ಮುಂಬೈ ಏರ್​ಪೋರ್ಟ್​ನಲ್ಲಿ ಹಸಿರು ಪೈಜಾಮಾ ಧರಿಸಿ ಮಿಂಚಿದ ಕತ್ರಿನಾ; ಅದರ ಬೆಲೆ ಕೇಳಿ ದಂಗಾದ ಫ್ಯಾಶನ್ ಪ್ರಿಯರು

Katrina Kaif: ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಫ್ಯಾಶನ್ ವಿಚಾರದಲ್ಲಿ ಹೆಚ್ಚಿನ ಜನರ ಗಮನ ಸೆಳೆಯುತ್ತಾರೆ. ಇತ್ತೀಚೆಗೆ ಅವರು ಧರಿಸಿದ್ದ ಉಡುಪಿನ ಬೆಲೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

TV9kannada Web Team

| Edited By: shivaprasad.hs

Jan 23, 2022 | 3:52 PM

ಸೆಲೆಬ್ರಿಟಿಗಳು ಅಂದ್ರೆ ದುಬಾರಿ ಮತ್ತು ಬ್ರ್ಯಾಂಡೆಡ್ ಬಟ್ಟೆಗಳನ್ನ ಧರಿಸೋದಕ್ಕೆ ಹೆಸರುವಾಸಿ. ಅದೇ ರೀತಿ ಟ್ರೆಂಡಿ ಔಟ್​ಫಿಟ್ಸ್ ಧರಿಸೋದು ಅವರ ವೃತ್ತಿ ಜೀವನಕ್ಕೆ ಅನಿವಾರ್ಯ ಕೂಡ. ಈ ವಿಚಾರದಲ್ಲಿ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಸಖತ್ ಸುದ್ದಿ ಮಾಡುತ್ತಾರೆ. ಇತ್ತೀಚೆಗೆ ಅವರು ಏರ್​ಪೋರ್ಟ್​ಗೆ ಧರಿಸಿದ ಬಂದ ಹಸಿರು ಪೈಜಾಮಾದ ಬೆಲೆ ಕೇಳಿ ಜನಸಾಮಾನ್ಯರಿಗೆ ಶಾಕ್ ಆಗಿದೆ.

ಇತ್ತೀಚೆಗೆ ಕತ್ರಿನಾ ಮುಂಬೈ ಏರ್​ಪೋರ್ಟ್​ಗೆ ವಿಕ್ಟೋರಿಯಾ ಬೇಕಮ್​ ಲೇಬಲ್ ಇರುವ ಹಸಿರು ಬಣ್ಣದ ಪೈಜಾಮಾ ಧರಿಸಿ ಬಂದಿದ್ದರು. ಇದು ಫ್ಯಾಶನ್ ಪ್ರಿಯರ ಗಮನಸೆಳೆದಿತ್ತು. ಇದೀಗ ಅದರ ಬೆಲೆಯಿಂದ ಮತ್ತೆ ಕತ್ರಿನಾ ಸುದ್ದಿಯಾಗಿದ್ದಾರೆ. ಕತ್ರಿನಾ ಧರಿಸಿದ್ದ ಪೈಜಾಮಾದ ಒಟ್ಟು ಬೆಲೆ ಬರೋಬ್ಬರಿ 1,07,600 ರೂಗಳು. ಇದನ್ನು ಗಮನಿಸಿದ ಫ್ಯಾಶನ್ ಪ್ರಿಯರು ಹುಬ್ಬೇರಿಸಿದ್ದಾರೆ.

ಇದನ್ನೂ ಓದಿ:

ರಶ್ಮಿಕಾ ಮಂದಣ್ಣ ತೊಟ್ಟ ಈ ಸೀರೆಯ ಬೆಲೆಯನ್ನು ಊಹಿಸ್ತೀರಾ? ಅಬ್ಬಾಬ್ಬಾ ಇಷ್ಟೊಂದು ದುಬಾರಿಯಾ?

ವಿಚ್ಛೇದನದ ಬಳಿಕವೂ ಒಂದೇ ಹೋಟೆಲ್​ನಲ್ಲಿ ಉಳಿದುಕೊಳ್ಳುತ್ತಿದ್ದಾರೆ ಧನುಷ್​-ಐಶ್ವರ್ಯಾ?

Follow us on

Click on your DTH Provider to Add TV9 Kannada