ಆಸ್ಕರ್​ ಸಮಾರಂಭ ನಿರೂಪಣೆ ಮಾಡ್ತಾರಾ ಸೆಲೆನಾ ಗೊಮೆಜ್​? ಕೇಳಿಬರ್ತಿವೆ ಹಲವರ ಹೆಸರು​

Academy Awards 2022: ಸೆಲೆನಾ ಗೊಮೆಜ್​ ಜೊತೆಗೆ ಸ್ಟೀವ್​ ಮಾರ್ಟಿನ್​, ಮಾರ್ಟಿನ್​ ಶಾರ್ಟ್​ ಕೂಡ ನಿರೂಪಣೆ ಮಾಡಬಹುದು ಎಂಬ ಗುಮಾನಿ ಇದೆ. ಈಗಾಗಲೇ ಮೂರು ಬಾರಿ ನಿರೂಪಣೆ ಮಾಡಿದ ಅನುಭವವನ್ನು ಸ್ಟೀವ್​ ಮಾರ್ಟಿನ್​ ಹೊಂದಿದ್ದಾರೆ.

ಆಸ್ಕರ್​ ಸಮಾರಂಭ ನಿರೂಪಣೆ ಮಾಡ್ತಾರಾ ಸೆಲೆನಾ ಗೊಮೆಜ್​? ಕೇಳಿಬರ್ತಿವೆ ಹಲವರ ಹೆಸರು​
ಸ್ಟೀವ್​ ಮಾರ್ಟಿನ್​, ಸೆಲೆನಾ ಗೊಮೆಜ್​, ಮಾರ್ಟಿನ್​ ಶಾರ್ಟ್​
Follow us
TV9 Web
| Updated By: ಮದನ್​ ಕುಮಾರ್​

Updated on: Jan 16, 2022 | 2:36 PM

ಜಾಗತಿಕ ಸಿನಿಮಾ ಲೋಕದಲ್ಲಿ ಆಸ್ಕರ್​ (Oscar Awards) ಪ್ರಶಸ್ತಿಗೆ ಭಾರಿ ಮನ್ನಣೆ ಇದೆ. ಜೀವನದಲ್ಲಿ ಒಮ್ಮೆಯಾದರೂ ಆಸ್ಕರ್​ ಪಡೆಯಬೇಕು ಎಂದು ಕನಸು ಕಾಣುತ್ತಾರೆ ಸಿನಿಮಾ ಮಂದಿ. ಇನ್ನು, ಆಸ್ಕರ್​ ಪ್ರಶಸ್ತಿ (ಅಕಾಡೆಮಿ ಅವಾರ್ಡ್ಸ್​) ಪ್ರದಾನ ಸಮಾರಂಭ ಕೂಡ ವಿಶ್ವ ಮಟ್ಟದಲ್ಲಿ ಗಮನ ಸೆಳೆಯುತ್ತದೆ. ಹಾಲಿವುಡ್​ ಸಿನಿಲೋಕದ ಘಟಾನುಘಟಿ ಕಲಾವಿದರು ಮತ್ತು ತಂತ್ರಜ್ಞರೆಲ್ಲ ಆ ಸಮಾರಂಭದಲ್ಲಿ ಭಾಗಿ ಆಗುತ್ತಾರೆ. 2022ರ ಆಸ್ಕರ್​ (Academy Awards 2022) ಸಮಾರಂಭದ ಬಗ್ಗೆ ಈಗ ಅನೇಕ ಸುದ್ದಿಗಳು ಹರಿದಾಡುತ್ತಿವೆ. ಪ್ರತಿ ಬಾರಿಯೂ ಈ ಕಾರ್ಯಕ್ರವನ್ನು ಯಾರು ನಿರೂಪಣೆ ಮಾಡುತ್ತಾರೆ ಎಂಬುದು ಕೂಡ ಬಹುಮುಖ್ಯವಾಗುತ್ತದೆ. ಈ ವರ್ಷ ಪಾಪ್​ ಗಾಯಕಿ ಸೆಲೆನಾ ಗೊಮೆಜ್​​ (Selena Gomez) ಹೆಸರು ಕೇಳಿಬರುತ್ತಿದೆ. ಆದರೆ ಅದನ್ನೂ ಅಧಿಕೃತವಾಗಿಲ್ಲ. ಅದರ ಜೊತೆ ‘ಸ್ಪೈಡರ್​ ಮ್ಯಾನ್​’ ಖ್ಯಾತಿಯ ನಟ ಟಾಮ್​ ಹಾಲೆಂಡ್​ ಸಹ ಈ ಬಾರಿ ನಿರೂಪಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಕಳೆದ ಕೆಲವು ವರ್ಷಗಳಿಂದ ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭದ ರೂಪುರೇಷೆ ಬದಲಾಗಿದೆ. ಕೊರೊನಾ ಹಾವಳಿಯಿಂದಾಗಿ ಅನೇಕ ಮಾರ್ಪಾಡುಗಳನ್ನು ಮಾಡಿಕೊಳ್ಳಲಾಗಿದೆ. ಕಳೆದ ಮೂರು ವರ್ಷದಿಂದ ನಿರೂಪಕರು ಇಲ್ಲದೆಯೇ ಸಮಾರಂಭ ನಡೆದು ಬಂದಿದೆ. ಈ ವರ್ಷ ಮತ್ತೆ ವೇದಿಕೆ ಮೇಲೆ ನಿರೂಪಕರು ಇರಲಿದ್ದಾರೆ ಎನ್ನಲಾಗಿದೆ. ಹಾಗಾದರೆ ಈ ಬಾರಿ ನಿರೂಪಣೆ ಮಾಡುವ ಅವಕಾಶ ಯಾರಿಗೆ ಸಿಗಲಿದೆ ಎಂಬ ಕೌತುಕ ನಿರ್ಮಾಣ ಆಗಿದೆ.

