ಆರೂವರೆ ತಿಂಗಳಿಗೆ ಜನಿಸಿತಾ ಪ್ರಿಯಾಂಕಾ ಚೋಪ್ರಾ ಮಗು? ಹಲವು ಸತ್ಯಗಳನ್ನು ಮುಚ್ಚಿಟ್ಟ ನಟಿ

ಆರೂವರೆ ತಿಂಗಳಿಗೆ ಜನಿಸಿತಾ ಪ್ರಿಯಾಂಕಾ ಚೋಪ್ರಾ ಮಗು? ಹಲವು ಸತ್ಯಗಳನ್ನು ಮುಚ್ಚಿಟ್ಟ ನಟಿ
ಪ್ರಿಯಾಂಕಾ ಚೋಪ್ರಾ

Priyanka Chopra Baby: ಲಾಸ್​ ಏಂಜಲಿಸ್​ ಹೊರವಲಯದಲ್ಲಿರುವ ಆಸ್ಪತ್ರೆಯೊಂದರಲ್ಲಿ ಈ ಮಗು ಜನಿಸಿದೆ. ಆರೂವರೆ ತಿಂಗಳಿಗೆ ಜನಿಸಿದ ಮಗು ಆದ್ದರಿಂದ ಈಗಲೇ ಮನೆಗೆ ಕರೆದುಕೊಂಡು ಬರಲು ಸಾಧ್ಯವಿಲ್ಲ.

TV9kannada Web Team

| Edited By: Madan Kumar

Jan 23, 2022 | 1:26 PM

ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ತಾಯಿ ಆಗಿರುವ ವಿಚಾರದ ಬಗ್ಗೆ ಹಲವು ಚರ್ಚೆ ನಡೆಯುತ್ತಿದೆ. ಬಾಡಿಗೆ ತಾಯಿ ಮೂಲಕ ಅವರು ಮಗು ಪಡೆದಿರುವುದಕ್ಕೆ ಕೆಲವರು ಟೀಕೆ ವ್ಯಕ್ತಪಡಿಸಿದ್ದಾರೆ. ಜ.21ರಂದು ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಸ್​ (Nick Jonas) ದಂಪತಿ ತಮಗೆ ಮೊದಲ ಮಗು ಜನಿಸಿರುವ ಬಗ್ಗೆ ಬ್ರೇಕಿಂಗ್​ ನ್ಯೂಸ್​ ನೀಡಿದರು. ತಾವು ಮಗು ಪಡೆಯುತ್ತಿರುವ ಬಗ್ಗೆ ಕಿಂಚಿತ್ತೂ ಗುಟ್ಟು ಬಿಟ್ಟುಕೊಡದ ಈ ದಂಪತಿ ಏಕಾಏಕಿ ಖುಷಿಯ ಸಮಾಚಾರ ತಿಳಿಸಿದ್ದರಿಂದ ಅಭಿಮಾನಿಗಳಿಗೆ ಅಚ್ಚರಿ ಆಯಿತು. ತಂದೆ-ತಾಯಿ ಆಗಿರುವ ನಿಕ್​ ಜೋನಸ್​-ಪ್ರಿಯಾಂಕಾ ಚೋಪ್ರಾ ಅವರಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ. ಈ ನಡುವೆ ಅನೇಕ ಗಾಸಿಪ್​ಗಳು ಹರಿದಾಡುತ್ತಿವೆ. ಮಗುವಿನ (Priyanka Chopra Baby) ಜನನದ ಕುರಿತು ಅನೇಕ ವಿವರಗಳನ್ನು ಈ ದಂಪತಿ ಮುಚ್ಚಿಟ್ಟಿದ್ದಾರೆ. ಜನಿಸಿರುವ ಮಗು ಗಂಡು ಅಥವಾ ಹೆಣ್ಣು ಎಂಬುದನ್ನು ಸಹ ತಿಳಿಸಿಲ್ಲ. ಅಲ್ಲದೇ ಮಗುವಿನ ಆರೋಗ್ಯದ ಕುರಿತು ಈಗ ಕೆಲವು ಅನುಮಾನ ಮೂಡತೊಡಗಿದೆ. ಕೆಲವು ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿವೆ. ಅವಧಿಗಿಂತಲೂ ಮುನ್ನವೇ ಈ ಮಗು ಜನಿಸಿದೆ ಎಂದು ಹೇಳಲಾಗುತ್ತಿದೆ.

9 ತಿಂಗಳಿಗೆ ಮಗು ಜನಿಸುವುದು ಸಹಜ. ಅಪರೂಪದ ಪ್ರಕರಣಗಳಲ್ಲಿ ಈ ಅವಧಿಗೂ ಮುನ್ನವೇ ಮಗು ಜನಿಸುತ್ತವೆ. ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಸ್​ ಮಗುವಿನ ವಿಚಾರದಲ್ಲೂ ಹಾಗೆಯೇ ಆಗಿದೆ. ಆರೂವರೆ ತಿಂಗಳಿಗೆ ಈ ಮಗು ಜನಿಸಿದೆ ಎಂದು ‘ಡೈಲಿ ಮೇಲ್​’ ವರದಿ ಮಾಡಿದೆ. ಈ ಕುರಿತು ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಕ್​ ಇನ್ನಷ್ಟೇ ಮೌನ ಮುರಿಯಬೇಕಿದೆ.

ಸ್ವತಃ ಗರ್ಭ ಧರಿಸಲು ಪ್ರಿಯಾಂಕಾ ಚೋಪ್ರಾ ಅವರಿಗೆ ದೈಹಿಕವಾಗಿ ಯಾವುದೇ ಸಮಸ್ಯೆಗಳು ಇರಲಿಲ್ಲ. ಆದರೆ ನಿಕ್​ ಜೋನಸ್​ ಮತ್ತು ಪ್ರಿಯಾಂಕಾ ಅವರು ಹಲವು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿರುವುದರಿಂದ ಬಾಡಿಗೆ ತಾಯಿ ಮೂಲಕವೇ ಮಗು ಪಡೆಯುವುದು ಸೂಕ್ತ ಅಂತ ನಿರ್ಧರಿಸಿದರು. ನಂತರ ದಕ್ಷಿಣ ಕ್ಯಾಲಿಫೋರ್ನಿಯಾದ ಮಹಿಳೆಯೊಬ್ಬರನ್ನು ಸಂಪರ್ಕಿಸಿದರು. ಆ ಮಹಿಳೆಗೆ ಇದು 5ನೇ ಹೆರಿಗೆ ಎಂದು ಹೇಳಲಾಗಿದೆ.

ಬಾಡಿಗೆ ತಾಯಿಯು ಏಪ್ರಿಲ್​ ತಿಂಗಳಲ್ಲಿ ಮಗುವಿಗೆ ಜನ್ಮ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು. ಅದಕ್ಕಾಗಿ ಪ್ರಿಯಾಂಕಾ ಮತ್ತು ನಿಕ್​ ಆ ತಿಂಗಳಲ್ಲಿ ಯಾವುದೇ ಕೆಲಸಗಳನ್ನೂ ಒಪ್ಪಿಕೊಳ್ಳದೇ ಬಿಡುವು ಮಾಡಿಕೊಳ್ಳಲು ಸಿದ್ಧರಾಗಿದ್ದರು. ಆದರೆ ಮೂರು ತಿಂಗಳು ಮುಂಚಿತವಾಗಿ ಈ ಮಗು ಜನಿಸಿದೆ. ಇದೊಂದು ಪ್ರೀ-ಮೆಚ್ಯೂರ್​ ಮಗುವಾಗಿದ್ದು, ಅದರ ಆರೋಗ್ಯದ ಬಗ್ಗೆ ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಸ್​ ದಂಪತಿಗೆ ಚಿಂತೆ ಶುರುವಾಗಿದೆ ಎಂದು ವರದಿ ಆಗಿದೆ.

ಲಾಸ್​ ಏಂಜಲಿಸ್​ ಹೊರವಲಯದಲ್ಲಿರುವ ಆಸ್ಪತ್ರೆಯೊಂದರಲ್ಲಿ ಈ ಮಗು ಜನಿಸಿದೆ. ಆರೂವರೆ ತಿಂಗಳಿಗೆ ಜನಿಸಿದ ಮಗು ಆದ್ದರಿಂದ ಈಗಲೇ ಮನೆಗೆ ಕರೆದುಕೊಂಡು ಬರಲು ಸಾಧ್ಯವಿಲ್ಲ. ಈ ಮಗುವಿಗೆ ಆಸ್ಪತ್ರೆಯಲ್ಲಿ ವಿಶೇಷ ಆರೈಕೆ ಮಾಡಿ, ನಂತರದ ದಿನಗಳಲ್ಲಿ ಮನೆಗೆ ಕರೆದುಕೊಂಡು ಬರಲು ದಂಪತಿ ನಿರ್ಧರಿಸಿದ್ದಾರೆ. ಈ ಎಲ್ಲ ವಿಚಾರಗಳನ್ನು ಅವರು ಎಲ್ಲಿಯೂ ಹೇಳಿಕೊಂಡಿಲ್ಲ. ಎಲ್ಲವನ್ನೂ ಆದಷ್ಟು ಗೌಪ್ಯವಾಗಿಡಲು ಪ್ರಯತ್ನಿಸಿದ್ದಾರೆ.

ಮಗು ಜನಿಸಿದೆ ಎಂಬ ವಿಷಯವನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡ ಪ್ರಿಯಾಂಕಾ-ನಿಕ್​ ದಂಪತಿಯು ಮಗುವಿನ ಫೋಟೋ ತೋರಿಸಿಲ್ಲ. ‘ಬಾಡಿಗೆ ತಾಯಿ ಮೂಲಕ ನಾವು ಮಗು ಪಡೆದಿದ್ದೇವೆ ಎಂಬುದನ್ನು ತಿಳಿಸಲು ತುಂಬ ಖುಷಿ ಆಗುತ್ತಿದೆ. ಕುಟುಂಬದ ಕಡೆಗೆ ಹೆಚ್ಚು ಗಮನ ಹರಿಸಬೇಕಾಗಿರುವ ಈ ವಿಶೇಷ ಸಂದರ್ಭದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಿ ಅಂತ ಕೇಳಿಕೊಳ್ಳುತ್ತೇನೆ’ ಎಂದು ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಸ್ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ:

ಕಡಲ ಮಧ್ಯದಲ್ಲಿ ಪ್ರಿಯಾಂಕಾ ಚೋಪ್ರಾ; ನಿಕ್ ಜೋನಸ್ ಹೊಸ ವರ್ಷದ ಸಂಭ್ರಮಾಚರಣೆ; ಫೋಟೋ ವೈರಲ್

ಬಾಡಿಗೆ ತಾಯಿಯಿಂದ ಮಕ್ಕಳನ್ನು ಪಡೆಯುವ ಬದಲು ದತ್ತು ತೆಗೆದುಕೊಳ್ಳಿ: ವಿವಾದಕ್ಕೆ ಕಾರಣವಾದ ಬಾಂಗ್ಲಾ ಲೇಖಕಿ ತಸ್ಲೀಮಾ ಟ್ವೀಟ್​

Follow us on

Related Stories

Most Read Stories

Click on your DTH Provider to Add TV9 Kannada