು ಉರಗ ತಜ್ಞರು ರಕ್ಷಿಸಿದ್ದಾರೆ. ದೊಡ್ಡ ಗಾತ್ರದ ಹಾವನ್ನು ಕಂಡ ದೇವಸ್ಥಾನದ ಸಿಬ್ಬಂದಿ ಭಯಗೊಂಡಿದ್ದರು. ಹಾವು ದೇವಾಲಯದ ಬಳಿ ಕಾಣಿಸುತ್ತಿದ್ದಂತೆ ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ
ಆರೂವರೆ ತಿಂಗಳಿಗೆ ಜನಿಸಿತಾ ಪ್ರಿಯಾಂಕಾ ಚೋಪ್ರಾ ಮಗು? ಹಲವು ಸತ್ಯಗಳನ್ನು ಮುಚ್ಚಿಟ್ಟ ನಟಿ