ಅಮೆರಿಕದ ಖ್ಯಾತ ಹಾಸ್ಯ ನಟ ಪೀಟ್​ ಡೇವಿಡ್​ಸನ್​ ಕೂಡ ಈ ಬಾರಿಯ ಆಸ್ಕರ್​ ವೇದಿಕೆಯಲ್ಲಿ ನಿರೂಪಣೆ ಮಾಡಬಹುದು ಎಂಬ ಗಾಸಿಪ್​ ಹರಿದಾಡಿತ್ತು. ಆದರೆ ಡೇಟ್ಸ್​ ಸಮಸ್ಯೆ ಮತ್ತು ಇತರೆ ಪ್ರೊಡಕ್ಷನ್​ ಕಂಪನಿಗಳ ಜೊತೆ ಈಗಾಗಲೇ ಮಾಡಿಕೊಂಡಿರುವ ಒಪ್ಪಂದಗಳ ಕಾರಣದಿಂದಾಗಿ ಅವರು ಕೂಡ ನಿರೂಪಣೆ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿವೆ ಮೂಲಗಳು. ಹಾಗಾಗಿ ಸೆಲೆನಾ ಗೊಮೆಜ್​ ಜೊತೆಗೆ ಹಿರಿಯ ಕಲಾವಿದರಾದ ಸ್ಟೀವ್​ ಮಾರ್ಟಿನ್​, ಮಾರ್ಟಿನ್​ ಶಾರ್ಟ್​ ಕೂಡ ನಿರೂಪಣೆ ಮಾಡಬಹುದು ಎಂಬ ಗುಮಾನಿ ಬಲವಾಗಿದೆ. ಈ ಮೂವರು ‘ಓನ್ಲಿ ಮರ್ಡರ್ಸ್​ ಇನ್​ ದ ಬಿಲ್ಡಿಂಗ್​’ ವೆಬ್​ ಸಿರೀಸ್​ನಲ್ಲಿ ಒಟ್ಟಿಗೆ ನಟಿಸಿದ್ದರು. ಆ ಜನಪ್ರಿಯತೆಯ ಕಾರಣದಿಂದ ಈ ಮೂವರಿಗೆ ಆಸ್ಕರ್​ ಸಮಾರಂಭವನ್ನು ನಿರೂಪಣೆ ಮಾಡಲು ಅವಕಾಶ ನೀಡಬಹುದು ಎಂದು ಅಂದಾಜಿಸಲಾಗುತ್ತಿದೆ.

‘ಈ ಮೂವರಿಗೆ ಭಾರಿ ಜನಪ್ರಿಯತೆ ಇದೆ. ಯಾರು ನಿರೂಪಣೆ ಮಾಡಬೇಕು ಎಂಬ ಕುರಿತು ನಾವಿನ್ನೂ ಚರ್ಚೆ ನಡೆಸುತ್ತಿದ್ದೇವೆ’ ಎಂದು ಆಸ್ಕರ್​ ಸಮಾರಂಭದ ಆಯೋಜಕರು ಹೇಳಿಕೆ ನೀಡಿದ್ದಾರೆ. ಈಗಾಗಲೇ ಮೂರು ಬಾರಿ ಆಸ್ಕರ್​ ಸಮಾರಂಭದಲ್ಲಿ ನಿರೂಪಣೆ ಮಾಡಿದ ಅನುಭವವನ್ನು ಸ್ಟೀವ್​ ಮಾರ್ಟಿನ್​ ಹೊಂದಿದ್ದಾರೆ.

ಇದನ್ನೂ ಓದಿ:

Sidney Poitier: ಅತ್ಯುತ್ತಮ ನಟನೆಗಾಗಿ ಆಸ್ಕರ್​ ಪಡೆದ ಮೊದಲ ಕಪ್ಪು ವರ್ಣೀಯ ಕಲಾವಿದ ಸಿಡ್ನಿ ಪೊಯ್ಟಿಯರ್ ನಿಧನ

Sardar Udham: ಬ್ರಿಟಿಷರ ಮೇಲೆ ದ್ವೇಷ ತೋರಿಸಲಾಗಿದೆ ಎಂದು ಆಸ್ಕರ್​ಗೆ ಆಯ್ಕೆಯಾಗದ ‘ಸರ್ದಾರ್ ಉಧಮ್’; ನಿರ್ದೇಶಕರ ಪ್ರತಿಕ್ರಿಯೆ ಏನು?

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು