ಆಸ್ಕರ್​ ರೇಸ್​ನಲ್ಲಿ ‘ಜೈ ಭೀಮ್​’ ಮತ್ತು ‘ಮರಕ್ಕರ್’​; ಭಾರತೀಯ ಚಿತ್ರಕ್ಕೆ ಈ ಬಾರಿಯಾದರೂ ಒಲಿಯುತ್ತಾ ಪ್ರಶಸ್ತಿ?

ಆಸ್ಕರ್​​ ಅವಾರ್ಡ್ಸ್​​ ನೀಡುವ ಅಕಾಡೆಮಿ ಆಫ್​ ಮೋಷನ್​ ಪಿಕ್ಚರ್ಸ್​ ಆರ್ಟ್ಸ್​ ಆ್ಯಂಡ್​ ಸೈನ್ಸ್​ ಈ ಬಾರಿ ಆಸ್ಕರ್​ ರೇಸ್​ನಲ್ಲಿರುವ 276 ಸಿನಿಮಾಗಳ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ತಮಿಳಿನ ‘ಜೈ ಭೀಮ್’ ಹಾಗೂ ಮಲಯಾಳಂನ ‘ಮರಕ್ಕರ್​’ ಸ್ಥಾನ ಪಡೆದುಕೊಂಡಿದೆ.

ಆಸ್ಕರ್​ ರೇಸ್​ನಲ್ಲಿ ‘ಜೈ ಭೀಮ್​’ ಮತ್ತು ‘ಮರಕ್ಕರ್’​; ಭಾರತೀಯ ಚಿತ್ರಕ್ಕೆ ಈ ಬಾರಿಯಾದರೂ ಒಲಿಯುತ್ತಾ ಪ್ರಶಸ್ತಿ?
ಜೈಭೀಮ್​-ಮೋಹನ್​ ಲಾಲ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 22, 2022 | 2:49 PM

ಸೂರ್ಯ ನಟನೆಯ ‘ಜೈ ಭೀಮ್​’ (Jai Bhim) ಚಿತ್ರ ಒಳ್ಳೆಯ ಹೆಸರು ಮಾಡಿದೆ. ಅಮೇಜಾನ್​ ಪ್ರೈಮ್​ ವಿಡಿಯೋದಲ್ಲಿ (Amazon Prime Video) ರಿಲೀಸ್ ಆದ ಈ ಚಿತ್ರಕ್ಕೆ ಎಲ್ಲ ಕಡೆಗಳಲ್ಲಿ ಮೆಚ್ಚುಗೆಗಳು ಬಂದವು. ಭಾರತೀಯ ಚಿತ್ರರಂಗದಲ್ಲಿ 2021ರಲ್ಲಿ ರಿಲೀಸ್​ ಆದ ಅತ್ಯುತ್ತಮ ಸಿನಿಮಾಗಳಲ್ಲಿ ಇದು ಕೂಡ ಒಂದು. ಇನ್ನು, ಮೋಹನ್​ಲಾಲ್​ ಅಭಿನಯದ ‘ಮರಕ್ಕರ್​’ ಸಿನಿಮಾ ಕಳೆದ ವರ್ಷ ತೆರೆಗೆ ಬಂದು ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿತ್ತು. ಇವೆರಡೂ ಸಿನಿಮಾಗಳು ಈಗ 2022ರ ಆಸ್ಕರ್​ (Oscar Awards 2022) ರೇಸ್​ನಲ್ಲಿವೆ. ಈ ಬಾರಿಯಾದರೂ ಭಾರತೀಯ ಚಿತ್ರಕ್ಕೆ ಆಸ್ಕರ್​ ಪ್ರಶಸ್ತಿ ಲಭಿಸಲಿ ಎಂಬುದು ಎಲ್ಲರ ಕೋರಿಕೆ.

ಆಸ್ಕರ್​​ ಅವಾರ್ಡ್ಸ್​​ ನೀಡುವ ಅಕಾಡೆಮಿ ಆಫ್​ ಮೋಷನ್​ ಪಿಕ್ಚರ್ಸ್​ ಆರ್ಟ್ಸ್​ ಆ್ಯಂಡ್​ ಸೈನ್ಸ್​ ಈ ಬಾರಿ ಆಸ್ಕರ್​ ರೇಸ್​ನಲ್ಲಿರುವ 276 ಸಿನಿಮಾಗಳ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ತಮಿಳಿನ ‘ಜೈ ಭೀಮ್’ ಹಾಗೂ ಮಲಯಾಳಂನ ‘ಮರಕ್ಕರ್​’ ಸ್ಥಾನ ಪಡೆದುಕೊಂಡಿದೆ. ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿ 94ನೇ ಅಕಾಡೆಮಿ ಅವಾರ್ಡ್ಸ್​ ಕಾರ್ಯಕ್ರಮ ಮಾರ್ಚ್​ 27ರಂದು ಲಾಸ್​ ಏಂಜಲೀಸ್​ನಲ್ಲಿ ನಡೆಯುತ್ತಿದೆ.

