Sidney Poitier: ಅತ್ಯುತ್ತಮ ನಟನೆಗಾಗಿ ಆಸ್ಕರ್​ ಪಡೆದ ಮೊದಲ ಕಪ್ಪು ವರ್ಣೀಯ ಕಲಾವಿದ ಸಿಡ್ನಿ ಪೊಯ್ಟಿಯರ್ ನಿಧನ

Sidney Poitier Passes Away: ಸಿಡ್ನಿ ಪೊಯ್ಟಿಯರ್ ತಮ್ಮ ಪಾತ್ರಪೋಷಣೆಗೆ ಹೆಸರಾಗಿದ್ದವರು. ಮುಖ್ಯವಾಹಿನಿಯ ಚಿತ್ರಗಳಲ್ಲಿ ಕಾಣಿಸಿಕೊಂಡ ಅವರು  ಪ್ರಮುಖ ಪಾತ್ರಗಳಲ್ಲಿ ನಟಿಸಿ ಆ ಕಾಲದಲ್ಲಿ ಎಲ್ಲರಿಂದ ಮೆಚ್ಚುಗೆ ಪಡೆದ ಕಪ್ಪು ವರ್ಣದ ಕೆಲವೇ ನಟರಲ್ಲಿ ಒಬ್ಬರಾಗಿದ್ದರು.

Sidney Poitier: ಅತ್ಯುತ್ತಮ ನಟನೆಗಾಗಿ ಆಸ್ಕರ್​ ಪಡೆದ ಮೊದಲ ಕಪ್ಪು ವರ್ಣೀಯ ಕಲಾವಿದ ಸಿಡ್ನಿ ಪೊಯ್ಟಿಯರ್ ನಿಧನ
ಸಿಡ್ನಿ ಪಾಯ್ಟಿಯರ್
Follow us
TV9 Web
| Updated By: shivaprasad.hs

Updated on:Jan 08, 2022 | 11:12 AM

‘ಲಿಲೀಸ್ ಆಫ್ ದಿ ಫೀಲ್ಡ್‌’ ಚಿತ್ರದ ಪಾತ್ರ ನಿರ್ವಹಣೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಸಿಡ್ನಿ ಪೊಯ್ಟಿಯರ್ ನಿಧನರಾಗಿದ್ದಾರೆ. ಜನಾಂಗೀಯ ಅಡೆತಡೆಗಳನ್ನು ಮೆಟ್ಟಿನಿಂತು ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಕಪ್ಪು ವರ್ಣೀಯ ಕಲಾವಿದ ಸಿಡ್ನಿ ಪೊಯ್ಟಿಯರ್. ನಾಗರಿಕ ಹಕ್ಕುಗಳ ಚಳವಳಿಯ ಸಮಯದಲ್ಲಿ ಒಂದು ಪೀಳಿಗೆಗೆ ಸ್ಫೂರ್ತಿ ನೀಡಿದ ಕಲಾವಿದರೂ ಅವರಾಗಿದ್ದರು. ಅವರ ನಿಧನದ ಕುರಿತು ಬಹಮಿಯನ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ಮಾಹಿತಿ ನೀಡಿದೆ. ಪೊಯ್ಟಿಯರ್​ಗೆ 94 ವರ್ಷ ವಯಸ್ಸಾಗಿತ್ತು. ಅಮೇರಿಕಾದ ಹೆಚ್ಚಿನ ಭಾಗಗಳಲ್ಲಿ ಪ್ರತ್ಯೇಕತೆಯು ಚಾಲ್ತಿಯಲ್ಲಿದ್ದ ಸಮಯದಲ್ಲಿ ಪೊಯ್ಟಿಯರ್ ತಮ್ಮ ಮೂರು ಚಲನಚಿತ್ರಗಳೊಂದಿಗೆ ಒಂದೇ ವರ್ಷದಲ್ಲಿ ವಿಶಿಷ್ಟವಾದ ಸಿನಿಮಾ ಪರಂಪರೆಗೆ ನಾಂದಿಹಾಡಿದರು.