‘ಜೈ ಭೀಮ್​’ ಆಸ್ಕರ್​ ರೇಸ್​ನಲ್ಲಿ ಇರುವುದಕ್ಕೆ ಚಿತ್ರತಂಡ ಸಂತಸ ವ್ಯಕ್ತಪಡಿಸಿದೆ. ಈ ಬಗ್ಗೆ ಟ್ವೀಟ್​ ಮಾಡುವ ಮೂಲಕ ಖುಷಿ ಹಂಚಿಕೊಂಡಿದೆ. ಇನ್ನು, ‘ಮರಕ್ಕರ್’​ ಚಿತ್ರ ತಂಡ ಕೂಡ ಈ ಬಗ್ಗೆ ಸಂತಸ ಹೊರಹಾಕಿದೆ. ಈ ಸಿನಿಮಾಗಳು ಫಿನಾಲೆ ತಲುಪಿ ಪ್ರಶಸ್ತಿ ಬಾಚಿಕೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಜಾಗತಿಕ ಸಿನಿಮಾ ಲೋಕದಲ್ಲಿ ಆಸ್ಕರ್​   ಪ್ರಶಸ್ತಿಗೆ ಭಾರಿ ಮನ್ನಣೆ ಇದೆ. ಜೀವನದಲ್ಲಿ ಒಮ್ಮೆಯಾದರೂ ಆಸ್ಕರ್​ ಪಡೆಯಬೇಕು ಎಂದು ಕನಸು ಕಾಣುತ್ತಾರೆ ಸಿನಿಮಾ ಮಂದಿ. ಇನ್ನು, ಆಸ್ಕರ್​ ಪ್ರಶಸ್ತಿ (ಅಕಾಡೆಮಿ ಅವಾರ್ಡ್ಸ್​) ಪ್ರದಾನ ಸಮಾರಂಭ ಕೂಡ ವಿಶ್ವ ಮಟ್ಟದಲ್ಲಿ ಗಮನ ಸೆಳೆಯುತ್ತದೆ. ಹಾಲಿವುಡ್​ ಸಿನಿಲೋಕದ ಘಟಾನುಘಟಿ ಕಲಾವಿದರು ಮತ್ತು ತಂತ್ರಜ್ಞರೆಲ್ಲ ಆ ಸಮಾರಂಭದಲ್ಲಿ ಭಾಗಿ ಆಗುತ್ತಾರೆ. 2022ರ ಆಸ್ಕರ್​ ಸಮಾರಂಭದ ಬಗ್ಗೆ ಈಗ ಅನೇಕ ಸುದ್ದಿಗಳು ಹರಿದಾಡುತ್ತಿವೆ. ಪ್ರತಿ ಬಾರಿಯೂ ಈ ಕಾರ್ಯಕ್ರವನ್ನು ಯಾರು ನಿರೂಪಣೆ ಮಾಡುತ್ತಾರೆ ಎಂಬುದು ಕೂಡ ಬಹುಮುಖ್ಯವಾಗುತ್ತದೆ. ಈ ವರ್ಷ ಪಾಪ್​ ಗಾಯಕಿ ಸೆಲೆನಾ ಗೊಮೆಜ್​​ ಹೆಸರು ಕೇಳಿಬರುತ್ತಿದೆ. ಆದರೆ ಅದನ್ನೂ ಅಧಿಕೃತವಾಗಿಲ್ಲ. ಅದರ ಜೊತೆ ‘ಸ್ಪೈಡರ್​ ಮ್ಯಾನ್​’ ಖ್ಯಾತಿಯ ನಟ ಟಾಮ್​ ಹಾಲೆಂಡ್​ ಸಹ ಈ ಬಾರಿ ನಿರೂಪಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಸಿನಿಮೀಯ ಶೈಲಿಯಲ್ಲಿ ಭೀಕರ ರಸ್ತೆ ಅಪಘಾತ; ಖ್ಯಾತ​ ನಟ ಬಚಾವ್​, ವೈರಲ್​ ಆಯ್ತು ಫೋಟೋ

 Sidney Poitier: ಅತ್ಯುತ್ತಮ ನಟನೆಗಾಗಿ ಆಸ್ಕರ್​ ಪಡೆದ ಮೊದಲ ಕಪ್ಪು ವರ್ಣೀಯ ಕಲಾವಿದ ಸಿಡ್ನಿ ಪೊಯ್ಟಿಯರ್ ನಿಧನ