‘ಗೆಸ್ ಹು ಈಸ್ ಕಮಿಂಗ್ ಟು ಡಿನ್ನರ್‌’, ‘ಹೀಟ್ ಆಫ್ ದಿ ನೈಟ್‌’, ‘ಟು ಸರ್, ವಿತ್ ಲವ್’ ಚಿತ್ರಗಳು ಜನಾಂಗೀಯವಾದದ ಕುರಿತು ಬೆಳಕು ಚೆಲ್ಲಿದ್ದವು. 1963 ರಲ್ಲಿ ‘ಲಿಲೀಸ್ ಆಫ್ ದಿ ಫೀಲ್ಡ್’ ಚಿತ್ರದ ನಟನೆಗಾಗಿ ಪೊಯ್ಟಿಯರ್ ಆಸ್ಕರ್ ಪಡೆದು ಇತಿಹಾಸ ನಿರ್ಮಿಸಿದರು. ಆ ಚಿತ್ರದಲ್ಲಿ ಜರ್ಮನ್ ಸನ್ಯಾಸಿನಿಯರು ಮರುಭೂಮಿಯಲ್ಲಿ ಪ್ರಾರ್ಥನಾ ಮಂದಿರವನ್ನು ನಿರ್ಮಿಸಲು ಸಹಾಯ ಮಾಡುವ ಸಹಾಯಕನ ಪಾತ್ರದಲ್ಲಿ ಪೊಯ್ಟಿಯರ್ ನಟಿಸಿದ್ದರು.

ಸಿಡ್ನಿ ಪೊಯ್ಟಿಯರ್ ಮಿಯಾಮಿಯಲ್ಲಿ 1927ರ ಫೆಬ್ರವರಿ 20ರಂದು ಜನಿಸಿದರು. ಬಹಾಮಾಸ್​ನ ಟೊಮೆಟೊ ಫಾರ್ಮ್​ನಲ್ಲಿ ಬೆಳೆದರು. ಕೇವಲ ಒಂದು ವರ್ಷದ ಔಪಚಾರಿಕ ಶಾಲಾ ಶಿಕ್ಷಣವನ್ನು ಹೊಂದಿದ್ದ ಪೊಯ್ಟಿಯರ್, ನಂತರ ಬಡತನ, ಅನಕ್ಷರತೆ ಮತ್ತು ಪೂರ್ವಾಗ್ರಹದ ವಿರುದ್ಧ ಹೋರಾಡಿದರು. ನಂತರದಲ್ಲಿ ಮುಖ್ಯವಾಹಿನಿಯ ಚಿತ್ರಗಳಲ್ಲಿ ಕಾಣಿಸಿಕೊಂಡ ಅವರು  ಪ್ರಮುಖ ಪಾತ್ರಗಳಲ್ಲಿ ನಟಿಸಿ ಆ ಕಾಲದಲ್ಲಿ ಮೆಚ್ಚುಗೆ ಪಡೆದ ಕಪ್ಪು ವರ್ಣದ ಕೆಲವೇ ನಟರಲ್ಲಿ ಒಬ್ಬರಾಗಿದ್ದರು.

2009 ರಲ್ಲಿ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾರಿಂದ ಪೊಯ್ಟಿಯರ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ‘ಪ್ರೆಸಿಡೆನ್ಶಿಯಲ್ ಮೆಡಲ್ ಆಫ್ ಫ್ರೀಡಮ್’ ಪ್ರದಾನ ಮಾಡಲಾಗಿತ್ತು. ಪೊಯ್ಟಿಯರ್ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ.

ಇದನ್ನೂ ಓದಿ:

Vaishaliyaana : ವೈಶಾಲಿಯಾನ : ಮೂರನೇ ಅಲೆಯ ಹೊತ್ತಿನಲ್ಲಿ ನೆನಪಾಗುತ್ತಿರುವ ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳು

Yash Birthday: ಯಶ್​ ಜನ್ಮದಿನಕ್ಕೆ ಆಯ್ರಾ, ಯಥರ್ವ್​ ಕೊಟ್ಟ ಗಿಫ್ಟ್​ ಏನು? ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್​

Published On - 11:06 am, Sat, 8 January 22

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್